ಬೋರಕ್ಕನ ಬಾಯಿಗೆ ವಿಮಾನ ಚಾಲಕ ಕಕ್ಕಾಬಿಕ್ಕಿ!
ಬೊಮ್ಮನಹಳ್ಳಿಯ ಬೋರಕ್ಕನ ಮಗ ಅಮೆರಿಕದಲ್ಲಿ ಒಂದು ದೊಡ್ಡ ಕೆಲಸದಲ್ಲಿದ್ದ. ಅವಳಿಗೆ ಇವನೊಬ್ಬನೇ ಮಗ. ಸರಿ ಮಗ ಬಲವಂತ ಮಾಡ್ದಾಂತ ಒಂದು ದಿನ ಬೋರಕ್ಕ ಅಮೆರಿಕಕ್ಕೆ ಹೊರಟೇ ಬಿಟ್ಟಳು. ಮೊದಲ ವಿಮಾನಯಾನ, ಕಿಟಕಿ ಇರುವ ಜಾಗವನ್ನೇ ನೋಡಿ ಕುಳಿತುಕೊಂಡಳು.
ಅಷ್ಟರಲ್ಲಿ ಒಬ್ಬಾತ ಬಂದು ‘ನೀವು ನನ್ನ ಸೀಟಿನಲ್ಲಿ ಕುಳಿತಿದ್ದೀರಿ ಜಾಗ ಬಿಡಿ’ ಎಂದು ಕೇಳಿಕೊಂಡ. ಬಸ್ಸುಗಳಲ್ಲಿ ನುಗ್ಗಿ ಸೀಟನ್ನು ಹಿಡಿದುಕೊಳ್ಳುವುದರಲ್ಲಿ ಕಿತ್ತೂರು ಚೆನ್ನಮ್ಮನಷ್ಟೇ ಛಾತಿಯ ಬೋರಕ್ಕ ಈ ಜುಜುಬಿ ಮನುಷ್ಯನ ಬೆದರಿಕೆಗೆ ಕಿವಿಗೊಡುವಳೇ.
ಮೊದಮೊದಲು ಅವನ ಮಾತೇ ಕಿವಿಗೆ ಬಿದ್ದಿಲ್ಲವೆಂಬಂತೆ ಇದ್ದವಳು ಕೊನೆಗೆ - ‘ಹೋಗಯ್ಯ, ಬಿಟ್ಟುಕೊಡೋಲ್ಲ ಅದೇನ್ ಮಾಡ್ಕ್‌ಂತೀಯೋ ಮಾಡ್ಕ ಹೋಗ್’ ಎಂದು ಕಿರುಚಿದಳು.
ಅವಳ ದನಿಗೆ ಬೆದರಿದ ಆ ಮನುಷ್ಯ ‘ಆಯ್ತಮ್ಮ ನೀನೇ ಕೂತ್ಕೋ ಆದರೆ ನೀನೇ ವಿಮಾನ ಹಾರಿಸ್ಬೇಕು ಅಷ್ಟೆ’ ಅಂದ.
(ಜೋಕು ಕಳುಹಿಸಿದವರು; ತೇಜಸ್ವಿನಿ)












Click it and Unblock the Notifications