ಕುಮಾರನಿಗೆ ಅವ್ರು ಡ್ಯಾಡಿ ರಾಜಕೀಯ ವಿವರಿಸಿದ್ದು

'ಡ್ಯಾಡಿ ಡ್ಯಾಡಿ ರಾಜಕೀಯ ಅಂದ್ರೆ ಏನ್ ಡ್ಯಾಡಿ ?' ಇದು ಕುಮಾರನ ಪ್ರಶ್ನೆ. ಅವರಪ್ಪ 'ಎಲ್ಲ ಸಿಂಪಲ್ ಕಣೋ ತಲೇನೇ ಕೆಡಿಸ್ಕೊ ಬೇಡ. ಬಾ ಇಲ್ಲಿ ಕೂತ್ಕೋ' ಎಂದವನೇ, 'ನೋಡು ನಾನು ಮುಖ್ಯಮಂತ್ರಿ ಇದ್ದಂತೆ, ನಿಮ್ಮ ತಾಯಿ ಇದ್ದಾಳಲ್ಲ ಅವಳು ಒಂದು ರೀತಿ ಸರಕಾರ ಅಂತ ತಿಳ್ಕೊ, ಇನ್ನು ನಿನ್ನ ಯೋಗಕ್ಷೇಮ ನೋಡಿಕೊಳ್ಳಬೇಕಲ್ಲ ನೀನು ಪ್ರಜೆ. ಆ ಕೆಲಸದವಳಿದ್ದಾಳಲ್ಲ ಅವಳು ಆಡಳಿತ ಇದ್ದಂತೆ. ನಿನ್ನ ಪುಟ್ಟ ತಮ್ಮ ಸರ್ಕಾರದ ಮುಂದಿನ ಯೋಜನೆಗಳಿದ್ದಂತೆ. ಗೊತ್ತಾಯ್ತ. ಇದೆಲ್ಲಾ ನಿನಗೆ ಅರ್ಥ ಆಗ್ಬೇಕು ಅಂದ್ರೆ ನಾನೇಳಿದ್ದನ್ನು ಸ್ವಲ್ಪ ಯೋಚಿಸು.'

ಏನೂ ಅರ್ಥವಾಗದ ಮಗರಾಯ ತಲೆಕೆರೆದುಕೊಂಡು ಹೋಗಿ ಹಾಗೇ ನಿದ್ದೆಗೆ ಜಾರಿದ. ಅಪರಾತ್ರಿಯಲ್ಲಿ ಅವನಿಗೆ ಎಚ್ಚರವಾಯಿತು. ಅವನ ಪುಟ್ಟ ತಮ್ಮ ಅಳುತ್ತಿರುವ ಧ್ವನಿ ಕೇಳಿ ಹೋಗಿ ನೋಡುತ್ತಾನೆ. ಮಗು ಬಟ್ಟೆಯನ್ನೆಲ್ಲಾ ಒದ್ದೆ ಮಾಡಿಕೊಂಡಿರುತ್ತದೆ. ಸರಿ ತಾಯಿಯನ್ನು ಎಬ್ಬಿಸಲು ಆಕೆಯ ರೂಮಿಗೆ ಹೋಗುತ್ತಾನೆ. ಆಕೆ ಗಾಢ ನಿದ್ದೆಯಲ್ಲಿರುವುದನ್ನು ಕಂಡು ಎಬ್ಬಿಸಲು ಮನಸು ಬಾರದೆ ಸೀದಾ ಕೆಲಸದವಳ ರೂಮಿನ ಕಡೆಗೆ ಹೆಜ್ಜೆಹಾಕುತ್ತಾನೆ. ರೂಮಿನ ಚಿಲಕ ಹಾಕಿಕೊಂಡಿರುವುದನ್ನು ಕಂಡು ಕಿಂಡಿಯಲ್ಲಿ ಇಣುಕಿ ನೋಡುತ್ತಾನೆ. ಡ್ಯಾಡಿ ಕೆಲಸದವಳ ಜೊತೆ ಮಲಗಿರುವುದನ್ನು ಕಂಡು ಏನೂ ಅರ್ಥವಾಗದೆ ಬಂದು ಮಲಗುತ್ತಾನೆ.

ಬೆಳಗ್ಗೆ ಎದ್ದವನೇ ಡ್ಯಾಡಿ ಬಳಿಗೆ ಓಡಿ 'ರಾಜಕೀಯ ಅಂದ್ರೆ ನನಗೆ ಅರ್ಥ ಆಯ್ತು' ಅಂತಾನೆ. ಅವನು ಹೇಳಿದ್ದು ಹೀಗೆ ;'ಸರ್ಕಾರ ಗಾಢ ನಿದ್ದೆಯಲ್ಲಿದ್ದಾಗ ಮುಖ್ಯಮಂತ್ರಿಗಳು ಕೆಲಸದವರೊಂದಿಗೆ ವಾಸ್ತವ್ಯ ಮಾಡಿದರೆ ಯೋಜನೆಗಳು ನೆನೆಗುದಿಗೆ ಬಿದ್ದು, ಪ್ರಜೆಗಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತಾರೆ'.

ಮಗನ ಜೋಕ್‌ಗೆ ನಗಬೇಕೋ, ಅಳಬೇಕೋ ತಂದೆಗೆ ಅರ್ಥವಾಗಲಿಲ್ಲ.

(ದಟ್ಸ್‌ ಕನ್ನಡ ಜೋಕ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+