‘ಬಿಯರ್’ಅಣ್ಣಾ, ನೀನೇ ನನ್ನ ನಿಜವಾದ ಗೆಳೆಯ!
ಮನೆಯಲ್ಲಿ ನಿತ್ಯ ಜಗಳ ಕದನ. ಗಂಡ ಹೆಂಡತಿ ನಡುವೆ ಚೂರುಪಾರು ಉಳಿದಿದ್ದ ಅನ್ಯೋನ್ಯತೆ ಸತ್ತು ಸ್ವರ್ಗ ಸೇರಿ ಆರು ವಾರ ಆಗಿತ್ತು. ಮಾದು ಮ್ಲಾನ ವದನನಾಗಿ ವರಾಂಡದಲ್ಲಿ ಕುಳಿತಿದ್ದ. ಅವನ ಅರ್ಧಾಂಗಿ ಅವನನ್ನು ಕತ್ತುಹಿಡಿದು ಆಚೆ ದಬ್ಬುವುದು ಮಾತ್ರ ಬಾಕಿ ಉಳಿದಿತ್ತು. ಜೀವನದಲ್ಲಿ ಮುಂದೇನು? ಮಾದು ಚಿಂತಾಕ್ರಾಂತನಾಗಿ ಯೋಚಿಸುತ್ತಿರುವಾಗ ಫ್ರಿಜ್ ಪಕ್ಕದಲ್ಲಿ ಇಟ್ಟಿದ್ದ ಬಿಯರ್ ಕ್ರೇಟ್ ಕಣ್ಣಿಗೆ ಬಿತ್ತು.
'ಹೆಂಡತಿಯನ್ನು ಕಳೆದುಕೊಳ್ಳಲು ನೀನೇ ಕಾರಣ' ಎನ್ನುತ್ತಾ ಒಂದು ಖಾಲಿ ಬಾಟಲ್ ಎತ್ತಿಕೊಂಡವನೇ ಗೋಡೆಗೆ ಚಚ್ಚಿದ. ಫಳಾರ್ ಅಂತ ಒಡೆದು ಚೂರಾಯಿತು.
'ನನ್ನ ಮಕ್ಕಳು ನನ್ನ ಜತೆ ಇಲ್ಲ ಅದಕ್ಕೆ ನೀನೇ ಕಾರಣ' ಎನ್ನುತ್ತಾ ಇನ್ನೊಂದು ಖಾಲಿ ಬಾಟ್ಲಿಯನ್ನು ಚಪ್ಪಾಚೂರು ಮಾಡಿದ.
'ನನ್ನ ನೌಕರಿ ಹೋಗುವುದಕ್ಕೆ ನೀನಲ್ಲವೆ ಕಾರಣ ?' ಎನ್ನುತ್ತಾ ಮತ್ತೊಂದು ಖಾಲಿ ಶೀಶೆಯನ್ನು ಬೀಸಿ ಒಗೆದ. ಮನೆಯೆಲ್ಲಾ ಗಾಜು ಚೆಲ್ಲಾಪಿಲ್ಲಿಯಾಯಿತು.
ಈಗ ಇನ್ನೊಂದು ಬಾಟಲ್ ತೆಗೆದ. ಅದು ಇನ್ನೂ ಓಪನ್ ಮಾಡದ ಫುಲ್ ಬಾಟಲು ಬಿಯರ್. ಮಾದು ಚೀರಿದ. 'ಅಣ್ಣಾ ನನ್ನ ಜತೆ ನೀನಿರು. ನೀನೇ ನಿಜವಾದ ಗೆಳೆಯ , ನಿನ್ನದೇನೂ ತಪ್ಪಿಲ್ಲ....'
ಚೀಈಈಈಯರ್ಸ್!!!!
(ಜೋಕ್ ಕಳುಹಿಸಿದ್ದು; ಬಾಲಾಜಿ)
***
ಅವಳು : ಇದೇನೆ? ನೀನು ದಿನಾ ಟಿ.ವಿ.ಲಿ ಕ್ವಿಜ್ ನಡೆಸಿಕೊಡ್ತೀಯ. ಅಲ್ಲಿ ಯಾರೇ ತಪ್ಪು ಉತ್ತರ ಹೇಳಿದ್ರೂ ಛಕ್ ಅಂತ ಸರಿ ಉತ್ತರ ಹೇಳ್ತೀಯ. ಆದ್ರೆ ಇಲ್ಲಿ ನಾನು ಸಿಂಪಲ್ ಪ್ರಶ್ನೆ ಕೇಳಿದ್ರೂ ಒದ್ದಾಡ್ತೀಯ?
ಇವಳು : ಅಲ್ಲಾದ್ರೆ -ಉತ್ತರಗಳನ್ನು ಇನ್ನೊಂದು ಹಾಳೇಲಿ ಬರೆದು ನಮಗೇ ಕೊಟ್ಟಿರ್ತಾರೆ. ಅದನ್ನ ನೋಡ್ಕೊಂಡು ಹೇಳಬಹುದು.











Click it and Unblock the Notifications