ಬಸ್ಯಾನಿಗೆ ಇಬ್ಬರು ಹೆಂಡಿರಿಂದಲೂ ಸಕತ್ತು ತೊಂದರೆ?
ನನ್ನ ಇಬ್ಬರು ಹೆಂಡತಿಯರಿಂದಲೂ ನನಗೆ ತೊಂದರೆ ಅಂದ ನಾಗ.
ಅದು ಹೇಗೆ? ಅಂತ ಕೇಳಿದ ಬಸ್ಯಾ.
ಒಬ್ಬಳು ಯಾರ ಜತೆಗೋ ಓಡಿ ಹೋದಳು. ಇನ್ನೊಬ್ಬಳು ಹೋಗಿಲ್ಲ! ಅಂದ ನಾಗ.
***
ನೀನು ಕೊಟ್ಟ ನಿಶ್ಚಿತಾರ್ಥದ ಉಂಗುರವನ್ನು ವಾಪಸ್ ತಗೊ. ನಾನು ಬೇರಬ್ಬನನ್ನು ಪ್ರೀತಿಸಿದ್ದೇನೆ ಅಂದಳು ಮೀನಾಕ್ಷಿ.
ನಿನ್ನ ಪ್ರಿಯತಮನ ವಿಳಾಸವೇನು? ಬಸ್ಯಾನ ಪ್ರಶ್ನೆ.
ಯಾಕೆ ಅವನನ್ನು ಕೊಲ್ಲಲಿಕ್ಕಾ? ಮೀನಾಕ್ಷಿ ಆಶ್ಚರ್ಯದಿಂದ ಕೇಳಿದಳು.
ಅಲ್ಲ ಅವನಿಗೆ ಈ ಉಂಗುರ ಮಾರಲಿಕ್ಕೆ! ಬಸ್ಯಾ ಹೇಳಿದ.
***
ಪುಸ್ತಕ ನೋಡಿಕೊಂಡು ಹೊಸ ರುಚಿ ಮಾಡಿದ್ದೇನೆ, ಅಡುಗೆ ಹೇಗಿದೆಯೋ? ಬಸ್ಯಾನತ್ತ ಪ್ರಶ್ನಾರ್ಥಕವಾಗಿ ನೋಡಿದಳು ಮಿಟುಕಲಾಡಿ ಮೀನಾಕ್ಷಿ.
ನಿಂದೇನು ತಪ್ಪಿಲ್ಲ ಬಿಡು. ಬರೆದವರದೇ ಎಲ್ಲ ತಪ್ಪು! ಎಂದ ಬಸ್ಯಾ ಉಪಾಯವಾಗಿ.
(ಜೋಕ್ ಕತ್ತರಿಸಿ ನಿಮ್ಮನ್ನು ನಗಿಸಿದ್ದು; ಎಂ.ಕೆ.ಬದರಿನಾಥ್)
ನಿಮ್ಮ ಜೋಕುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ...












Click it and Unblock the Notifications