ಅನಿಸುತಿದೆ ಯಾಕೋ ಇಂದು ಕ್ರಿಕೆಟ್ಟೇ ಮೋಸವೆಂದು..


A mock song on Indian Cricket flop show in World Cupಎಸ್‌ಎಂಎಸ್‌ಗಳಲ್ಲಿ, ಇ-ಮೇಲ್‌ಗಳಲ್ಲಿ ಭಾರತೀಯ ಕ್ರಿಕೆಟ್‌ ತಂಡವನ್ನು ಕುರಿತ ಜೋಕುಗಳು, ಪದ್ಯಗಳು, ಅಣಕಗಳು, ಚಿತ್ರಗಳು ಈಗಂತೂ ಹೆಚ್ಚು ಹೆಚ್ಚು ಸುಳಿದಾಡುತ್ತಿವೆ. ‘ಮುಂಗಾರು ಮಳೆ’ ಸಿನಿಮಾ ಹಾಡಿನ ಶೈಲಿಯಲ್ಲಿ ಕೆಳಕಂಡ ಅಣಕ ಪದ್ಯವನ್ನು ಬರೆದವರು ಯಾರೆಂಬುದು ನಮಗೆ ಗೊತ್ತಿಲ್ಲ. ಒಬ್ಬರಿಂದ ಒಬ್ಬರಿಗೆ ಫಾರ್ವರ್ಡ್‌ ಆಗುತ್ತಿರುವ ಈ ಪದ್ಯವನ್ನು ಅನೇಕ ಓದು-ಗರು ದಟ್ಸ್‌ ಕನ್ನಡಕ್ಕೆ ಕಳುಹಿಸಿದ್ದಾರೆ. ಎಲ್ಲ-ರಿಗೂ ಥ್ಯಾಂಕ್ಸ್‌.

t;br/>ಬುಕ್ಕಿಯ ಲೋಕದಿಂದ ಬರುತಿವೆ ಆರ್ಡರ್ಸ್‌ ಎಂದು
ಆಹಾ ಎಂಥ ಮೋಸ ವಂಚನೆ
ಆಡು ಟೀಮೆ ಒಮ್ಮೆ ಆದ್ರು... ಹಾಗೆ ಸುಮ್ಮನೇ

ಆಡುವ ಆಟಕೆ ಬೆರೆತಿದೆ ದುಡ್ಡಿನ ಪರಿಮಳ
ನನಗಂತೂ ಕನಸಲು ಕೇವಲ ಅದರದೆ ತಳಮಳ
ದಿನ ಪೂರ್ತಿ ರಜಾ ಹಾಕಿದ
ಇಂಡಿಯ ಮ್ಯಾಚು ಅಂದ ಕ್ಷಣ
ನಾ ಖೈದಿ ಆಟ ಸೆರೆಮನೆ
ಒಪ್ಪಿ ಒಮ್ಮೆ ಆಡ್ರೋ.. ಹಾಗೆ ಸುಮ್ಮನೇ

ಪಿಚ್ಚುಗಳ ಗ್ರೀನ್ಸಲಿ ಆಡದ ಮ್ಯಾಚಿನ ಕಹಿ ಇದೆ
ಮನಸಿನ ಪುಟದಲಿ ಸೋತ ಮ್ಯಾಚಿನ ನೋವಿದೆ
ಬುಕ್ಕಿಗಳು ಬರೆದ ನಿಮ್ಮ ಸೋಲ,
ಹೃದಯದಿ ನಾನು ಕೊರೆದಿರುವೆ
ನಿಮಗುಂಟೆ ಇದರ ಕಲ್ಪನೆ
ಒಮ್ಮೆಯಾದ್ರು ಗೆಲ್ರೋ ನೀವು.. ಹಾಗೆ ಸುಮ್ಮನೇ

ಅರಳುತಿರು ಕ್ರಿಕೆಟ್‌ ಗೆಳೆಯ, ಆಟದ ಸಿಂಚನದಲ್ಲಿ
ಲೋಕಲ್‌ ಮ್ಯಾಚಸ್‌ ನೋಡು, ಆಡದ ಸ್ಪಿರೀಟ್‌ನಲ್ಲಿ
ಮನಸಲಿ ಇರಲಿ ಭಾವನೆ
ನಡೆಯುತಿರಲಿ ಒಳ್ಳೆ ಕ್ರಿಕೆಟ್‌... ಹಾಗೆ ಸುಮ್ಮನೇ.

ಹಾಡಿನ ಅಸಲಿರೂಪಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+