ನರ್ಸ್ ಹೃದಯ ಕದ್ದಳು! ಡಾಕ್ಟರ್ ಕಿಡ್ನಿ ಕದ್ದರು!
>ಸರ್ದಾರ್ಜಿ : ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ. ನೀನು ನನ್ನ ಹೃದಯ ಕದ್ದಿರುವೆ.
ನರ್ಸ್ : ಕ್ಷಮಿಸು ಗೆಳೆಯಾ, ನನಗಿಂತ ಮೊದಲು ಡಾಕ್ಟರ್ ನಿನ್ನ ಕಿಡ್ನಿ ಕದ್ದಿದ್ದಾರೆ.
*
ಸರ್ದಾರ್ಜಿ ಮತ್ತು ಅವನ ಹೆಂಡತಿ ಆಟೊದಲ್ಲಿ ಹೋಗುತ್ತಿದ್ದರು. ಡ್ರೆೃವರ್ ಕನ್ನಡಿ ಸರಿಪಡಿಸಿಕೊಂಡ. ಆಗ ಅದರಲ್ಲಿ ಸರ್ದಾರ್ಜಿ ಹೆಂಡತಿಯ ಮುಖ ಕಾಣಿಸಿತು. ಸರ್ದಾರ್ಜಿ ಸಿಟ್ಟಿನಿಂದ ಹೀಗೆಂದ : 'ಅಯೋಗ್ಯ, ಕನ್ನಡೀಲಿ ನೋಡ್ತಾ ನೋಡ್ತಾ ನನ್ನ ಹೆಂಡತಿಗೆ ಲೈನ್ ಹೊಡೆಯುತ್ತೀಯಾ, ಬಂದು ಹಿಂದೆ ಕುಳಿತುಕೋ, ನಾನು ಡ್ರೆೃವ್ ಮಾಡುತ್ತೇನೆ...'
*
ವಕೀಲ : ನಿನ್ನನ್ನು ಯಾಕೆ ಅರೆಸ್ಟ್ ಮಾಡಲಾಗಿದೆ?
ಸರ್ದಾರ್ಜಿ : ದೀಪಾವಳಿಗೆ ಮೊದಲು ಪಟಾಕಿ ತಗೊಂಡು ಹೋಗಿದ್ದಕ್ಕೆ!
ವಕೀಲ : ಅದು ಅಪರಾಧವಲ್ಲವಲ್ಲ. ಹಬ್ಬಕ್ಕಿಂತ ಎಷ್ಟು ದಿನ ವಕ್ಷಿುುಂಚೆ ನೀನು ಪಟಾಕಿ ತಗೊಂಡು ಹೋದೆ?
ಸರ್ದಾರ್ಜಿ : ಹಬ್ಬ ಇನ್ನೂ ವಾರವಿತ್ತು. ಅಂಗಡಿ ಬಾಗಿಲು ತೆರೆವ ಮೊದಲೇ ನಾನು ಒಳನುಗ್ಗಿ...
*
ಸರ್ದಾರ್ಜಿ : ನೀನು ನನ್ನನ್ನು ಪ್ರೀತಿಸುತ್ತಿದ್ದೀಯಾ?
ಸರ್ದಾರ್ಜಿ ಪ್ರೇಯಸಿ : ಹೌದು ಖಂಡಿತಾ?
ಸರ್ದಾರ್ಜಿ : ಮದುವೆಯಾದ ಮೇಲೆಯೂ ಹೀಗೇ ಪ್ರೀತಿಸುತ್ತೀಯ?
ಸರ್ದಾರ್ಜಿ ಪ್ರೇಯಸಿ : ಅದು ನನ್ನ ಗಂಡನ ಒಪ್ಪಿಗೆ ಮೇಲೆ ಅವಲಂಬಿಸಿದೆ.
ಮದುವೆ ಮತ್ತು ಗಂಡ-ಹೆಂಡತಿ!
- ಯಶಸ್ವಿ ಪುರುಷ ಹಣ ಸಂಪಾದಿಸುತ್ತಾನೆ. ಆತನ ಹೆಂಡತಿ ಖರ್ಚು ಮಾಡುತ್ತಾಳೆ. ಯಶಸ್ವಿ ಮಹಿಳೆ, ಹಣ ಸಂಪಾದಿಸುವ ಪುರುಷನನ್ನು ಹುಡುಕುತ್ತಾಳೆ!
- ಮದುವೆ ಎನ್ನುವುದು ಮೂರು ರಿಂಗ್‌ಗಳ ಸರ್ಕಸ್ : ಒಂದು ಎಂಗೇಜ್‌ಮೆಂಟ್ ರಿಂಗ್, ಇನ್ನೊಂದು ಮದುವೆ ರಿಂಗ್, ಕೊನೆಯದು ಸಫರಿಂಗ್.
- ಎರಡು ಸಲ ಗಂಡಸರು, ಹೆಂಗಸರನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಅವು ಯಾವುವೆಂದರೆ, ಮದುವೆಗೆ ಮುನ್ನ ಮತ್ತು ಮದುವೆ ನಂತರ.
*
ಒಂದು ಎಸ್‌ಎಂಎಸ್‌ನಲ್ಲಿ ಹೀಗಿತ್ತು -
ಇದನ್ನು ಓದದವರು ಜಾಣರೇನಲ್ಲ...
ಓದದೇ ಇರುವವರು ಲೂಸು!
ನಕ್ಕವರು ಮೆಂಟಲ್!
ಕೋಪ ಮಾಡಿಕೊಂಡ್ರೆ ಕೋತಿ!
ನನಗೆ ತಿರುಗಿ ಕಳುಹಿಸಿದ್ರೆ ಎಮ್ಮೆ!
ಏನೂ ಮಾಡದಿದ್ರೆ ದಂಡಪಿಂಡ!
ಕಾಲ್ ಮಾಡಿದ್ರೆ ತರ್ಲೆ!
ಸೇವ್ ಮಾಡಿದವರು ಗುಗ್ಗು!
ಈಗ ಏನು ಮಾಡುತ್ತೀಯಾ?











Click it and Unblock the Notifications