ನಮ್ ಮುಖ್ಯಮಂತ್ರಿ 3ನೇ ಕ್ಲಾಸ್ ಓದಿದ್ದಾರಾ?
ಮೋಹನ : ನಮ್ಮ ಮುಖ್ಯಮಂತ್ರಿ 3ನೇ ಕ್ಲಾಸಲ್ಲಿದ್ದಾಗಲೇ ಇಸ್ಪೀಟ್ ಆಡ್ತಾಯಿದ್ದರಂತೆ. ಈ ವಿಷ್ಯಾ ನಂಬೋದಕ್ಕೆ ಆಗ್ತಾ ಇಲ್ಲ..?
ವಿಶ್ವನಾಥ : ಯಾವ ವಿಷಯ? ಅವರು ಆ ವಯಸ್ಸಲ್ಲಿ ಇಸ್ಟೀಟ್ ಆಡ್ತಾಯಿದ್ದರು ಅನ್ನೋದಾ?
ಮೋಹನ : ಉಹುಂ, ಅದಲ್ಲ. ಅವರು 3ನೇ ಕ್ಲಾಸ್ ಓದಿದ್ದಾರೆ ಅಂದರೆ ನನಗೆ ನಂಬಿಕೆ ಬರ್ತಾ ಇಲ್ಲ.. !
***
ಮೇಷ್ಟ್ರು: ಲೋ ಬಸವಾ, ಯಾಕೋ ಬ್ಯಾಕ್ಟೀರಿಯಾ ಚಿತ್ರ ಬರೆದಿಲ್ಲ.. ಏನೋ ದಾಡಿ ನಿನ್ಗೆ..?
ಬಸವ : ಸರಿಯಾಗಿ ನೋಡಿ ಸಾ.. ಬ್ಯಾಕ್ಟೀರಿಯಾ ಚಿತ್ರ ಬರೆದಿದ್ದೀನಿ..
ಮೇಷ್ಟ್ರು: ಏನೂ ಕಾಣ್ತಾ ಇಲ್ವಲ್ಲೋ.. ಬರೀ ಖಾಲಿ ಪೇಪರ್ ಇದೆ..?
ಬಸವ : ಬ್ಯಾಕ್ಟೀರಿಯಾ ಬರೀ ಕಣ್ಣಿಗೆ ಕಾಣೋದಿಲ್ಲ ಸಾರ್. ಸೂಕ್ಷ್ಣ ದರ್ಶಕದಿಂದ ನೋಡಿ ಸಾರ್..












Click it and Unblock the Notifications