ಲಾಲೂ ಮತ್ತು ಅವನ ಫ್ಯಾಮಿಲಿ ಪ್ಲಾನಿಂಗು!
ಲಾಲೂ, ಕುಟುಂಬ ಯೋಜನೆಯನ್ನು ಅನುಸರಿಸಲು ನಿರ್ಧರಿಸಿದ. ಅವನ ಯೋಜನೆ ಪ್ರಕಾರ -ವರ್ಷಕ್ಕೆರಡು ಮಕ್ಕಳನ್ನು ಪಡೆಯುವಂತಿಲ್ಲ! ವರ್ಷಕ್ಕೊಂದೇ ಮಗುವನ್ನು ಪಡೆಯಬೇಕು!
*
ಒಂದು ಸಲ ಲಾಲೂ ವಿಮಾನ ನಿಲ್ದಾಣದಿಂದ ಹೊರಬರುವಾಗ, ಗೇಟ್ ಬಳಿ ಸಕತ್ತು ರಷ್ ಇತ್ತು. ಜನವೋ ಜನ. ಲಾಲೂಗೆ ಭದ್ರತಾ ಸಿಬ್ಬಂದಿಯಾಬ್ಬ, wait please ಎಂದ. ಲಾಲೂ ಕೂಡಲೇ ' 70 ಕಿಲೋ' ಎಂದು ಉತ್ತರ ನೀಡಿ, ಮುಂದಕ್ಕೆ ಹೋದ..
*
ಪತ್ರಕರ್ತ : ವಿವಾಹ ವಿಚ್ಛೇದನಕ್ಕೆ ಪ್ರಮುಖ ಕಾರಣ ಏನ್ ಸಾರ್?
ಲಾಲೂ : ಮದುವೆ!
*
ಬಿಹಾರ ಮತ್ತು ವಾಷಿಂಗ್ಟನ್ ನಡುವೆ ಎಷ್ಟು ಸಮಯ ವ್ಯತ್ಯಾಸವಿದೆ ಅನ್ನೋದರ ಬಗ್ಗೆ ಲಾಲೂ ತಲೆಯಲ್ಲಿ ಪ್ರಶ್ನೆ ಮೂಡಿತು. ಅದನ್ನು ತಿಳಿಯಲು, ಪ್ರವಾಸೋದ್ಯಮ ಇಲಾಖೆಗೆ ಕರೆ ಮಾಡಿದ.
ಕರೆ ಸ್ವೀಕರಿಸಿದ ಅಧಿಕಾರಿ, 'ತಾವು ಲೈನಲ್ಲಿಡಿ, ನಾನು ಈಗಲೇ ಮಾಹಿತಿ ಹುಡುಕಿ ಹೇಳುತ್ತೇನೆ' ಎಂದು ಹುಡುಕಲು ಶುರುಮಾಡಿದ.. 'ಬೇಗ ಹೇಳ್ರೀ 'ಎಂದು ಅತ್ತಲಿನಿಂದ ಲಾಲೂ ಆತುರಪಡಿಸಿದ.
'ಪ್ಸೀಸ್ ಒಂದು ಸೆಕೆಂಡ್ ಸಾರ್... ' ಎಂದ ಅಧಿಕಾರಿ ಮಾಹಿತಿ ಹುಡುಕುತ್ತಲೇ ಇದ್ದ. ಅಧಿಕಾರಿ ಹೇಳಿದ 'ಒಂದು ಸೆಕೆಂಡ್' ಅನ್ನೋದನ್ನು ಕೇಳಿಸಿಕೊಂಡ ಲಾಲೂ, 'ಥ್ಯಾಂಕ್ಸ್' ಹೇಳಿ ಸಮಾಧಾನದಿಂದ ಪೋನ್ ಕೆಳಗಿಟ್ಟ.











Click it and Unblock the Notifications