ಕಸ್ತೂರಿಯಲ್ಲ; ಇದು ಮೇನಕೆ ಮೇಡಂ ಅನರ್ಥ ಕೋಶಂ!
ಆಕಳಿಕೆ : ಹೆಂಡತಿ ಮುಂದೆ ಗಂಡ ಬಾಯಿ ತೆರೆಯಬಹುದಾದ ಏಕೈಕ ಅವಕಾಶ.
ಜೀವವಿಮೆ : ಜೀವನವಿಡೀ ನಿಮ್ಮನ್ನು ಬಡವರನ್ನಾಗಿಯೇ ಉಳಿಸಿ, ಸಾಯುವ ವೇಳೆಗೆ ಶ್ರೀಮಂತರನ್ನಾಗಿಸುವ ಒಪ್ಪಂದ.
ನರ್ಸ್ : ನೀವು ಮಲಗಿದ್ದಾಗ ಎಬ್ಬಿಸಿ, ನಿದ್ರೆ ಮಾತ್ರೆ ತೆಗೆದುಕೊಳ್ಳುವಂತೆ ಜ್ಞಾಪಿಸುವ ಹೆಂಗಸು.
ವಿಚ್ಛೇದನೆ : ಮದುವೆ ಪದದ ಭವಿಷ್ಯತೆ ಕಾಲ.
ಪ್ರಾಧ್ಯಾಪಕ : ಎಲ್ಲೂ ಮೆದುಳುಗಳ ಬಳಕೆಯಾಗದಂತೆ ಮಾಹಿತಿಗಳನ್ನು ತಮ್ಮ ನೋಟ್ಸ್ ನಿಂದ ವಿದ್ಯಾರ್ಥಿಗಳ ನೋಟ್ಸ್ ಗೆ ವರ್ಗಾಯಿಸುವ ಕಲೆಯನ್ನು ಬಲ್ಲವನು.
ಅಪ್ಪ : ಪ್ರತಿಯೊಬ್ಬರಿಗೂ ನಿಸರ್ಗವೇ ಒದಗಿಸಿರುವ ಬ್ಯಾಂಕರ್
ಕಚೇರಿ : ಮನೆಯ ಕೆಲಸಗಳಿಂದ ದಣಿವಾರಿಸಿ ಕೊಳ್ಳಲು ಇರುವ ಸ್ಥಳ.
ಆಟಂ ಬಾಂಬ್ : ಜಗತ್ತಿನ ಎಲ್ಲ ಸಂಶೋಧನೆಗಳನ್ನು ಒಮ್ಮೆಲೆ ನಾಶಮಾಡಬಹುದಾದ ಸಂಶೋಧನೆ.
ಶಿಕ್ಷಕ : ಕೋಣೆಯಲ್ಲಿ ಎಲ್ಲರೂ ಮಲಗಿರುವಾಗ ಮಾತನಾಡುವ ಅಭ್ಯಾಸವುಳ್ಳವನು.
ಗಂಡಸರು : ಹೆಲ್ಮೆಟ್ ಇದ್ದ ಹಾಗೆ. ಕೆಲವು ತುರ್ತು ಸಂದರ್ಭಗಳಲ್ಲಿ ಅತ್ಯಗತ್ಯ. ಉಳಿದಂತೆ ವ್ಯರ್ಥ ಭಾರ.












Click it and Unblock the Notifications