ಹುಬ್ಬಳ್ಳಿ ಕಿಮ್ಸ್‌ನಲ್ಲಿ ಕೆಲಸ ಖಾಲಿ ಇದೆ; ನೇರ ಸಂದರ್ಶನ
ಹುಬ್ಬಳ್ಳಿ, ಡಿಸೆಂಬರ್ 21: ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ನೇರ ಸಂದರ್ಶನ ಆಯೋಜನೆ ಮಾಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 22ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಸೀನಿಯರ್ ರೆಸಿಡೆಂಟ್ 6, ಅಸಿಸ್ಟೆಂಟ್ ಪ್ರೊಫೆಸರ್ 2 ಸೇರಿದಂತೆ 8 ಹುದ್ದೆಗಳ ನೇಮಕಾತಿಗಾಗಿ ನೇರ ಸಂದರ್ಶನ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳು ಹುಬ್ಬಳ್ಳಿಯಲ್ಲಿ ಕೆಲಸ ಮಾಡಬೇಕಿದೆ.
ಓಬಿಜಿ ಡಿಪಾರ್ಟ್‌ಮೆಂಟ್, ಅನಸ್ತೇಶಿಯಾ 50,000 ರೂ., ಮೆಡಿಸಿನ್ ಡಿಪಾರ್ಟ್‌ಮೆಂಟ್, ಸರ್ಜರಿ ಡಿಪಾರ್ಟ್‌ಮೆಂಟ್‌ಗೆ 60,000 ರೂ.ಗಳ ವೇತನ ನಿಗದಿ ಮಾಡಲಾಗಿದೆ.

ಆಸಕ್ತ ಅಭ್ಯರ್ಥಿಗಳು 22/12/2020ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ. ಬೆಳಗ್ಗೆ 10.30ರಿಂದ ನೇರ ಸಂದರ್ಶನ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಹುಬ್ಬಳ್ಳಿ ಕಿಮ್ಸ್ ನೇಮಕಾತಿ ನಿಯಮಗಳ ಅನ್ವಯ ಅಭ್ಯರ್ಥಿಗಳಿಗೆ ವಯೋಮಿತಿ ನಿಗದಿ ಮಾಡಲಾಗಿದೆ. ನೇರ ಸಂದರ್ಶನದಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವನ್ನು ನಿಗದಿ ಮಾಡಲಾಗಿದೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ 0836-2373348 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು. kimshubballi.org ವೆಬ್ ಸೈಟ್‌ಗೆ ಭೇಟಿ ನೀಡಬಹುದಾಗಿದೆ.
ನೇರ ಸಂದರ್ಶನ ನಡೆಯುವ ವಿಳಾಸ; Karnataka Institute of Medical Sciences, Hubballi - 580021, 10:30 AM.












Click it and Unblock the Notifications