ಇತ್ತೀಚಿನ ಮೊಬೈಲ್ ಫೋನ್ ಗಾದೆಗಳು!
ಮೊಬೈಲ್‌ಗೆ ಹೆಬ್ಬೆರಳು ಚೆಂದ. ಲ್ಯಾಂಡ್ ಫೋನ್‌ಗೆ ತೋರು ಬೆರಳು ಚೆಂದ.
ಕಾಯ್ನ್ ಬಾಕ್ಸ್‌ಗೆ ನಿಮಿಷ, ಮೊಬೈಲ್‌ಗೆ ವರುಷ.
ಶಿವಪೂಜೆಯಲ್ಲಿ ಮೊಬೈಲ್ ರಿಂಗಾಯ್ತು!
ಹುಡುಗಿಯರಿಗೆ ಫೋನ್ ಮಾಡಿದೋನಿಗೆ ಕುಡಿಕೆ ಕರೆನ್ಸಿ ಸಾಲದು.
ಕರೆನ್ಸಿ ಇದ್ದಷ್ಟೇ ಕಾಲ್ ಚಾಚು.
ಮಾತಿಗೆ ಮನೆ ಫೋನು ಲೇಸು. ಹರಟೆ ಹೊಡೆಯೋಕೆ ಆಫೀಸ್ ಫೋನು ಲೇಸು.
*
ಪುಟ್ಟಿ : ಅಪ್ಪನಿಗೆ ರಸ್ತೆ ದಾಟಲು ಸಕತ್ತು ಭಯ ಅಲ್ವಾ?
ಅಮ್ಮ : ಈ ಅನುಮಾನ ನಿಂಗೆ ಯಾಕೆ ಬಂತು?
ಪುಟ್ಟಿ : ಪ್ರತಿ ಸಲ ರಸ್ತೆ ದಾಟುವಾಗಲೂ, ಅಪ್ಪ ಭಯದಿಂದ ನನ್ನ ಕೈಹಿಡಿದುಕೊಳ್ತಾರೆ...











Click it and Unblock the Notifications