ಮೈಸೂರು; ವಿವಿಧ ಹುದ್ದೆಗೆ ಏಪ್ರಿಲ್ 30ರಂದು ನೇರ ಸಂದರ್ಶನ
ಮೈಸೂರು, ಏಪ್ರಿಲ್ 29; ಮೈಸೂರಿನ ಜಿಲ್ಲಾ ಕೋವಿಡ್ ಆಸ್ಪತ್ರೆ ಮತ್ತು ಕೋವಿಡ್ ಕೇರ್ ಸೆಂಟರ್‌ನಲ್ಲಿ ಕಾರ್ಯ ನಿರ್ವಹಣೆ ಮಾಡಲು ವಿವಿಧ ಹುದ್ದೆಗಳಿಗೆ ನೇರ ಸಂದರ್ಶನವನ್ನು ಏಪ್ರಿಲ್ 30ರಂದು ಆಯೋಜನೆ ಮಾಡಲಾಗಿದೆ.
ವೈದ್ಯಾಧಿಕಾರಿಗಳು, ಶುಶ್ರೂಷಕರು, ಗ್ರೂಪ್ 'ಡಿ' ಹುದ್ದೆಗಳನ್ನು ಕೋವಿಡ್ 19 ಕರ್ತವ್ಯಕ್ಕಾಗಿ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಮೆರಿಟ್ ಕಂ ರೋಸ್ಟರ್ ಆಧಾರದಲ್ಲಿ 6 ತಿಂಗಳ ಅವಧಿಗೆ ಅಥವ ನೇರ ನೇಮಕಾತಿ ಹುದ್ದೆಗಳು ಭರ್ತಿಯಾಗುವ ತನಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಆಸಕ್ತರು ಏಪ್ರಿಲ್ 30ರಂದು ಬೆಳಗ್ಗೆ 10 ರಿಂದ ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ನರ್ಸಿಂಗ್ ಆಫೀಸರ್ 18 ಹುದ್ದೆಗಳಿದ್ದು, 25,000 ರೂ. ವೇತನ ನಿಗದಿ ಮಾಡಲಾಗಿದೆ. ಮೆಡಿಕಲ್ ಆಫೀಸರ್ 18 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ವೇತನ 60 ಸಾವಿರ ರೂ.ಗಳು., 18 ಗ್ರೂಪ್ ಡಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಯ್ಕೆಯಾದವರಿಗೆ ಮಾಸಿಕ ವೇತನ 15,000 ರೂ.ಗಳು.
ನೇರ ಸಂದರ್ಶನಕ್ಕೆ ಬರುವಾಗ ಅಭ್ಯರ್ಥಿಗಳು ಮೂಲ ಅಂಕಪಟ್ಟಿ, ಎಲ್ಲಾ ಪ್ರಮಾಣ ಪತ್ರಗಳು, ವಿಳಾಸ ದೃಢೀಕರಣ, ಗುರುತಿನ ಚೀಟಿಯನ್ನು ತೆಗೆದುಕೊಂಡು ಬರಬೇಕು. ಎಲ್ಲಾ ದಾಖಲೆಗಳ ಝೆರಾಕ್ಸ್ ಪ್ರತಿಗಳನ್ನು ತರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನೇರ ಸಂದರ್ಶನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಎನ್. ಪಿ. ಸಿ. ಆಸ್ಪತ್ರೆ ಆವರಣ, ಮೈಸೂರು ಇಲ್ಲಿ ನಡೆಯಲಿದೆ.












Click it and Unblock the Notifications