‘ಪಾಪ ನಟಿ ವನಿತಾಶ್ರೀಗೆ ಬೆಳವಣಿಗೇನೇ ಇಲ್ಲ!’
‘ವನಿತಾಶ್ರೀ ನಿಮಗೆ ಗೊತ್ತಂತೆ, ಹೌದೆ?’
‘ಯಾರು, ಸಿನಿಮಾ ನಟಿ ವನಿತಾಶ್ರೀ ತಾನೆ? ಓಹೋ, ಗೊತ್ತು. ನಮ್ಮನೆ ಪಕ್ಕದಲ್ಲೇ ಇದ್ದಳು. ಪಾಪ, ಅವಳಿಗೆ ಬೆಳವಣಿಗೇನೇ ಇಲ್ಲ’
‘ಯಾಕೆ? ಏನಾಯ್ತು ಅವಳಿಗೆ?’
‘ನೋಡಿ, ಮೂವತ್ತು ವರ್ಷದಿಂದ ನಮ್ಮನೆ ಪಕ್ಕದಲ್ಲೇ ಇದ್ದಾಳೆ ಅವಳು. ಅವಳ ವಯಸ್ಸು ಮಾತ್ರ ಇಪ್ಪತ್ತು ಮೀರಲೇ ಇಲ್ಲ! ’
*
ಮಿ.ಜಾಣ -ರೀ, ನನಗೆ ಎರಡು ಟಿಕೆಟ್ ಕೊಡಿ.
ಬಸ್ ಕಂಡಕ್ಟರ್ -ನಿನಗ್ಯಾಕಯ್ಯ ಎರಡು ಟಿಕೆಟ್?
ಮಿ.ಜಾಣ -ಟಿಕೆಟ್ ಕಳೆದುಹೋದರೆ ದಂಡ ಕಟ್ಟಬೇಕಾಗುತ್ತದೆ. ಒಂದು ಟಿಕೆಟ್ ಕಳೆದು ಹೋದರೆ ಇನ್ನೊಂದು ಇರಲಿ ಅಂತ ಈ ಉಪಾಯ ಮಾಡಿದ್ದೇನೆ...
ಬಸ್ ಕಂಡಕ್ಟರ್ -ಅರೆರೆರೆರೇ.. ಎರಡೂ ಟಿಕೆಟ್ ಕಳೆದು ಹೋದರೆ ಏನ್ ಮಾಡ್ತೀಯಾ?
ಮಿ.ಜಾಣ -ನಾನೇನ್ ದಡ್ಡ ಅಂದುಕೊಂಡೆಯಾ? ನನ್ನ ಬಳಿ ತಿಂಗಳ ಪಾಸ್ ಇದೆ..!!!
*
‘ಇಲಿ ಕಾಫಿ ಪುಡಿ ಮಾರಲಾಗುತ್ತದೆ’ ಎಂದು ಬೋರ್ಡ್ ಹಾಕಿದ್ದ ಅಂಗಡಿ ಪ್ರವೇಶಿಸಿದ ಒಬ್ಬರು ಬೋರ್ಡಿನಲ್ಲಿದ್ದ ತಪ್ಪನ್ನು ತೋರಿಸುತ್ತಾ, ಕೇಳಿದರು :
‘ಈ ತಪ್ಪನ್ನು ನಿಮಗೆ ಯಾರೂ ತೋರಿಸಿಕೊಡಲಿಲ್ಲವೆ’
‘ಬೇಕಾದಷ್ಟು ಜನ ತೋರಿಸಿಕೊಟ್ಟರು. ಅದನ್ನ ಹೇಳೋಕೆ ಬಂದವರು ಹಾಗೇ ಏನಾದರೂ ಸಾಮಾನು ಕೊಂಡುಕೊಂಡು ಹೋಗ್ತಾರೆ. ಅದಕ್ಕೆ ಅದನ್ನು ತಿದ್ದದೇ ಹಾಗೇ ಬಿಟ್ಟಿದ್ದೀನಿ’.












Click it and Unblock the Notifications