ಹಾವೇರಿ; ವಿವಿಧ ಹುದ್ದೆಗಳಿಗೆ ಆಗಸ್ಟ್ 3ರಂದು ನೇರ ಸಂದರ್ಶನ

ಬೆಂಗಳೂರು, ಜುಲೈ 28 : ಹಾವೇರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿವಿಧ ಹುದ್ದೆಗಳ ಭರ್ತಿಗೆ ನೇರ ಸಂದರ್ಶನವನ್ನು ಆಯೋಜಿಸಿದೆ. ಆಸಕ್ತ ಅಭ್ಯರ್ಥಿಗಳು ಆಗಸ್ಟ್ 3ರಂದು ನಡೆಯುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

ಶ್ರೂಶುಷಕರ 20, ಫಾರ್ಮಸಿಸ್ಟ್ 15, ಪ್ರಯೋಗಶಾಲಾ ತಂತ್ರಜ್ಞರ 14 ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ಭರ್ತಿ ಮಾಡಲಾಗುತ್ತದೆ. ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿಮಾಡಿಕೊಳ್ಳಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

ಡಿಪ್ಲೋಮಾ ನರ್ಸಿಂಗ್ ಕೋರ್ಸ್ ವ್ಯಾಸಂಗ ಮಾಡಿರುವ ಹಾಗೂ ಕರ್ನಾಟಕ ನರ್ಸಿಂಗ್ ಕೌನ್ಸಿಲ್‍ನಲ್ಲಿ ನೋಂದಾಯಿಸಿಕೊಂಡ ಅಭ್ಯರ್ಥಿಗಳು ಶ್ರೂಶುಷಕರ ಹುದ್ದೆಯ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಮಾಸಿಕ ವೇತನ 25 ಸಾವಿರ ರೂ.ಗಳು.

Walk In Interview In Haveri On August 5

ಎಸ್.ಎಸ್.ಎಲ್. ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಮಾನ್ಯತೆಪಡೆದ ಸಂಸ್ಥೆಯಲ್ಲಿ ಡಿಪ್ಲೋಮಾ ಇನ್ ಫಾಮರ್ಸಿ ವಿದ್ಯಾರ್ಹತೆ ಹಾಗೂ ಕರ್ನಾಟಕ ಫಾರ್ಮಸಿ ಕೌನ್ಸಿನಲ್ ನೊಂದಾಯಿಸಿಕೊಂಡವರಿಗಾಗಿ ಫಾರ್ಮಸಿಸ್ಟ್ 15 ಹುದ್ದೆಗೆ ನೇರ ಸಂದರ್ಶನ ನಡೆಸಲಾಗುವುದು. ಆಯ್ಕೆಯಾದವರಿಗೆ ಮಾಹೆಯನಾ 20 ಸಾವಿರ ರೂ. ವೇತನ ನೀಡಲಾಗುವುದು.

ಎಸ್.ಎಸ್.ಎಲ್.ಸಿ ಹಾಗೂ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಪ್ರಯೋಗಾಲಯ ತಂತ್ರಜ್ಞತೆಯಲ್ಲಿ ಎರಡು ವರ್ಷದ ಕರ್ನಾಟಕ ವೇಕೆಷನಲ್ ಶೈಕ್ಷಣಿಕ ಬೋರ್ಡ್‍ನಿಂದ ಡಿಪ್ಲೋಮಾ ಶೈಕ್ಷಣಿಕ ಅರ್ಹತೆ ಹೊಂದಿದ ಅಥವಾ ಪಿ.ಯು.ಸಿ. ವಿಜ್ಞಾನ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಥವಾ ಕರ್ನಾಟಕ ಅರೇ ವೈದ್ಯಕೀಯ ಮಂಡಳಿಯ ನಡೆಸುವ ಎರಡು ವರ್ಷದ ಪ್ರಯೋಗಶಾಲಾ ತರಬೇತಿ ಹೊಂದಿರುವವರು.

ಕರ್ನಾಟಕ ಅರೇ ವೈದ್ಯಕೀಯ ಮಂಡಳಿಯ ನಡೆಸುವ ಮೂರು ವರ್ಷದ ಡಿಪ್ಲೋಮಾ ಶೈಕ್ಷಣಿಕ ಅರ್ಹತೆ ಹೊಂದಿದವರನ್ನು ಪ್ರಯೋಗಶಾಲಾ ತಂತ್ರಜ್ಞರ ಹುದ್ದೆಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಮಾಸಿಕ ವೇತನ 20 ಸಾವಿರ ರೂ.ಗಳು.

ಎಲ್ಲಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 45 ವರ್ಷಗಳು. ಆರು ತಿಂಗಳ ಅವಧಿಗೆ ಮಾತ್ರ ನೇಮಕಾತಿ ನಡೆಯಲಿದೆ. ಎಲ್ಲ ಶೈಕ್ಷಣಿಕ ದಾಖಲೆಗಳೊಂದಿಗೆ ಆಗಸ್ಟ್ 3ರ ಬೆಳಗ್ಗೆ 10.30 ಗಂಟೆಗೆ ಸಂದರ್ಶನಕ್ಕೆ ಹಾಜರಾಗಬಹುದು.

ನೇರ ಸಂದರ್ಶನ ನಡೆಯುವ ಸ್ಥಳ : ಪಿ. ಬಿ. ರಸ್ತೆಯಲ್ಲಿರುವ ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08375-249066.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+