ನಿಮ್ಮ ಲಿಪ್‌ಸ್ಟಿಕ್ಕೇ ಹುಳಿ ಇರಬೇಕು!
ಮಿಡುಕಲಾಡಿ ಮಂಜುಳಾ : ಏನಪ್ಪ, ನಿನ್ನ ಅಂಗಡಿಯಲ್ಲಿರುವ ಯಾವ ಬುಟ್ಟಿಯ ದ್ರಾಕ್ಷಿಯನ್ನು ಬಾಯಿಗೆ ಹಾಕಿಕೊಂಡರೂ ತುಂಬಾ ಹುಳಿಯಾಗಿದೆ.
ಅಂಗಡಿಯಾತ : ಹಾಗೇನಿಲ್ಲ ಮೇಡಂ. ದ್ರಾಕ್ಷಿ ಏನೋ ಸಿಹಿಯಾಗಿದೆ. ಆದರೆ, ನಿಮ್ಮ ಲಿಪ್‌ಸ್ಟಿಕ್ ಹುಳಿ ಇರಬೇಕು!
*
ಗಿರಾಕಿ : ಈ ಇಲಿ ಪಾಷಾಣ, ಚೆನ್ನಾಗಿದೆಯಾ?
ವ್ಯಾಪಾರಿ : ಸ್ವಲ್ಪ ನೆಕ್ಕಿನೋಡಿ, ಚೆನ್ನಾಗಿದ್ರೆ ತೊಗೊಳ್ಳಿ ಸಾರ್!
*
ಸುರೇಶ : ನನ್ನ ಹೆಂಡ್ತಿಗೆ ಕೈ ಉದ್ದ. ನನ್ನ ತಾಯಿಗೆ ನಾಲಿಗೆ ಉದ್ದ.
ಪ್ರವೀಣ್ : ಹಾಗಾದ್ರೆ... ಇಬ್ರಿಗೂ ಜಗಳ ಶುರುವಾದ್ರೆ... ನೀವೇನ್ ಮಾಡ್ತೀರಾ?
ಸುರೇಶ್ : ನನಗೆ ಕಾಲು ಉದ್ದ. ನಾನು ಓಡಿಬಿಡ್ತೀನಿ!
*
ಒಬ್ಬ ಭಿಕ್ಷುಕನನ್ನು ವಿಚಾರಿಸಲಾಯಿತು. 'ನಿನಗೆ ಲಾಟರಿಯಲ್ಲಿ 10ಲಕ್ಷ ಬಂದ್ರೆ ಏನು ಮಾಡುವೆ?'
ಭಿಕ್ಷುಕ : ನಾನು ಕಾರಲ್ಲಿ ಕುಳಿತು ಭಿಕ್ಷೆ ಬೇಡುತ್ತೇನೆ.
*
ಗುರು : ಇದು ನಿನ್ನ ಹೆಂಡ್ತಿ ಮಾಡಿದ ಉಪ್ಪಿಟ್ಟಲ್ಲ ಅಂತ ಹೇಗೆ ನಿಖರವಾಗಿ ಹೇಳ್ತೀಯ?
ಪ್ರದೀಪ : ಮತ್ತೆ, ಇದರಲ್ಲಿ ಒಂದೂ ಕೂದಲು ಇಲ್ಲವೇ ಇಲ್ಲ!











Click it and Unblock the Notifications