99 ಸ್ಟಾಫ್ ನರ್ಸ್ ಹುದ್ದೆಗಳಿವೆ, ಜುಲೈ 17ರೊಳಗೆ ಅರ್ಜಿ ಹಾಕಿ
ನವದೆಹಲಿ, ಜುಲೈ 01: ವೆಸ್ಟರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್(ಡಬ್ಲ್ಯೂ ಸಿ ಎಫ್ ಎಲ್) 2019ನೇ ನೇಮಕಾತಿ ಮುಂದುವರೆಸಿದ್ದು, ತನ್ನ ಅಧಿಕೃತ ವೆಬ್ ತಾಣದಲ್ಲಿ ಅಧಿಕೃತ ಪ್ರಕಟಣೆ ಹೊರಡಿಸಿದೆ. ಸ್ಟಾಫ್ ನರ್ಸ್ ಹುದ್ದೆಗೆ ಆಯ್ಕೆಯಾಗಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ತಮ್ಮ ಅರ್ಜಿಗಳನ್ನು ಜುಲೈ 17 ರೊಳಗೆ ಸಲ್ಲಿಸಬಹುದು.
ಸಂಸ್ಥೆ ಹೆಸರು : Western Coal Fields Limited
ಹುದ್ದೆ ಹೆಸರು: ಸ್ಟಾಫ್ ನರ್ಸ್
ಒಟ್ಟು ಹುದ್ದೆ: 99
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 17.07.2019
ವಿದ್ಯಾರ್ಹತೆ : ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 10+2 ಪಾಸ್, ಎ ಗ್ರೇಡ್ ನರ್ಸಿಂಗ್ ಡಿಪ್ಲೋಮಾ ಅಥವಾ 3 ವರ್ಷದ ಕೋರ್ಸಿನ ಪ್ರಮಾಣ ಪತ್ರ.

ವಯೋಮಿತಿ:
ಸಾಮಾನ್ಯ/ ಒಬಿಸಿ(ಕೆನೆ ಪದರ) : 18 ರಿಂದ 30 ವರ್ಷ.
ಒಬಿಸಿ (ಎನ್ ಸಿಎಲ್) : 18 ರಿಂದ 33 ವರ್ಷ
ಎಸ್ ಸಿ/ ಎಸ್ಟಿ : 18 ರಿಂದ 35 ವರ್ಷ
ನೇಮಕಾತಿ ಪ್ರಕ್ರಿಯೆ: ಅಧಿಕೃತ ಪ್ರಕಟಣೆಯಲ್ಲಿರುವಂತೆ...
ಪ್ರಮುಖ ದಿನಾಂಕಗಳು:
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 27.06.2019
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 17.07.2019
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ












Click it and Unblock the Notifications