• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಹಾರಾಣಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೆಲಸ ಖಾಲಿ ಇದೆ

|

ಹುಬ್ಬಳ್ಳಿ, ಅಕ್ಟೋಬರ್ 21: ಹುಬ್ಬಳ್ಳಿಯ ಮಹಾರಾಣಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 28ರೊಳಗೆ ಎಲ್ಲಾ ದಾಖಲಾತಿಗಳ ಜೊತೆ ನೇರ ಸಂದರ್ಶನಕ್ಕೆ ಹಾಜರಾಗಬಹುದು.

ಮಹಾರಾಣಿ ಪ್ರಥಮ ದರ್ಜೆ ಕಾಲೇಜು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠದ ಆದೇಶದ ಪ್ರಕಾರ ಅನುದಾನಕ್ಕೆ ಒಳಪಡುವ ಕಾಲೇಜು ಆಗಿದೆ. ಹಳೇ ಹುಬ್ಬಳ್ಳಿಯ ಗುರುನಾಥ ನಗರದಲ್ಲಿ ಕಾಲೇಜು ಇದೆ.

ಕೋಲಾರ; ಖಾಸಗಿ ಕಂಪನಿಗಳಲ್ಲಿ 5000 ನೇಮಕಾತಿ

ಕಾಲೇಜಿನಲ್ಲಿ ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಭರ್ತಿ ಮಾಡಲು ಸಂದರ್ಶನ ನಡೆಸಲಾಗುತ್ತಿದೆ. ಆಸಕ್ತರು ಅಕ್ಟೋಬರ್ 28ರೊಳಗೆ ಬೆಳಗ್ಗೆ 10.30ರ ಬಳಿಕ ಅಗತ್ಯ ದಾಖಲಾತಿಗಳ ಜೊತೆ ಸಂದರ್ಶನಕ್ಕೆ ಬರಬಹುದಾಗಿದೆ.

ಆರೋಗ್ಯ ಇಲಾಖೆ; ತಾತ್ಕಾಲಿಕವಾಗಿ ನೇಮಕಾತಿ ಆದವರಿಗೆ ಸಿಹಿ ಸುದ್ದಿ

ಹುದ್ದೆಗಳ ವಿವರ: ಸಹಾಯಕ ಪ್ರಾಧ್ಯಾಪಕರು (ಇಂಗ್ಲೀಶ್, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜ ಶಾಸ್ತ್ರ, ವಾಣಿಜ್ಯ ಶಾಸ್ತ್ರ) ಒಟ್ಟು ಹುದ್ದೆಗಳು 12.

ಐಐಎಸ್ಸಿ ನೇಮಕಾತಿ 2020: 85 ಸಹಾಯಕ ಹುದ್ದೆಗಳಿಗೆ ಅರ್ಜಿ

ಉಳಿದಂತೆ ದೈಹಿಕ ಸಹಾಯಕ ಪ್ರಾಧ್ಯಾಪಕ (1), ದ್ವಿತೀಯ ದರ್ಜೆ ಸಹಾಯಕ (ಕಂಪ್ಯೂಟರ್) 1, ಗ್ರಂಥಪಾಲಕ 1, ಜವಾನ 2 ಹುದ್ದೆಗಳನ್ನು ಭರ್ತಿ ಮಾಡಲು ನೇರ ಸಂದರ್ಶನ ನಡೆಸಲಾಗುತ್ತಿದೆ.

ಆಸಕ್ತ ಅಭ್ಯರ್ಥಿಗಳು ಕಾಲೇಜಿನಲ್ಲಿ ನಡೆಯುವ ನೇರ ಸಂದರ್ಶನಕ್ಕೆ ಪ್ರತಿದಿನ ಬೆಳಗ್ಗೆ 10.30ರ ಬಳಿಕ ಹಾಜರಾಗಬಹುದಾಗಿದೆ.

ವಿಳಾಸ: ಮಹಾರಾಣಿ ಪ್ರಥಮ ದರ್ಜೆ ಕಾಲೇಜು, ಗುರುನಾಥ ನಗರ, ಹಳೇ ಹುಬ್ಬಳ್ಳಿ, ಧಾರವಾಡ ಜಿಲ್ಲೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9880360200/8105479498.

English summary
Walk in interview for teaching and non-teaching post at Maharani first grade college Hubballi. Candidates can attend interview till October 28.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X