ಮೈಸೂರಲ್ಲಿ ಕೆಲಸ ಖಾಲಿ ಇದೆ; ಡಿ. 19ರಂದು ನೇರ ಸಂದರ್ಶನ
ಮೈಸೂರು, ಡಿಸೆಂಬರ್ 15: ಮೈಸೂರಿನಲ್ಲಿರುವ ಸಿಎಸ್ಆರ್‌ಟಿಐನಲ್ಲಿ ಯೋಜನಾ ಸಹಾಯಕ ಹುದ್ದೆಗಳ ಭರ್ತಿ ಮಾಡಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 19ರಂದು ಬೆಳಗ್ಗೆ 9.30ರಿಂದ ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.
ಕೇಂದ್ರಿಯ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ (ಸಿಎಸ್‌ಆರ್‌ಟಿಐ) 4 ಯೋಜನಾ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು ಮೈಸೂರಿನಲ್ಲಿ ಕೆಲಸ ಮಾಡಬೇಕು. ವೇತನ 12,000 ಪ್ರತಿ ತಿಂಗಳು.
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಎಸ್‌ಸಿ ಪದವಿಯನ್ನು ಪಡೆದಿರಬೇಕು. ಅಭ್ಯರ್ಥಿಗಳ ವಯೋಮಿತಿ 25 ವರ್ಷವನ್ನು ಮೀರಿರಬಾರದು. 31 ಅಕ್ಟೋಬರ್ 2020ಕ್ಕೆ ಅನ್ವಯವಾಗುವಂತೆ. ಎಸ್ಸಿ/ ಎಸ್‌ಟಿ/ ಒಬಿಸಿ/ ಅಂಗವಿಕಲ/ ಮಹಿಳಾ ಅಭ್ಯರ್ಥಿಗಳಿಗೆ 5 ವರ್ಷದ ವಯೋಮಿತಿ ಸಡಿಲಿಕೆ ಇದೆ.

ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಸಕ್ತರು ನೇರ ಸಂದರ್ಶಕ್ಕೆ ಡಿಸೆಂಬರ್ 19ರಂದು ಸೂಕ್ತ ದಾಖಲೆಗಳ ಜೊತೆ ಹಾಜರಾಗಬೇಕು. ಅಭ್ಯರ್ಥಿಗಳು ಸಂದರ್ಶನಕ್ಕೆ ಯಾವುದೇ ರೀತಿಯ ಶುಲ್ಕವನ್ನು ಪಾವತಿ ಮಾಡಬೇಕಿಲ್ಲ.
ವಿಳಾಸ; Central Sericultural Research and Training Institute, Central Silk Board, Ministry of Textiles, Govt. of India, Manandvadi Road, Srirampura, Mysore - 570008.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ವೆಬ್‌ಸೈಟ್‌ಗೆ ಭೇಟಿ ನೀಡಬಹುದು.












Click it and Unblock the Notifications