ಕಲಬುರಗಿ; ಮೇ 13ರಂದು ನೇರ ಸಂದರ್ಶನ

ಕಲಬುರಗಿ, ಮೇ 11; ಕಲಬುರಗಿ ಜಿಲ್ಲೆಯಲ್ಲಿ ಮೇ 13ರಂದು ನೇರ ಸಂದರ್ಶನ ಆಯೋಜನೆ ಮಾಡಲಾಗಿದೆ. ಕಲಬುರಗಿಯ ಪ್ರತಿಷ್ಠಿತ ಮೆಡ್‍ಪ್ಲಸ್ ಕಂಪನಿಯು ಈ ನೇರ ಸಂದರ್ಶನ ನಡೆಸುತ್ತಿದ್ದು, ವಿವಿಧ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದೆ.

ಸರ್ಕಾರಿ ಐಟಿಐ ಕಾಲೇಜು ಹಿಂದುಗಡೆಯಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಬೆಳಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನೇರ ಸಂದರ್ಶನ ನಡೆಯಲಿದೆ.

ಮೆಡ್‍ಪ್ಲಸ್ ಕಂಪನಿಯು ಫಾರ್ಮಸಿಸ್ಟ್ 10 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಅಭ್ಯರ್ಥಿಗಳು ಡಿ-ಫಾರ್ಮಸಿ, ಬಿ-ಫಾರ್ಮಸಿ (ಎಸ್.ಪಿ.ಸಿ.) ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ ನಿಗದಿ ಮಾಡಿಲ್ಲ.

Walk In Interview In Kalaburagi On May 13

ಫಾರ್ಮಸಿ ಎಡ್ (Pharmacy Aide) 25 ಹುದ್ದೆಗಳಿಗೆ ಅಭ್ಯರ್ಥಿಗಳು ಪಿಯುಸಿ ಅಥವಾ ಯಾವುದೇ ಪದವಿ ಪಾಸಾಗಿರಬೇಕು. ವಯೋಮಿತಿಯ ಮಿತಿ ಹೇರಿಲ್ಲ.

ಅಪ್ರೆಂಟಿಸ್ 25 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ. ಪಿಯುಸಿ ಅಥವಾ ಯಾವುದೇ ಪದವಿ ಪಾಸಾಗಿರುವವರು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ವಯೋಮಿತಿ 18 ರಿಂದ 27 ವರ್ಷದೊಳಗಿರಬೇಕು.

ಟೆರಿಟರಿ ಹೆಚ್. ಆರ್. 1 ಹುದ್ದೆಗೆ ಎಂ. ಬಿ. ಎ. (ಹೆಚ್.ಆರ್) ಪಾಸಾಗಿರಬೇಕು. (4 ವರ್ಷದ ಅನುಭವ ಇರಬೇಕು) ವಯೋಮಿತಿ 22 ರಿಂದ 30 ವರ್ಷದೊಳಗಿರಬೇಕು.

ಟೆರಿಟರಿ ಇನ್‍ಚಾರ್ಜ್ 1 ಹುದ್ದೆಗೆ ಬಿ.ಟೆಕ್ (ಸಿವಿಲ್), ಬಿಇ (ಸಿವಿಲ್) ಪಾಸಾಗಿರಬೇಕು. ವಯೋಮಿತಿ 21 ರಿಂದ 28 ವರ್ಷದೊಳಗಿರಬೇಕು.

ಕಾರಪೆಂಟರ್ ಟೆಕ್ನಿಷಿಯನ್ 1 ಹುದ್ದೆ, ಕಾರಪೆಂಟರ್ ಹೆಲ್ಪರ್ 1 ಹುದ್ದೆ, ಎಲೆಕ್ಟ್ರಿಷಿಯನ್ 1 ಹುದ್ದೆ, ಎಲೆಕ್ಟ್ರಿಷಿಯನ್ ಹೆಲ್ಪರ್ 1 ಹುದ್ದೆ, ಎಸಿ ಟೆಕ್ನಿಷಿಯನ್ 1 ಹುದ್ದೆ ಹಾಗೂ ಎಸಿ ಹೆಲ್ಪರ್ 1 ಹುದ್ದೆಗಳಿಗೆ ಅಭ್ಯರ್ಥಿಗಳು ಐಟಿಐ ಪಾಸಾಗಿರಬೇಕು. ವಯೋಮಿತಿ 19 ರಿಂದ 28 ವರ್ಷದೊಳಗಿರಬೇಕು.

ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ರೆಸ್ಯೂಮ್ ಹಾಗೂ ಆಧಾರ್ ಕಾರ್ಡ್‍ದೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬೇಕು. ಸಂದರ್ಶನಕ್ಕೆ ಆಗಮಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆ ನೀಡುವುದಿಲ್ಲ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 08472-274846.

ಕೊಪ್ಪಳದಲ್ಲಿ ವಾಕ್ ಇನ್ ಇಂಟರ್‌ ವ್ಯೂ; ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಮೇ 12ರ ಬೆಳಗ್ಗೆ 10 ಗಂಟೆಯಿಂದ 3 ಗಂಟೆಯವರೆಗೆ ವಾಕ್ ಇನ್ ಇಂಟರ್‌ವ್ಯೂವ್ ಆಯೋಜನೆ ಮಾಡಲಾಗಿದೆ.

ವಾಕ್ ಇನ್ ಇಂಟರ್‌ವ್ಯೂವ್‌ನಲ್ಲಿ ಗಂಗಾವತಿಯ ಸ್ಪಂದನಾ ಸ್ಫೂರ್ತಿ ಫೈನಾನ್ಷಿಯಲ್ ಲಿ. ಭಾಗವಹಿಸುತ್ತಿದೆ. ಎಸ್. ಎಸ್. ಎಲ್. ಸಿ, ಪಿಯುಸಿ, ಐಟಿಐ, ಯಾವುದೇ ಪದವಿ ಪೂರ್ಣಗೊಳಿಸಿದ 20 ರಿಂದ 27 ವರ್ಷದೊಳಗಿನ ಪುರುಷ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಬಹುದು.

ಅಭ್ಯರ್ಥಿಗಳು ಸ್ವವಿವರದ ಮಾಹಿತಿ, ಪ್ರಮಾಣ ಪತ್ರಗಳು, ಆಧಾರ್ ಕಾರ್ಡ್, ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು.

ಆಸಕ್ತು ಹೆಚ್ಚಿನ ಮಾಹಿತಿಗಾಗಿ 7676151836 ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+