ಕಲಬುರಗಿ; ವಿವಿಧ ಹುದ್ದೆಗೆ ಮೇ 10ರಂದು ನೇರ ಸಂದರ್ಶನ

ಕಲಬುರಗಿ, ಮೇ 09; ಕೋವಿಡ್ ಸಾಂಕ್ರಾಮಿಕ ರೋಗದ ನಿರ್ವಹಣೆಗಾಗಿ ಕಲಬುರಗಿ ಜಿಲ್ಲೆಯ ತಾಲೂಕಾ ಆಸ್ಪತ್ರೆಗಳಲ್ಲಿ ರಚಿಸಲಾದ ಐಸಿಯುಗಳು ಮತ್ತು ಆಮ್ಲಜನಕ ಬೆಂಬಲಿತ ಹಾಸಿಗೆಗಳನ್ನು ನಿರ್ವಹಿಸಲು ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

6 ತಿಂಗಳ ಅವಧಿಗೆ ವೈದ್ಯರು, ಶುಶ್ರೂಷಕರು ಹಾಗೂ ಗ್ರೂಪ್ 'ಡಿ' ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಮೇ 10ರಂದು ನೇರ ಸಂದರ್ಶನ ಆಯೋಜನೆ ಮಾಡಲಾಗಿದೆ.

ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನೇರ ಸಂದರ್ಶನ ನಡೆಯಲಿದ್ದು, ತಾಲೂಕಾ ಮಟ್ಟದ ಆಸ್ಪತ್ರೆಗಳಾದ ಅಫಜಲಪುರ, ಆಳಂದ, ಚಿಂಚೋಳಿ, ಚಿತ್ತಾಪೂರ, ಜೇವರ್ಗಿ ಹಾಗೂ ಸೇಡಂಗಳಲ್ಲಿ ರಚಿಸಲಾದ ಐಸಿಯು ಹಾಗೂ ಆಮ್ಲಜನಕ ಬೆಂಬಲಿತ ಹಾಸಿಗೆಗಳ ವಿಭಾಗದಲ್ಲಿ ಕಾರ್ಯನಿರ್ವಹಿಸಲು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

Walk In Interview In Kalaburagi For Doctor Nurse And D Group Post

18 ಜನ ವೈದ್ಯರ ಹುದ್ದೆಗಳಿಗೆ ಎಸ್.ಎಸ್.ಎಲ್.ಸಿ., ಎಂ.ಬಿ.ಬಿ.ಎಸ್. ಅಂಕಪಟ್ಟಿ, ಇಂಟರ್‌ಶಿಪ್ ಮತ್ತು ಕೆ.ಎಮ್.ಸಿ. ರೇಜಿಸ್ಟ್ರೆಷನ್ ಪ್ರಮಾಣ ಪತ್ರದ ಶೈಕ್ಷಣಿಕ ದಾಖಲೆಗಳನ್ನು ಹೊಂದಿರಬೇಕು. ವಯೋಮಿತಿ 47 ವರ್ಷದೊಳಗಿರಬೇಕು.

18 ಜನ ಶುಶ್ರೂಷಕರು ಹುದ್ದೆಗಳಿಗೆ ಎಸ್.ಎಸ್.ಎಲ್.ಸಿ., ಡಿಪ್ಲೊಮಾ/ ಬಿ.ಎಸ್ಸಿ ನರ್ಸಿಂಗ್ ಅಂಕಪಟ್ಟಿ, ಶುಶ್ರೂಷಕ ನೋಂದಣಿ ಪ್ರಮಾಣ ಪತ್ರದ ಶೈಕ್ಷಣಿಕ ದಾಖಲಾತಿಗಳು ಹೊಂದಿರಬೇಕು. ವಯೋಮಿತಿ 40 ವರ್ಷ.

18 ಗ್ರೂಪ್ 'ಡಿ' ಹುದ್ದೆಗಳಿಗೆ ಎಸ್.ಎಸ್.ಎಲ್.ಸಿ. ಅಂಕಪಟ್ಟಿ ಶೈಕ್ಷಣಿಕ ದಾಖಲೆ ಹೊಂದಿರಬೇಕು. ಮಾಸಿಕ 15,000 ರೂ.ಗಳು, ವಯೋಮಿತಿ 40 ವರ್ಷದೊಳಗಿರಬೇಕು.

ಆಸಕ್ತರು ಶೈಕ್ಷಣಿಕ ಮೂಲ ದಾಖಲಾತಿ ಮತ್ತು ಝೆರಾಕ್ಸ್ ದಾಖಲಾತಿಗಳೊಂದಿಗೆ ಹಾಗೂ ಪಾಸ್‌ಪೋರ್ಟ್‌ ಸೈಜ್ ಭಾವಚಿತ್ರದೊಂದಿಗೆ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+