ನಾನು ಮೊನ್ನೆ ನೀರಿಗೆ ಮೋಸ ಮಾಡಿದೆ!
ಸರ್ದಾರ್ಜಿ : ಮೊನ್ನೆ ನಾನು ನೀರಿಗೆ ಮೋಸ ಮಾಡಿದೆ ಗೊತ್ತೆ?
ಇನ್ನೊಬ್ಬ ಸರ್ದಾರ್ಜಿ : ಹೌದಾ? ಹೇಗೆ?
ಸರ್ದಾರ್ಜಿ : ಸ್ನಾನ ಮಾಡಲು ಬಿಸಿನೀರು ಕಾಯಿಸಿದೆ. ಆದರೆ ನಾನು ತಣ್ಣೀರನ್ನಷ್ಟೇ ಬಳಸಿದೆ!
***
ಸರ್ದಾರ್ಜಿಗೆ 20ರೂಪಾಯಿ ಕೊಟ್ಟು ಒಂದು ಲಾಟರಿ ಖರೀದಿಸಿದ್ದ. ಅದಕ್ಕೆ 20ಲಕ್ಷ ರೂಪಾಯಿ ಬಹುಮಾನ ಬಂದಿತ್ತು. ಲಾಟರಿ ಡೀಲರ್ ತೆರಿಗೆ ಎಲ್ಲಾ ಮುರಿದುಕೊಂಡು 11ಲಕ್ಷ ರೂಪಾಯಿ ಕೊಡಲು ಮುಂದಾದ.
ಕೆರಳಿದ ಸರ್ದಾರ್ಜಿ, ನೋಡಯ್ಯಾ ಮೋಸ ಮಾಡಬೇಡ. ನನಗೆ ಬಹುಮಾನ ಕೊಡೋದಾದ್ರೆ 20ಲಕ್ಷ ಕೊಡು. ಆಗೋದಿಲ್ಲ ಅಂದ್ರೆ ನನ್ನ 20ರೂಪಾಯಿ ವಾಪಸ್ ಕೊಡು.. ಸುಮ್ಮನೇ ತರ್ಲೆ ಮಾಡಬೇಡ ಎಂದ.












Click it and Unblock the Notifications