ಜೋಕ್ಸ್: ಬೀಡಿ ಸೇದದ, ಹೆಂಡ ಕುಡಿಯದ ಹಸು
ಹೀಗೊಂದು ಜಾಹೀರಾತು: ಬೀಡಿ ಸೇದದ, ಹೆಂಡ ಕುಡಿಯದ ಹಸು ನೋಡಿಕೊಳ್ಳುವವರು ಬೇಕಾಗಿದ್ದಾರೆ.
*****
ನಾಯಿ ಜೋಕು
''ಇದು ಯಾವ ನಾಯಿ?''
''ಪೊಲೀಸ್ ನಾಯಿ''
''ಹಾಗೆ ಕಾಣಿಸುವುದಿಲ್ಲವಲ್ಲಾ?''
''ಹೌದು... ಇದು ಸಿಒಡಿಯಲ್ಲಿದೆ''
****
ಹೀಗೊಂದು ಸಿನಿಮಾ ಕಥೆ
ನಾಯಕ ನಾಯಕಿಯನ್ನು ಪ್ರೀತಿಸುತ್ತಾನೆ. ಆದರೆ ನಾಯಕಿ ಖಳನಾಯಕನನ್ನು ಪ್ರೀತಿಸುತ್ತಾಳೆ. ಆದರೆ ನಾಯಕನ ತಮ್ಮ ನಾಯಕಿಯ ಚಿಕ್ಕಮ್ಮನನ್ನು ಪ್ರೀತಿಸುತ್ತಾಳೆ, ಆದರೆ ಚಿಕ್ಕಮ್ಮ ನಾಯಕನ ಚಿಕ್ಕಪ್ಪನನ್ನು ಪ್ರೀತಿಸುತ್ತಾಳೆ. ಕಟ್ಟಕಡೆಗೆ ಇಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅವರು ಯಾರು?
ನಿರ್ಮಾಪಕ ಹಾಗೂ ಪ್ರೇಕ್ಷಕ!
(ದಟ್ಸ್ ಕನ್ನಡ ಜೋಕ್ಸ್)












Click it and Unblock the Notifications