ಸಂತಾಸಿಂಗ್ ಕೇಳಿದ 10ಪ್ರಶ್ನೆಗೆ ಉತ್ತರ ಕೊಡಿ ಬಿಲ್ ಗೇಟ್ಸ್
ಮಿ.ಬಿಲ್ ಗೇಟ್ಸ್ ಅವರಿಗೆ,
ನಾವು ಇತ್ತೀಚೆಗಷ್ಟೇ ಮನೆಗೆ ಕಂಪ್ಯೂಟರ್ ಖರೀದಿಸಿದೆವು. ಆದರೆ ಕೆಲವು ತೊಂದರೆಗಳು ಕಾಣಿಸಿವೆ. ಅವುಗಳನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇವೆ.
1. ಕಂಪ್ಯೂಟರ್ ನಲ್ಲಿ 'start' ಬಟನ್ ಇದೆ. 'stop' ಬಟನ್ ಯಾಕಿಲ್ಲ. ಈ ಬಗ್ಗೆ ತಾವು ದಯವಿಟ್ಟು ಗಮನ ಹರಿಸಿ.
2. ಕಂಪ್ಯೂಟರ್ ಮೆನುನಲ್ಲಿ 'Run'ಎನ್ನುವ ಆಯ್ಕೆಯನ್ನು ಕಂಡೆವು. ನಮ್ಮ ಗೆಳೆಯರು 'run'ಕ್ಲಿಕ್ಕಿಸಿದರು. ಆದರೆ ನಾವು ಎಲ್ಲಿಗೂ ಹೋಗಲಾಗಲಿಲ್ಲ. ಹೀಗಾಗಿ 'run'ಬದಲಿಗೆ 'sit'ಎನ್ನುವುದನ್ನು ಅಳವಡಿಸಿ. ನಾವು ಕೂತು ಕೆಲಸ ಮಾಡುತ್ತೇವೆ.
3. ನಮಗೊಂದು ಸಂಶಯ. ಯಾವುದಾದರೂ 're-scooter'ನಿಮ್ಮ ಯಾವುದಾದರೂ ಕಂಪ್ಯೂಟರ್ ನಲ್ಲಿ ಲಭ್ಯವಿದೆಯಾ? ನಾನು ಈವರೆಗೆ ಕೇವಲ 're-cycle'ಮಾತ್ರ ಕಂಡಿದ್ದೇನೆ.
4. ಕಂಪ್ಯೂಟರ್ ನಲ್ಲಿರುವ'Find' ಬಟನ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ನನ್ನ ಪತ್ನಿ ಮನೆಯ ಬೀಗದ ಕೈ ಕಳೆದುಕೊಂಡಾಗ,'Find'ಬಟನ್ ಬಳಸಿದೆವು. ಅದರಿಂದ ಯಾವುದೇ ಉಪಯೋಗವಾಗಲಿಲ್ಲ.
5. ನನ್ನ ಮಗ 'Microsoft word'ಕಲಿತಿದ್ದಾನೆ. ನಾನೀಗ 'Microsoft
sentence'ಕಲಿಯಲು ನಿರ್ಧರಿಸಿದ್ದೇನೆ. ಅದು ಯಾವಾಗ ನೀಡುವಿರಿ?
6. ನಾವು ಕಂಪ್ಯೂಟರ್ ಖರೀದಿದ್ದೇವೆ. ಅದರೊಟ್ಟಿಗೆ ಸಿಪಿಯು, ಮೌಸ್, ಕೀಬೋರ್ಡ್ ಸಹಾ ತಂದಿದ್ದೇವೆ. ಆದರೆ 'MY Computer'ಎಂಬುದು ಮಾತ್ರ ಕಾಣಿಸುತ್ತಿದೆ. ಉಳಿದ ಪದಾರ್ಥಗಳು ನಮ್ಮದಲ್ಲ ಎಂದರ್ಥವೇ?
7. ನನಗೆ ನಿಜಕ್ಕೂ ಅಚ್ಚರಿಯಾದದ್ದು; 'MY Pictures'ಕಂಡಾಗ. ನಿಜಕ್ಕೂ ಈವರೆಗೆ ನಾನು ಫೋಟೋ ತೆಗೆಸೇ ಇಲ್ಲ. ನಿಮಗೆ ನನ್ನ ಪೋಟೋ ಎಲ್ಲಿ ಸಿಕ್ಕಿತು?
8. ಕಂಪ್ಯೂಟರ್ ನಲ್ಿಲ 'MICROSOFT OFFICE'ಇದೆ. 'MICROSOFT HOME'ಯಾಕಿಲ್ಲ. ಯಾಕೆಂದರೆ ನಾನು ಕಂಪ್ಯೂಟರನ್ನು ಮನೆಯಲ್ಲಿ ಮಾತ್ರ ಉಪಯೋಗಿಸುತ್ತೇನೆ.
9. 'My Recent Documents'ಕಂಪ್ಯೂಟರ್ ನಲ್ಲಿವೆ. 'My Past
Documents'ಎಲ್ಲಿ ಸಿಗುತ್ತದೆ?
10. ನೀವು 'My Network Places'ಅಳವಡಿಸಿರಿವಿರಿ. ದಯವಿಟ್ಟು 'My Secret Places'ಅಳವಡಿಸಬೇಡಿ. ಕೆಲಸ ಮುಗಿದ ಮೇಲೆ ನಾನು ಎಲ್ಲಿಗೆ ಹೋಗುತ್ತೇನೆ? ಏನು ಮಾಡುತ್ತೇನೆ ಎಂಬುದು ನನ್ನ ಪತ್ನಿಗೆ ಗೊತ್ತಾಗುವುದು ಬೇಡ.
ಧನ್ಯವಾದಗಳು
ಸಂತಾ ಸಿಂಗ್












Click it and Unblock the Notifications