ಸಿನಿಮಾದ ಹೀರೋ ಬಗ್ಗೆ ಸಂತಾ-ಬಂತಾ ಮಾತುಕತೆ
ಸಂತಾ : ಬಂತಾ, ನಾನು ಇನ್ಮುಂದೆ ಏನಿದ್ರೂ ಫಸ್ಟ್‌ಷೋ ಫಿಲ್ಮ್ ಮಾತ್ರ ನೋಡ್ತೇನೆ. ಆ ಹೀರೋ, ಮ್ಯಾಟಿನಿಯಲ್ಲಿ ಸರಿಯಾಗಿ ಫೈಟೇ ಮಾಡಲ್ಲ. ಅವನಿಗೆ ಸುಸ್ತಾಗಿರುತ್ತೆ ಅಂತ ಕಾಣುತ್ತೆ.
ಬಂತಾ : ನಿನ್ನಂಥವರಿಂದಲೇ ನಮ್ಮ ಕುಲಕ್ಕೆ ಮೂರ್ಖರು ಅಂತ ಹೆಸರು ಬಂದಿರೋದು! ಯಾವಾಗ್ಲೂ ಮ್ಯಾಟಿನೀಲೇ ಹೀರೋ ಚೆನ್ನಾಗಿ ಫೈಟ್ ಮಾಡೋದು. ಯಾಕೆಂದ್ರೆ ಅವ್ನಿಗೆ ಫಸ್ಟ್ ಷೋದಲ್ಲಿ ಪ್ರಾಕ್ಟೀಸ್ ಆಗಿರುತ್ತೆ.
*
ಸಂತಾ : ಅಡುಗೆ ಮಾಡೋದು.. ಬಟ್ಟೆ ಒಗೆಯೋದು.. ಇವೆಲ್ಲವುಗಳಿಂದ ಮುಕ್ತಿ ಪಡೆಯಲು ನಾನು ಮದುವೆಯಾದೆ..
ಬಂತಾ : ಹೌದಾ.. ?! ನಾನು ಅದರಿಂದೆಲ್ಲ ಮುಕ್ತಿ ಪಡೆಯಲು ಡೈವೋರ್ಸ್ ಕೊಟ್ಟೆ!
*
ಸಂತಾ : ಏನಯ್ಯಾ, ವಿಸ್ಕೀನ ಪೈಪ್ ಹಾಕ್ಕೊಂಡು ಕುಡೀತಾ ಇದ್ದೀಯಲ್ಲ ಯಾಕೆ?
ಬಂತಾ : ಹೌದು ಕಣೋ. ವಿಸ್ಕೀನ ಕೈಯಿಂದ ಮುಟ್ಟೋದಿಲ್ಲ ಅಂತ ನನ್ನ ಹೆಂಡತಿಗೆ ಮಾತು ಕೊಟ್ಟಿದ್ದೇನೆ.
*
ಸಂತಾ-ಬಂತಾ ಒಂದು ಸರ್ವೀಸ್ ಸೆಂಟರ್ ಶುರು ಮಾಡಿದರು. ಅದು ಆರಂಭವಾಗಿ ಮೂರು ತಿಂಗಳಾದರೂ, ಒಂದೇ ಒಂದು ವಾಹನ ಸಹಾ ಬರಲಿಲ್ಲ... ಯಾಕೆಂದರೆ, ಸರ್ವೀಸ್ ಸೆಂಟರ್ 18ನೇ ಫ್ಲೋರ್‌ನಲ್ಲಿತ್ತು!











Click it and Unblock the Notifications