Zomato: ಮತ್ತೊಂದು ಸುತ್ತು ಉದ್ಯೋಗ ಕಡಿತ ಘೋಷಣೆ ಮಾಡಿದ ಝೊಮ್ಯಾಟೊ
ಬೆಂಗಳೂರು, ಏಪ್ರಿಲ್ 01: ಸಿದ್ಧ ಆಹಾರಗಳನ್ನು ರೆಸ್ಟೋರೆಂಟ್‌ನಿಂದ ಗ್ರಾಹಕರಿಗೆ ತಲುಪಿಸುವ ಫುಡ್ ಡೆಲಿವರಿ ಅಪ್ಲಿಕೇಷನ್ ಝೊಮ್ಯಾಟೊ ಮತ್ತೊಂದು ಸುತ್ತಿನ ಉದ್ಯೋಗ ಕಡಿತದ ಘೋಷಣೆಯನ್ನು ಮಾಡಿದೆ. ಸುಮಾರು ಒಂದು ವರ್ಷದ ಹಿಂದೆ ನೇಮಕಗೊಂಡಿದ್ದ 600 ಜನರು ಉದ್ಯೋಗವನ್ನು ಕಳೆದುಕೊಳ್ಳಲಿದ್ದಾರೆ. ಇ-ಕಾಮರ್ಸ್ ಕ್ಷೇತ್ರದ ಬೇಡಿಕೆ ಹೆಚ್ಚುತ್ತಿರುವ ಹೊತ್ತಿನಲ್ಲಿಯೇ ಈ ಉದ್ಯೋಗ ಕಡಿತ ಅಚ್ಚರಿಗೆ ಕಾರಣವಾಗಿದೆ.
ಒಂದು ವರ್ಷದ ಹಿಂದೆ ಝೊಮ್ಯಾಟೊ ಕಸ್ಟಮರ್ ಸಪೋರ್ಟ್ ಅಸಿಸೋಯೆಟ್ಸ್ ಹುದ್ದೆಗೆ ಹಲವು ಜನರನ್ನು ನೇಮಕ ಮಾಡಿಕೊಂಡಿತ್ತು. ಈ ವಿಭಾಗದಲ್ಲಿ ಈಗ ಉದ್ಯೋಗ ಕಡಿತವನ್ನು ಮಾಡುತ್ತಿದೆ. 600 ಜನರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಅಂದಾಜಿಸಲಾಗಿದೆ.

ಆಹಾರ ಮತ್ತು ಗ್ರಾಸರಿಯನ್ನು ಮನೆ ಬಾಗಿಲಿಗೆ ತಲುಪಿಸುವ ಕ್ಷೇತ್ರದಲ್ಲಿನ ಬೆಳವಣಿಗೆ ನಿಧಾನಗತಿಯಲ್ಲಿ ಸಾಗುತ್ತಿದೆ. ಬ್ಲಿಂಕ್ ಇಟ್ ನಂತಹ ಸಂಸ್ಥೆಗಳು ಸಹ ನಷ್ಟ ಹೆಚ್ಚುತ್ತಿರುವ ಬಗ್ಗೆ ಮಾತನಾಡುತ್ತಿವೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.
ಎಐ ಪರಿಣಾಮವೇ?; ಝೊಮ್ಯಾಟೊ ತನ್ನ ಕಸ್ಟಮರ್ ಸಪೋರ್ಟ್ ಅಸಿಸೋಯೆಟ್ಸ್ ವಿಭಾಗದಲ್ಲಿ ಕೃತಕ ಬುದ್ಧಿಮತ್ತೆಯನ್ನು ಅಳವಡಿಕೆ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭಿಸಿದ್ದು, ಇದರ ಭಾಗವಾಗಿಯೇ ಉದ್ಯೋಗ ಕಡಿತ ಮಾಡಲಾಗುತ್ತಿದೆ ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಹಲವಾರು ಮಾಧ್ಯಮಗಳಲ್ಲಿ ವರದಿಗಳು ಬಂದಿದ್ದರೂ ಸಹ ಝೊಮ್ಯಾಟೊ ತನ್ನ ಉದ್ಯೋಗ ಕಡಿತದ ಕುರಿತು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಮಾಹಿತಿಗಳ ಪ್ರಕಾರ ಒಂದು ವರ್ಷದ ಹಿಂದೆ ಈ ವಿಭಾಗಕ್ಕೆ ಝೊಮ್ಯಾಟೊ 1,500 ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿತ್ತು.
ಮಾರಾಟ, ಸಮಯ ನಿರ್ವಹಣೆ, ಸಹಾಯ, ಪೂರೈಕೆ ಜಾಲ, ಆರ್ಡರ್‌ಗಳ ವಿಭಜನೆ ಸೇರಿದಂತೆ ವಿವಿಧ ಕಾರ್ಯಗಳನ್ನು ಕಸ್ಟಮರ್ ಸಪೋರ್ಟ್ ಅಸಿಸೋಯೆಟ್ಸ್ ವಿಭಾಗದಲ್ಲಿ ನೋಡಿಕೊಳ್ಳುತ್ತಿತ್ತು. ಕೆಲವು ದಿನಗಳ ಹಿಂದೆ ಈ ಉದ್ಯೋಗಿಗಳ ಗುತ್ತಿಗೆಯ ಅವಧಿ ಮುಕ್ತಾಯಗೊಂಡಿತ್ತು. ಆದರೆ ಅದನ್ನು ನವೀಕರಣ ಮಾಡಿರಲಿಲ್ಲ.
ಮಾಧ್ಯಮಗಳಿಗೆ ಝೊಮ್ಯಾಟೊ ಉದ್ಯೋಗಿಗಳು ನೀಡಿರುವ ಮಾಹಿತಿಯಗಳ ಅನ್ವಯ ಯಾವುದೇ ನೋಟಿಸ್ ಪಿರಿಯಡ್ ಇಲ್ಲದೇ, ಮೂರು ತಿಂಗಳ ವೇತನವನ್ನು ನೀಡಿ ಸುಮಾರು 600 ಜನರನ್ನು ಕೆಲಸದಿಂದ ತೆಗೆದು ಹಾಕಲಾಗುತ್ತಿದೆ. ಸರಿಯಾಗಿ ಕೆಲಸ ಮಾಡುತ್ತಿಲ್ಲ, ಶಿಸ್ತು ಪಾಲನೆ ಮಾಡುತ್ತಿಲ್ಲ ಎಂದು ಉದ್ಯೋಗಿಗಳಿಗೆ ಹೇಳಿ ಕೆಲಸದಿಂದ ತೆಗೆಯಲಾಗುತ್ತಿದೆ.
ಈ ಉದ್ಯೋಗ ಕಡಿತದಲ್ಲಿ ಗುರುಗ್ರಾಮ ಮತ್ತು ಹೈದರಾಬಾದ್‌ನಲ್ಲಿ ಹೆಚ್ಚು ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಎಷ್ಟು ಜನರನ್ನು ಕೆಲಸದಿಂದ ತೆಗೆಯಲಾಗುತ್ತಿದೆ? ಎಂದು ಖಚಿತವಾಗಿ ಝೊಮ್ಯಾಟೊ ಹೇಳಿಲ್ಲ.
ಕೆಲವು ದಿನಗಳ ಹಿಂದೆ ಝೊಮ್ಯಾಟೊ ಕಸ್ಟಮರ್ ಸಪೋರ್ಟ್ ಅಸಿಸೋಯೆಟ್ಸ್ ವಿಭಾಗಕ್ಕೆ Nugget ಎಂಬ ಅಪ್ಲಿಕೇಶನ್ ಬಿಡುಗಡೆ ಮಾಡಿತ್ತು. ಕೃತಕ ಬುದ್ಧಿಮತ್ತೆ ಆಧಾರಿತವಾಗಿದ್ದು, ಇದರ ಪ್ರಾಯೋಗಿಕ ಪರೀಕ್ಷೆಗಳು ಯಶಸ್ವಿಯಾಗಿತ್ತು.
ಝೊಮ್ಯಾಟೊ 2022ರಲ್ಲಿ ತನ್ನ ವಿವಿಧ ವಿಭಾಗದ 100 ಉದ್ಯೋಗಿಗಳನ್ನು ಒಟ್ಟಿಗೆ ಕೆಲಸದಿಂದ ತೆಗೆದಿತ್ತು. ಅದನ್ನು ಹೊರತುಪಡಿಸಿದರೆ ಈಗ ಮಾಡುತ್ತಿರುವುದು ಅತಿ ದೊಡ್ಡ ಉದ್ಯೋಗ ಕಡಿತ ಎಂದು ಅಂದಾಜಿಸಲಾಗಿದೆ.
ಕೆಲವು ದಿನಗಳ ಹಿಂದೆ ಉನ್ನತ ಮಟ್ಟದ ಹುದ್ದೆಗಳಲ್ಲಿ ಸಹ ಕೆಲವು ಕಡಿತಗಳನ್ನು ಮಾಡಲಾಗಿತ್ತು. ಸಹ-ಸಂಸ್ಥಾಪಕಿಯಾಗಿದ್ದ ಅಕೃತಿ ಚೋಪ್ರಾ ಅವರು ಕೆಲಸ ಕಳೆದುಕೊಂಡಿದ್ದರು. 2023ರ ನವೆಂಬರ್‌ನಲ್ಲಿ ಕಂಪನಿಯ ಸಹ ಸಂಸ್ಥಾಪಕ ಹಾಗೂ ಮುಖ್ಯ ತಾಂತ್ರಿಕ ಅಧಿಕಾರಿ ಗುಂಜನ್ ಪಾಟಿದಾರ್ ಕಂಪನಿ ಬಿಟ್ಟಿದ್ದರು.
-
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ












Click it and Unblock the Notifications