Year Ender 2024: ಈ ವರ್ಷ 1,30,000 ಉದ್ಯೋಗಿಗಳಿಗೆ ಆಘಾತ, ಮುಂದುವರಿದ ಟೆಕ್ ನೌಕರರ ವಜಾ, ವಿವರ

ಬೆಂಗಳೂರು, ಡಿಸೆಂಬರ್ 18: ಈ ವರ್ಷ ಕೊನೆಗೊಳ್ಳಲು ಕೆಲವೇ ದಿನಗಳು ಬಾಕಿ ಇವೆ. ಪ್ರಸಕ್ತ ವರ್ಷ ಅದೆಷ್ಟೋ ಜನರಿಗೆ ಸಿಹಿಯಾದರೆ, ಲಕ್ಷಾಂತರ ಉದ್ಯೋಗಿಗಳಿಗೆ ಕಹಿಯು ಆಗಿದೆ. ಏಕೆಂದರೆ ದೇಶದ ದೈತ್ಯ ಕಂಪನಿಯಗಳು ಉದ್ಯೋಗಿಗಳ ವಜಾ ಘೋಷಿಸಿವೆ. ಟೆಕ್ ಕಂಪನಿಯಗಳಲ್ಲಿ ವರ್ಷಾಂತ್ಯಕ್ಕೂ ನೌಕರರ ಕಡಿತ ಮುಂದುವರೆದಿದೆ. ದೇಶ, ವಿದೇಶಿ ಕಂಪನಿಗಳು ಹಲವು ಕಾರಣದಿಂದ ಉದ್ಯೋಗಿಗಳನ್ನು ಕೈ ಬಿಡುವ ಮೂಲಕ ಆಘಾತ ನೀಡುತ್ತಿದೆ. ಹೀಗೆ ಈ ವರ್ಷ ಉದ್ಯೋಗ ಕಳೆದುಕೊಂಡವರ ಕಂಪನಿ, ಕಡಿತ ಅಂಕಿ ಸಂಖ್ಯೆ ಮಾಹಿತಿ ಇಲ್ಲಿದೆ.

2024ರಲ್ಲಿ ತಂತ್ರಜ್ಞಾನ ಆಧಾರಿತ ಅನೇಕ ಕಂಪನಿಗಳು ಉದ್ಯೋಗಿಗಳ ವಜಾ ಮುಂದುವರೆಸಿದೆ. ಕೊರೋನಾ ಹಾಗೂ ಕೊರೋನಾ ನಂತರದ 2022 ಮತ್ತು 2023 ರಲ್ಲಿ ಗಮನಾರ್ಹ ಉದ್ಯೋಗ ವಜಾ ನೋಡಿದ್ದೇವು. ಇನ್ನೇನು ಈ ವರ್ಷ ಉದ್ಯೋಗ ಕಡಿತ ಅನುಮಾನ ಎನ್ನಲಾಯಿತಾದರೂ ಈ ವರ್ಷವು ಅಧಿಕ ನೌಕರರು ಉದ್ಯೋಗ ಕಳೆದುಕೊಂಡಿದ್ದಾರೆ.

Year Ender 2024 Tech Layoffs in This Year Know Monthly Wise and Company Wise Laid off list

ಲಕ್ಷಾಂತರ ಉದ್ಯೋಗಿಗಳಿಗೆ 2024 ವರ್ಷ ಕಹಿಯ ಅನುಭವ ನೀಡಿದೆ. ಮೂಲಗಳ ಪ್ರಕಾರ ಈ ವರ್ಷ 457 ಕಂಪನಿಗಳಲ್ಲಿ 1,30,000 ಉದ್ಯೋಗಿಗಳ ಕಡಿತವಾಗಿದೆ ಎಂದು ಉದ್ಯೋಗ ಕಡಿತದ ಸ್ವತಂತ್ರ ಟ್ರ್ಯಾಕರ್ Layoffs.fyi ಮಾಹಿತಿ ನೀಡಿದೆ.

ಮೈಕ್ರೋಸಾಫ್ಟ್, ಟಿಸಿಎಸ್, ಟೆಸ್ಲಾ, ಅಮೆಜಾನ್, ಗೂಗಲ್, ಸ್ನ್ಯಾಪ್ ನಂತರ ದೈತ್ಯ ಕಂಪನಿಗಳು 2024 ರ ಮೊದಲ ತಿಂಗಳುಗಳಲ್ಲಿ ಸಾಕಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವ ಪ್ರಕ್ರಿಯೆ ಆರಂಭಿಸಿತು. ದೊಡ್ಡ ದೊಡ್ಡ ಕಂಪನಿಗಳು ಮಾತ್ರವಲ್ಲದೇ, ಸಣ್ಣ ಸಣ್ಣ ಕಂನಿಗಳು, ಸ್ಟಾರ್ಟ್‌ಅಪ್‌ಗಳಲ್ಲಿ ಬೃಹತ್ ಉದ್ಯೋಗ ವಜ ನಾಡಿದೆ. ಎಷ್ಟೋ ಕಡೆಗಳಲ್ಲಿ ದೈನಂದಿ ಕಾರ್ಯಾಚರಣೆಗಳು ಸ್ಥಗಿತಗೊಂಡಿವೆ.

ಉದ್ಯೋಗ ಖಾತ್ರಿ ಇದೆ, ಇದರಲ್ಲಿ ಭವಿಷ್ಯ ಕಂಡು ಕೊಳ್ಳಬಹುದು ಎಂದುಕೊಂಡಿದ್ದವರ ಭವಿಷ್ಯ ಉದ್ಯೋಗ ಜಾಗವನ್ನು AI ತಂತ್ರಜ್ಞಾನ ಆವರಿಸಿಕೊಂಡಿದೆ. AI ಮತ್ತು ಯಾಂತ್ರೀಕೃತಗೊಂಡ ವ್ಯವಹಾರಗಳಲ್ಲಿ ಮನುಷ್ಯ ಪಾತ್ರವನ್ನು ನಿರ್ವಹಿಸುತ್ತಿದೆ. ಅದರ ಪರಿಣಾಮವನ್ನು ಈಗಾಗಲೇ ನೋಡುತ್ತಿದ್ದೇವೆ. ಕೌಶಲ್ಯ, ನಾವೀನ್ಯತೆಗೆ ಸಂಬಂಧಿಸಿದಂತೆ ಮನುಷ್ಯನ ಎಲ್ಲ ಕೆಲಸವನ್ನು ಎಐ ಮಾಡುತ್ತಿದೆ. ಇದು ಸಹ ನೌಕರರ ಗೇಟ್‌ಪಾಸ್‌ಗೆ ಕಾರಣವಾಗಿದೆ.

ಜನವರಿಯಲ್ಲಿ ಉದ್ಯೋಗ ವಜಾ ಮಾಹಿತಿ

ಈ ವರ್ಷ ಜನವರಿ ತಿಂಗಳಲ್ಲಿ ಪ್ರೂಫ್ ಪಾಯಿಂಟ್ ಜಾಗತಿಕವಾಗಿ 6% (280) ನೌಕರರ ವಜಾ, ವ್ಯಾಟ್ಪ್ಯಾಡ್ ಕಂಪನಿ ಶೇಕಡಾ 15% ವಜಾ, ಪೇಪಾಲ್ ಕಂಪನಿಯು ಸಾವಿರಾರು ಉದ್ಯೋಗಳ ವಜಾ ಮಾಡಿದೆ. ಅರೋರಾ ಕಂಪನಿ ಸುಮಾರು 1,000 ಸಿಬ್ಬಂದಿಯನ್ನು, ಐರೊಬೊಟ್ (iRobot) ಕಂಪನಿ 350, ಸೇಲ್ಸ್‌ಫೋರ್ಸ್ ಕಂಪನಿ 700 ಕೆಲಸಗಾರರು, ಫ್ಲೆಕ್ಸ್‌ಪೋರ್ಟ್ ಸುಮಾರು 20% ರಷ್ಟು ನೌಕರರು, ಮೈಕ್ರೋಸಾಫ್ಟ್ 1,900 ಉದ್ಯೋಗಿಗಳು, ಸ್ವಿಗ್ಗಿ ಫುಡ್ ಡೆಲಿವರಿ ಕಂಪನಿ ಸುಮಾರು 400 ಉದ್ಯೋಗಗಳನ್ನು ವಜಾಗೊಳಿಸಿತು. ಇವು ಸೇರಿ ಅನೇಕ ಕಂಪನಿಗಳು ಜನವರಿಯಲ್ಲಿ ನೌಕರರ ವಜಾಗೊಳಿಸಿವೆ.

ಫೆಬ್ರವರಿಯಲ್ಲಿ ವಜಾಗೊಂಡ ನೌಕರರ ವಿವರ

ಫೆಬ್ರವರಿಯಲ್ಲಿ ಬಂಬಲ್ ಕಂಪನಿಯು ಸುಮಾರು 350 ನೌಕರರು, ಆಪಲ್ ಕಂಪನಿಯ ಸ್ವಾಯತ್ತ ಎಲೆಕ್ಟ್ರಿಕ್ ಕಾರ್ ಯೋಜನೆಯಡಿ ನೂರಾರು ಉದ್ಯೋಗಿಗಳು, ಸೋನಿ ಕಂಪನಿಯು 900 ನೌಕರರು, ಎಕ್ಸ್ಪೀಡಿಯಾದಲ್ಲಿ 1,500 ಮಂದಿ,
ಸಿಸ್ಕೋ ಸುಮಾರು 4,000, ಇನ್ಸ್ಟಾಕಾರ್ಟ್ 250 ಉದ್ಯೋಗಿಗಳು, ಮೊಜಿಲ್ಲಾದಿಂದ 60 ಮತ್ತು ಅಮೆಜಾನ್ ಹಲವು ಉದ್ಯೋಗಿಗಳು ಕೆಲಸ ಕಳೆದುಕೊಂಡರು. ಇನ್ನೂ ಅನೇಕ ಕಂಪನಿಗಳು ಫೆಬ್ರವರಿಯಲ್ಲಿ ಉದ್ಯೋಗಿಗಳ ವಜಾ ಮಾಡಿದೆ.

ಉದ್ಯೋಗ ಕಡಿತಕ್ಕೆ ಕಾರಣಗಳೇನು?

ಇದೇ ರೀತಿ ಮಾರ್ಚ್, ಏಪ್ರಿಲ್, ಮೇ ನಿಂದ ಡಿಸೆಂಬರ್ ವರೆಗೆ ಈ ವರ್ಷ ನೂರಾರು ಕಂಪನಿಗಳು ತನ್ನ ನೌಕರರನ್ನು ಆರ್ಥಿಕ ಸರಿದೂಗಿಸುವಿಕೆ, ಖರ್ಚು ಕಡಿಮೆ ಮಾಡಲು, ನೌಕರರ ಮರು ಹೊಂದಿಸುವಿಕೆ, ನೌಕರರ ಜಾಗಕ್ಕೆ ಎಐ ತಂತ್ರಜ್ಞಾನ ಬಳಕೆ, ನೌಕರರ ಮರು ಸಂಘಟನೆ, ಕೌಶಲ್ಯಯುತರಿಗೆ ಆದ್ಯತೆ ಸೇರಿದಂತೆ ಮುಂತಾದ ಕಾರಣಗಳಿಂದ ನೌಕರರನ್ನು ಕೆಲಸದಿಂದ ತೆಗೆಯುವ ಮೂಲಕ ಶಾಕ್ ನೀಡಿವೆ. ಈ ಒಂದೇ ವರ್ಷ ಭಾರತ, ಜರ್ಮನಿ, ಯುಎಸ್ ಸೇರಿದಂತೆ ಅನೇಕ ದೇಶಗಳಲ್ಲಿ ಒಟ್ಟು 1,30,000 ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. 2025ರಲ್ಲಿ ಭಾಷ್ ಕಂಪನಿಯು ಸಾವಿರಾರು ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+