ಕುಡಿತದ ಕೆಡುಕುಗಳಲ್ಲ, ಕುಡುಕರ ಜೋಕುಗಳು!
ಜಗ್ಗಿ ಯದ್ವಾತದ್ವಾ ಕುಡಿದಿದ್ದ. ಬಾರ್ ಮುಚ್ಚಿದ್ದರಿಂದ ಮನೆಗೆ ವಾಪಸ್ಸಾಗಲು ಕಾರು ಹತ್ತಿದರೆ ಸ್ಟೇರಿಂಗ್ ಚಕ್ರವೇ ನಾಪತ್ತೆ. ಸರಿ, ಮೊಬೈಲ್‌ಫೋನ್‌ನಿಂದ ಪೊಲೀಸ್ ಸ್ಟೇಷನ್‌ಗೆ ಫೋನ್ ಮಾಡಿದ- 'ಕಳ್ಳರು ನನ್ನ ಕಾರಿನ ಸ್ಟಿಯರಿಂಗ್ ವ್ಹೀಲ್ ಕದ್ದಿದಾರೆ. ಡ್ಯಾಷ್ ಬೋರ್ಡ್ ಕೂಡ ಇಲ್ಲ. ಬ್ರೇಕ್ ಪೆಡಲ್, ಆ್ಯಕ್ಸಲರೇಟರ್ ಕೂಡ ಬಿಟ್ಟಿಲ್ಲ'.
ಅಲ್ಲೇ ಇರಿ ಈಗ ಬರ್ತೀವಿ ಅಂದ್ರು ಪೋಲಿಸ್ನೋರು. ಇನ್ನೇನು ಪೊಲೀಸ್ನೋರು ಜೀಪು ಹತ್ತಬೇಕು, ಮತ್ತೆ ಜಗ್ಗಿ ಫೋನು ಬಂತು. 'ನೀವೇನು ಬರೋದು ಬೇಡ. ಕಳೆದು ಹೋಗಿದ್ದ ಕಾರಿನ ಭಾಗಗಳೆಲ್ಲ ಸಿಕ್ಕಿದ್ವು. ನಾನು ಹಿಂದಿನ ಸೀಟ್‌ನಲ್ಲಿ ಕೂತಿದ್ದೆ.'
****
'ಬಾರ್ ಎಷ್ಟೊತ್ತಿಗೆ ಓಪನ್ ಆಗುತ್ತೆ?' ಆಗಲೇ ತೀರ್ಥ ಸೇವನೆ ಮಾಡಿದ್ದ ಆಸಾಮಿ ಫೋನ್‌ನಲ್ಲಿ ಕೇಳಿದ. 'ಸಂಜೆ' ಎಂದ ಕ್ಲರ್ಕ್ ಫೋನಿಟ್ಟ. ಇನ್ನೂ ಒಂದು ತಾಸಾಗಿಲ್ಲ. ಮತ್ತದೇ ಫೋನು. ಅದೇ ಆಸಾಮಿ. ಅದೇ ಪ್ರಶ್ನೆ. ಆದರೆ ಈ ಬಾರಿ ಧ್ವನಿ ಇನ್ನಷ್ಟು ತೊಡರುತ್ತಿತ್ತು. 'ಆಗಲೇ ಹೇಳಿದ್ದೆನಲ್ಲಾ ಅದೇ 'ಟೈಂಗೆ' ಎಂದ ಕ್ಲರ್ಕ್.
ಸ್ವಲ್ಪ ಸಮಯದ ನಂತರ ಮತ್ತೆ ಅವನದೇ ಫೋನು. ಕಷ್ಟ ಪಟ್ಟು ಕೇಳಿದ- ಬಾ...ರ್ ಯ್ಯಾ..ವಾ..ಗ ಓ..ಪ..ನ್ ಆಗುತ್ತೆ?
ಕ್ಲರ್ಕ್ ಹೇಳಿದ- ನಿಮಗೇನಾದ್ರೂ ಅರ್ಜೆಂಟಿದ್ರೆ ಹೇಳಿ. ರೂಂ ಸರ್ವಿಸ್ ಕೊಡ್ತೀನಿ. ಈಗಲೇ ನೀವು ಒಳಗೆ ಬರಬಹುದು'
ಆ ಆಸಾಮಿ ಹೇಳಿದ- 'ನಾ...ನು ಒ..ಳ..ಕ್ಕೆ ಬ..ರೋ...ಕಲ್ಲ ...ಕೇಳಿದ್ದು, ಹೊರಕ್ಕೆ... ಹೋಗೋಕೆ!'
****
ಶಂಕರಿ ಸಾಕಷ್ಟು 'ಶಂಕರಿ' ಕುಡಿದಿದ್ದ. ಮೀಟಿಂಗು ಹಾಳೂ ಮೂಳು ಮುಗಿಸಿಕೊಂಡು ಕಂಠ ಮಟ್ಟ ಕುಡಿದು ಮನೆ ಮುಟ್ಟಿದಾಗ ಗಂಟೆ ರಾತ್ರಿ 2. ಯಾರನ್ನೂ ಎಬ್ಬಿಸದೆ, ತೂರಾಡುತ್ತಲೇ ಮಹಡಿ ಮೆಟ್ಟಿಲೇರತೊಡಗಿದ. ಇನ್ನೆರಡೇ ಮೆಟ್ಟಿಲು ಅನ್ನುವಷ್ಟರಲ್ಲಿ ಹಿಂಬದಿಗೆ ಜಾರಿ ಬಿದ್ದ.
ಪ್ಯಾಂಟಿನ ಹಿಂಬದಿಯ ಬೇಬುಗಳಲ್ಲಿ ಪುಟ್ಟ ಪುಟ್ಟ ಪಿಂಟ್ ಬಾಟಲಿಗಳನ್ನಿಟ್ಟುಕೊಂಡಿದ್ದ ಕಾರಣ ಪೃಷ್ಟ ಶೋಷಣೆಯಾಯ್ತು. ರಕ್ತ ಧಾರಾಕಾರ. ಕಷ್ಟಪಟ್ಟು ತಾನೇ ಫಸ್ಟೇಡ್ ಮಾಡಿಕೊಂಡು ಶಂಕರಿ ಮಲಗಿದ. ಬೆಳಗ್ಗೆ ಎದ್ದಾಗಲೂ ಉರಿಉರಿ.
ಹೆಂಡತಿ ಗೌರಿ ಎಂದಿನ ಧಾಟಿಯಲ್ಲೇ- 'ಎಲ್ರೀ ಹೋಗಿದ್ರಿ ರಾತ್ರಿ, ಆಪಾಟೀ ಆಗಿದೆ ಸೇವೆ' ಅಂದಳು.
'ನಿನಗೆ ಹೇಗೆ ಗೊತ್ತಾಯ್ತು', ಕಣ್ಣು ಪಿಳಿಪಿಳಿಸುತ್ತಾ ಕೇಳಿದ ಶಂಕರಿ.
'ಕನ್ನಡಿಗೆ ಬ್ಯಾಂಡೇಜ್ ಹಚ್ಚಿದೀರಲ್ಲಾ, ಅದೇ ಹೇಳಿತು' ಅಂದಾಗ ಶಂಕರಿ ಬೇಸ್ತು.
****
ಜಾಕಿ ಫುಲ್ ಟೈಟಾಗಿದ್ದ. ನಡುರಾತ್ರಿ. ಬಾರಿನ ಮೂಲೆಯಲ್ಲಿ ಕುಂತಿದ್ದ ಏಕೈಕ ಹೆಂಗಸಿನ ಹತ್ತಿರ ಹೋಗಿ, ಆಕೆಯ ಪರ್ಮೀಷನ್ನಿಗೂ ಕಾಯದೆ ತಬ್ಬಿಕೊಂಡ. ತಡಬಡಾಯಿಸಿ ಬಿಡಿಸಿಕೊಂಡ ಆಕೆ ಕಪಾಳ ಮೋಕ್ಷ ಮಾಡಿದಳು. 'ಕ್ಷಮಿಸಿ, ನನ್ನ ಹೆಂಡತಿ ಅಂತ ತಿಳಿದು ಹಾಗೆ ಮಾಡಿದೆ. ನಿಜವಾಗ್ಲೂ ನೀವು ನನ್ನ ಹೆಂಡತಿ ಥರಾನೇ ಇದೀರಿ' ಅಂದ ದಂತಭಗ್ನ ಜಾಕಿ.
'ಕುಡುಕ ಮುಂಡೇದೆ. ಮರ್ಯಾದೆ ಬೇಡ. ಥೂ' ಅಂತ ಹೆಂಗಸು ಕ್ಯಾಕರಿಸಿ ಉಗಿದಳು.
'ಅರೆ ಇದು ಭಾರೀ ಫನ್ನಿ ಆಗಿದೆ. ನಿಮ್ಮ ಮಾತೂ ನನ್ನ ಹೆಂಡತಿ ಥರಾನೇ ಇದೆ' ಗೊಣಗುತ್ತಾ ನಿಂತ ಜಾಕಿ.
****
ಬಾರೊಂದರಲ್ಲಿ ಇಬ್ಬರು ಟೈಟಾಗಿದ್ದರು.
ಮೊದಲನೆಯವ ಹೇಳಿದ- 'ನನ್ನ ಹೆಂಡತಿ ದೇವತೆ'
ಎರಡನೆಯವ ಹೇಳಿದ- 'ನೀನೇ ಲಕ್ಕಿ, ನನ್ನ ಹೆಂಡತಿ ಇನ್ನೂ ಬದುಕಿದ್ದಾಳೆ!'











Click it and Unblock the Notifications