ನಿಮ್ಮ ತಲೆದಿಂಬು ನಾಪತ್ತೆಯಾಗಿದೆ...
ಸರ್ದಾರ್ಜಿ ಕನಸಿನಿಂದ ಎಚ್ಚರಗೊಂಡು ಹೆಂಡತಿಗೆ ಹೇಳಿದ -
'ಲೇ, ನಾನು ಎಂಥ ಸವಿಯಾದ ಅಷ್ಟೇ ವಿಶಿಷ್ಟವಾದ ಕನಸು ಕಂಡೆ ಗೊತ್ತಾ? ನನ್ನ ಕನಸಿನಲ್ಲಿ ಒಂದು ಬೃಹತ್ ಆಕಾರದ ಬ್ರೆಡ್ಡಿನ ತುಣುಕನ್ನು ತಿನ್ನುತ್ತಿದ್ದೆ. ಆ ಕನಸು ಎಷ್ಟು ವಾಸ್ತವ ಎನಿಸಿತ್ತೆಂದರೆ, ನನಗೆ ಈಗಲೂ ಹೊಟ್ಟೆ ತುಂಬಿದ ಅನುಭವವಾಗ್ತಿದೆ.'
ಅದಕ್ಕೆ ಹೆಂಡತಿ ನಿಟ್ಟುಸಿರು ಬಿಟ್ಟು ಹೇಳಿದಳು -'ನನ್ನ ಅನುಮಾನ ನಿಜ ಆಯ್ತು ಕಣ್ರಿ... mp;#8217;
***
ಸರ್ದಾರ್ಜಿಗೆ ರೇಸ್‌ಕೋರ್ಸ್‌ಗೆ ಫೋನಾಯಿಸಿ ಟಿಕೇಟು ಪಡೆದುಕೊಳ್ಳ ಬೇಕಿತ್ತು. ಆದರೆ 'ರೇಸ್‌ಕೋರ್ಸ್' ಕಚೇರಿಯ ಫೋನ್ ನಂಬರ್ ಬಗ್ಗೆ ಗೊಂದಲವಿತ್ತು.
ಆದರೂ ಡೈರಿಯಲ್ಲಿದ್ದ ಹಳೆಯ ನಂಬರಿಗೇ ಫೋನಾಯಿಸಿ - 'ಇದು ರೇಸ್‌ಕೋರ್ಸಾ?' ಎಂದು ಕೇಳಿದ.
of courseಎಂದಿತು ಅತ್ತಲಿನ ದನಿ.
'ಸಾರಿ, ರಾಂಗ್ ನಂಬರ್' ಅಂತ ಪೋನಿಟ್ಟ ಸರ್ದಾರ್ಜಿ.
***
ಸರ್ದಾರ್ಜಿಗೆ ರಸ್ತೆಯಲ್ಲಿ ಹೋಗೋ ಹುಡುಗಿಯರನ್ನು ವಿನಾಕಾರಣ ಚುಡಾಯಿಸೋ ಚಟ. ಒಂದು ದಿನ ಹುಡುಗಿಯಾಬ್ಬಳಿಗೆ 'ನನ್ನ ಹೃದಯದ ಅರಮನೆ ನಿನಗಾಗಿ ತೆರೆದಿದೆ ಬರುವೆಯಾ ಪ್ರಿಯೆ' ಎಂದು ಕೆಣಕಿದ. ಹುಡಿಗಿಗೆ ಸಿಟ್ಟು ನೆತ್ತಿಗೇರಿತು.
'ಕಾಲಲ್ಲಿರೋ ಚಪ್ಪಲಿ ಬಿಚ್ಚಬೇಕಾ?' ಎಂದಳು.
ಸರ್ದಾರ್ಜಿ ಅಷ್ಟೇ ಕೂಲಾಗಿ ಹೇಳಿದ 'ಪರವಾಗಿಲ್ಲ ಹಾಗೇ ಬರಬಹುದು. ನನ್ನ ಹೃದಯ ದೇವಸ್ಥಾನವಲ್ಲ.'












Click it and Unblock the Notifications