ತುಮಕೂರಿನಲ್ಲಿ 69 ಹುದ್ದೆಗಳ ಭರ್ತಿಗೆ ಫೆ.20ರಂದು ಸಂದರ್ಶನ
ತುಮಕೂರು, ಫೆಬ್ರವರಿ 18 : ತುಮಕೂರಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮದಡಿ ವಿವಿಧ ಹುದ್ದೆಗಳಿಗೆ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳುತ್ತಿದೆ. ಫೆಬ್ರವರಿ 20ರಂದ ನೇರ ಸಂದರ್ಶನ ನಡೆಯಲಿದೆ.
ಒಟ್ಟು 69 ಹುದ್ದೆಗಳ ಭರ್ತಿಗೆ ನೇರ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಜಿಲ್ಲಾ ಯೋಜನಾ ನಿರ್ವಹಣಾ ಘಟಕ, ಎನ್‌ಎಚ್‌ಎಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಸಂದರ್ಶನ ನಡೆಯಲಿದೆ.
ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು ಹಾಗೂ ಅರಳಿಕೆ ತಜ್ಞರು, ಮಕ್ಕಳ ತಜ್ಞರು, ಸಾಮಾನ್ಯ ಕರ್ತವ್ಯ ವೈದ್ಯರು ಮತ್ತು ವೈದ್ಯಾದಿಕಾರಿಗಳು, ಶುಶ್ರೂಷಕರು, ನೇತ್ರ ಸಹಾಯಕ ಅಥವ ಫಾರ್ಮಸಿಸ್ಟ್, ಸ್ಪೆಷಲಿಸ್ಟ್, ಕೌನ್ಸೆಲರ್, ರಿಹಬಿಟೇಷನ್ ವರ್ಕರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಎಪಿಡೆಮಿಯಾಲಜಿಸ್ಟ್, ಸೀನಿಯರ್ ಟ್ರೀಟ್‌ಮೆಂಟ್ ಸೂಪರ್ ವೈಸರ್, ಕೀಳು&ಮೂಳೆ ತಜ್ಞರು, ಕ್ಷಕಿರಣ ತಜ್ಞರ ಹುದ್ದೆಗಳನ್ನು ಸಹ ಭರ್ತಿ ಮಾಡುತ್ತಿದ್ದು, ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಗಿದೆ.
ಸಂದರ್ಶನದದಿನದಂದು ಬೆಳಗ್ಗೆ 10 ರಿಂದ 12 ಗಂಟೆ ತನಕ ಅರ್ಜಿ ನಮೂನೆಯನ್ನು ವಿತರಣೆ ಮಾಡಲಾಗುತ್ತದೆ. ತದ ನಂತರ ಬಂದ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದಿಲ್ಲ. ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡಿದ ಬಳಿಕ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.












Click it and Unblock the Notifications