ದೊಡ್ಡದೊಂದು ಸಂದೇಹಕ್ಕೆ ಈಗ ಉತ್ತರ ಸಿಕ್ಕಿದೆ!
ಕೋಳಿ ಮೊದಲೋ? ಮೊಟ್ಟೆ ಮೊದಲೋ? ಈ ಪ್ರಶ್ನೆಗೆ ಸಾಂತ ಉತ್ತರ ಹುಡುಕಿದ್ದಾನೆ! ಅವನ ಪ್ರಕಾರ : ಯಾವುದನ್ನು ಮೊದಲು ಆರ್ಡರ್ ಮಾಡ್ತೇವೋ, ಅದು ಮೊದಲು ಬರುತ್ತಂತೆ!
***
ಶಿಕ್ಷಕಿ : ನೀನು ಹುಟ್ಟಿದ್ದು ಯಾವ ಊರಲ್ಲಿ?
ಮರಿ ಸಾಂತ : ತಿರುವನಂತಪುರಂ
ಶಿಕ್ಷಕಿ : ಸರಿ, ಇಂಗ್ಲಿಷಲ್ಲಿ ಅದರ ಸ್ಪೆಲ್ಲಿಂಗ್ ಹೇಳು ನೋಡೋಣ?
ಮರಿ ಸಾಂತ : ಸಾರಿ ಮೇಡಂ.. ನಾನು ಹುಟ್ಟಿದ್ದು, ಗೋವಾದಲ್ಲಿ.. G O A .. ಸರಿ ತಾನೇ ಸ್ಪೆಲ್ಲಿಂಗ್?
***
ಸಾಂತ : ನನ್ನನ್ನು ಜನರು ದೇವರೆಂದು ನಂಬಿದ್ದಾರೆ..
ಪುಟ್ಟು : ಹೌದಾ? ನಿನಗೆ ಹೆಂಗೆ ಗೊತ್ತಾಯ್ತು?
ಸಾಂತ : ನಿನ್ನೆ ಬೆಳಗ್ಗೆ ಪಾರ್ಕ್‌ಗೆ ಹೋಗಿದ್ದೆ. ಜನರೆಲ್ಲರೂ ನನ್ನ ನೋಡುತ್ತಾ, ಓ ಗಾಡ್ ಅನ್ನುತ್ತಿದ್ದರು! ಅವರು ಬೆರಗಾಗಿದ್ದರು!
***
ಸಾಂತ : ಸಾರ್, ಟೀವಿ ಬಿಟ್ಟು ಇನ್ನೆಲ್ಲ ವಸ್ತುಗಳನ್ನು ಕಳ್ಳರು ದೋಚಿದ್ದಾರೆ..
ಪೊಲೀಸ್ ಅಧಿಕಾರಿ : ಅದೊಂದನ್ನು ಯಾಕೆ ಬಿಟ್ಟು ಹೋದರು?
ಸಾಂತ : ನಾನು ಆ ಟೈಮಲ್ಲಿ ಟೀವಿಯಲ್ಲಿ ಸಿಲ್ಲಿಲಲ್ಲಿ ಸೀರಿಯಲ್ ನೋಡ್ತಾಯಿದ್ದೆ ಸಾರ್!












Click it and Unblock the Notifications