ಎಲ್ಲರೂ ಉಗುರು ಕಡಿಯುತ್ತಾರೆ, ಆದರೆ ಇವಳು?
ಪುಂಡ :ನಿನ್ನ ಹುಡುಗೀಗೆ ಯಾವುದಾದರೂ ಅಭ್ಯಾಸ ಇದೆಯಾ?
ಗುಂಡ : ಹೂಂ, ಇದೆ. ಅವಳು ಯಾವಾಗಲೂ ಹಲ್ಲುಗಳಿಂದ ಉಗುರು ಕಡಿಯುತ್ತಾ ಇರ್ತಾಳೆ.
ಪುಂಡ :ಸಾಮಾನ್ಯವಾಗಿ ಎಲ್ಲ ಹುಡುಗಿಯರು ಈ ರೀತಿ ಮಾಡ್ತಾರೆ.
ಗುಂಡ :ಆದರೆ ಇವಳು ಮಾತ್ರ ತನ್ನ ಕಾಲಿನ ಉಗುರನ್ನು ಕಡೀತಾಳೆ.
(ಜೋಕ್ ಕಳಿಸಿದ್ದು: ಯಲ್ದೂರು ಪ್ರಭು)
***
ಡಾಕ್ಟ್ರೇ, ಈಗ ತಾನೇ ನನ್ನ ಕಾಲಿನ ಮೇಲೆ ಒಂದು ಕಾರು ಹೋಗಿಬಿಡ್ತು. ಕೆಳಗೆ ಬಿದ್ಬಿಟ್ಟಿದ್ದೀನಿ. ಮೊದಲು ನಾನು ಮಾಡಬೇಕಾದ್ದೇನು ಹೇಳಿ.
ಕಾರಿನ ನಂಬರನ್ನು ಗುರ್ತು ಮಾಡ್ಕೊಳ್ಳಿ.
(ಜೋಕ್ ಕಳಿಸಿದ್ದು: ಸಂಪಟೂರು ವಿಶ್ವನಾಥ್ )
***
ಪ್ರೊಫೆಸರ್ ಒಬ್ಬರು ಮನೆಯಿಂದ ಕಾಲೇಜಿಗೆ ಹೊರಟರು. ದಾರಿಯಲ್ಲಿ ತಮ್ಮ ಸಿಗಾರ್ ಹೊರತೆಗೆದು ಹಚ್ಚಲು ಹಲವು ಬಾರಿ ಪ್ರಯತ್ನಿಸಿದರು. ಆದರೆ ಎದುರು ಗಾಳಿಯಿಂದ ಅದು ಸಾಧ್ಯವಾಗಲಿಲ್ಲ. ಈಗ ಪ್ರೊಫೆಸರ್ ತಲೆ ಓಡಿಸಿದರು.
ಹಿಂದಕ್ಕೆ ತಿರುಗಿ ಸಿಗಾರ್ ಗೆ ಬೆಂಕಿ ತಗುಲಿಸಲು ಅದು ಹೊಗೆ ಕಾರತೊಡಗಿತು. ತಮ್ಮ ಬುದ್ಧಿಗೆ ತಾವೇ ಭೇಷ್ ಅಂದುಕೊಳ್ಳುತ್ತಾ ಅವರು ಮುನ್ನಡೆದರು. ಆದರೆ ಅವರು ಕೊನೆಗೆ ತಲುಪಿದ್ದು ಕಾಲೇಜನ್ನಲ್ಲ, ಬದಲು ತಮ್ಮ ಮನೆಯನ್ನು!
(ಜೋಕ್ ಕಳಿಸಿದ್ದು: ಚೇತನಾ.ಕೆ.)












Click it and Unblock the Notifications