ಪ್ಲೀಸ್‌ ನಂಬಿ, ನಾನು ಭಾರತಮಾತೆಯ ಪುತ್ರಿಯಲ್ಲ..

ಪತ್ರಕರ್ತ : ನಿಮ್ಮ ಸಾಧನೆ ಬಗ್ಗೆ ಎಲ್ಲರಿಗೂ ಖುಷಿ ಇದೆ. ಎಲ್ಲರೂ ನಿಮ್ಮನ್ನು ಭಾರತಮಾತೆಯ ಹೆಮ್ಮೆಯ ಪುತ್ರಿ ಅನ್ನುತ್ತಾರೆ.. ಈ ಬಗ್ಗೆ ನಿಮ್ಮ ಅಭಿಪ್ರಾಯ?

ಸಿನಿಮಾ ನಟಿ : ಈ ಮಾತನ್ನು ನಾನು ಒಪ್ಪೋದಿಲ್ಲ. ನಾನು ತಿಪ್ಪಮ್ಮನ ಪುತ್ರಿ!

*

ಸಾಧು : ಪ್ರಾಣಿಗಳಿಗೆ ದೃಷ್ಟಿ ದೋಷದ ಸಮಸ್ಯೆ ಕಂಡು ಬರುವುದಿಲ್ಲ ಅಲ್ವಾ?

ಜಗ್ಗೇಶ್‌ : ಇರಬಹುದು ಅನ್ನಿಸುತ್ತೆ. ಯಾಕೆಂದರೆ, ಕನ್ನಡಕ ಧರಿಸಿದ ಯಾವ ಪ್ರಾಣಿಯನ್ನೂ ನಾನು ಈವರೆಗೆ ಕಂಡಿಲ್ಲ..!!

*

ದಂತ ವೈದ್ಯ : ಪ್ರಾಣಿಗಳಿಗೆ ಹಲ್ಲು ನೋವಿನ ಸಮಸ್ಯೆ ಇರೋದಿಲ್ಲ . ಅದೇನಿದ್ದರೂ ಮನುಷ್ಯರಿಗೆ ಮಾತ್ರ.

ರೋಗಿ : ನಿಜ್ವಾ ಸಾರ್‌? ನಿಮಗೆ ಹೆಂಗೆ ಗೊತ್ತಾಯ್ತು ಸಾರ್‌?

ದಂತ ವೈದ್ಯ : ಹೆಂಗೆ ಗೊತ್ತಾಯ್ತು ಅಂದ್ರೆ, ಯಾವ ಪ್ರಾಣಿಯೂ ನನ್ನ ಬಳಿಗೆ ಚಿಕಿತ್ಸೆಗಾಗಿ ಬಂದಿಲ್ಲ..

*

ಹೆಂಡತಿ : ಓ ನನ್ನ ಪತಿದೇವರೇ, ನೀವು ಸತ್ತರೇ ನಾನು ಹುಚ್ಚಿಯಾಗಿಬಿಡುತ್ತೇನೆ..

ಗಂಡ : ಹೌದಾ, ಇನ್ನೊಂದು ಮದುವೆಯಾಗುವುದಿಲ್ಲವಾ?

ಹೆಂಡತಿ : ಹುಚ್ಚಿಯಾದಾಗ ಏನು ಬೇಕಾದರೂ ಆಗಬಹುದು!

*

ನಮ್ಮ ನಂ.1 ಬುದ್ಧಿವಂತ ಜಗ್ಗೇಶಿ ಕೆಲವು ಸಂಗತಿಗಳನ್ನು ಸಂಶೋಧನೆ ಮೂಲಕ ಕಂಡು ಹಿಡಿದಿದ್ದಾನೆ. ಅವು ಯಾವುವೆಂದರೆ,

ಸಿಗರೇಟ್‌ನಿಂದ ಹೊಗೆ ಬರುತ್ತದೆ; ಹೊಗೆಯಿಂದ ಸಿಗರೇಟ್‌ ಬರೋದಿಲ್ಲ!
ಆಕಾಶದಿಂದ ಮಳೆ ಸುರಿಯುತ್ತದೆ; ಮಳೆಯಿಂದ ಆಕಾಶ ಸುರಿಯೋದಿಲ್ಲ!
ಭೂಮಿ ಮೇಲೆ ಮನುಷ್ಯ ನಿಲ್ಲುತ್ತಾನೆ; ಮನುಷ್ಯನ ಮೇಲೆ ಭೂಮಿ ನಿಲ್ಲೋದಿಲ್ಲ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+