ನೀನು ಸರ್ದಾರ್ಜಿಯನ್ನು ಮದುವೆಯಾಗ್ತೀಯಾ?
ಸರ್ದಾರ್ಜಿ : ನಾನು ನಿನ್ನನ್ನು ಪ್ರೀತಿಸುತ್ತೇನೆ. ನಾವಿಬ್ಬರೂ ಮದುವೆಯಾಗೋಣವೇ?
ಕಾವ್ಯ : ನನಗೂ ನಿಮ್ಮನ್ನು ಮದುವೆಯಾಗೋದಕ್ಕೆ ಇಷ್ಟವಿದೆ. ಆದರೆ ಏನ್ ಮಾಡೋದು, ನಾನು ನಿಮಗಿಂತಲೂ ಒಂದು ವರ್ಷ ದೊಡ್ಡವಳು... ನನಗೀಗ 28ವರ್ಷ!
ಸರ್ದಾರ್ಜಿ : ಯೋಚನೆ ಮಾಡಬೇಡ, ಎರಡು ವರ್ಷದ ನಂತರ ಮದುವೆಯಾಗೋಣ, ಆಗ ನನಗೆ 30ವರ್ಷ ಆಗುತ್ತೆ!
*
ಇಬ್ಬರು ಸರ್ದಾರ್ಜಿಗಳು ಫೈವ್ ಸ್ಟಾರ್ ಹೋಟೆಲ್‌ಗೆ ನುಗ್ಗಿದರು. ಅಲ್ಲಿ ಎರಡು ಕಾಫಿಗೆ ಆರ್ಡರ್ ಮಾಡಿ, ಮನೆಯಿಂದ ತಂದಿದ್ದ ತಿಂಡಿ ಪೊಟ್ಟಣ ಬಿಚ್ಚಿ ತಿನ್ನತೊಡಗಿದರು. ಸಪ್ಲೈಯರ್ ಓಡಿ ಬಂದು, 'ಸಾರ್, ನಿಮ್ಮ ತಿಂಡಿಗಳನ್ನು ಇಲ್ಲಿ ತಿನ್ನುವಂತಿಲ್ಲ' ಎಂದ. ಕೂಡಲೇ ತಮ್ಮ ತಿಂಡಿ ಪೊಟ್ಟಣಗಳನ್ನು ಅದಲು- ಬದಲು ಮಾಡಿಕೊಂಡು ತಿನ್ನ ತೊಡಗಿದರು!
*
ಸರ್ದಾರ್ಜಿ : ರೀ, ಇಲ್ಲಿ ರಾಮರಾಯರ ಮನೆ ಎಲ್ಲಿದೆ?
ಇನ್ನೊಬ್ಬ ಸರ್ದಾರ್ಜಿ : ಅದು ಶ್ಯಾಮರಾಯರ ಮನೆಯ ಎದುರಿಗಿದೆ.
ಸರ್ದಾರ್ಜಿ : ಶ್ಯಾಮರಾಯರ ಮನೆ ಎಲ್ಲಿದೆ?
ಇನ್ನೊಬ್ಬ ಸರ್ದಾರ್ಜಿ : ಶ್ಯಾಮರಾಯರ ಮನೆ ರಾಮರಾಯರ ಮನೆ ಎದುರಿಗಿದೆ.
ಸರ್ದಾರ್ಜಿ : ಹೌದಾ? ಹಾಗಾದ್ರೆಇವೆರಡೂ ಎಲ್ಲಿವೆ?
ಇನ್ನೊಬ್ಬ ಸರ್ದಾರ್ಜಿ : ಇವೆರಡೂ ಎದುರು ಬದುರಿಗಿವೆ!
*
ಸೀನಿಯರ್ ಡಾಕ್ಟರ್: ತಮ್ಮ ಮೆಚ್ಚಿನ ನಟನ ಆರೋಗ್ಯ ವಿಚಾರಿಸಲು ಬಂದಿದ್ದ ಲಕ್ಷಾಂತರ ಜನರನ್ನ ಹೇಗೆ ಚದುರಿಸಿದಿರಿ? ಪೊಲೀಸ ರಿಂದಲೇ ಸಾಧ್ಯವಾಗದ ಕೆಲಸವನ್ನ ನೀವು ಮಾಡಿದ್ದಾದ್ರೂ ಹ್ಯಾಗೆ ರೀ?
ಸರ್ದಾರ್ಜಿ : ತುಂಬಾ ಸಿಂಪಲ್ ಸಾರ್. ಒಂದು ದೊಡ್ಡ ಬಾಕ್ಸ್ ಹಿಡ್ಕೊಂಡು ಜನರ ಬಳಿ ಹೋಗಿ ಚಿತ್ರನಟನ ಆಪರೇಷನ್‌ಗೆ ದುಡ್ಡು ಕಡಿಮೆಯಾಗಿದೆ. ಎಲ್ಲಿ, ಎಲ್ಲರೂ ತಲಾ ನೂರು ರೂ. ಕೊಡಿ ಅಂದೆ ನೋಡಿ ಜನರೆಲ್ಲ ಚದುರಿಬಿಟ್ರು!











Click it and Unblock the Notifications