ಯೋಗ ತರಬೇತಿದಾರರ ಹುದ್ದೆಗೆ ನೇರ ಸಂದರ್ಶನ
ಹಾಸನ, ಫೆಬ್ರವರಿ 18; ಹಾಸನದಲ್ಲಿ ಯೋಗ ತರಬೇತಿದಾರರ ಹುದ್ದೆಗಳ ಭರ್ತಿಗೆ ನೇರ ಸಂದರ್ಶನವನ್ನು ಆಯೋಜನೆ ಮಾಡಲಾಗಿದೆ. ಫೆಬ್ರವರಿ 22 ರಿಂದ 26 ವರೆಗೆ ನೇರ ಸಂದರ್ಶನದಲ್ಲಿ ಆಸಕ್ತರು ಪಾಲ್ಗೊಳ್ಳಬಹುದಾಗಿದೆ.
ಆಯುಷ್ಮಾನ್ ಭಾರತ ಯೋಜನೆಯಡಿ ಅಭಿವೃದ್ಧಿ ಪಡಿಸಿರುವ ಆರ್ಯುರ್ವೇದ ಕ್ಷೇಮ ಕೇಂದ್ರಗಳಿಗೆ ಯೋಗ ತರಬೇತಿದಾರರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಉತ್ತೀರ್ಣರಾಗಿರಬೇಕು. ಯೋಗ ಬೋಧಕ ಕೋರ್ಸ್ ಪ್ರಮಾಣಪತ್ರ ಅಥವಾ ಪ್ರತಿಷ್ಠಿತ ಯೋಗ ತರಬೇತಿ ಸಂಸ್ಥೆ ಮೂಲಕ ಅನುಭವದ ಆದ್ಯತೆ ಇರಬೇಕು, ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ಯೋಗ ತರಬೇತಿದಾರರಿಗೆ ರೂ.8 ಸಾವಿರ ಮಾಸಿಕ ಸಂಭಾವನೆ ನೀಡಲಾಗುವುದು. ಯಾವುದೇ ರೀತಿಯ ಮೀಸಲಾತಿ ಇರುವುದಿಲ್ಲ ಎಲ್ಲಾ ವರ್ಗದವರು ಅರ್ಜಿ ಹಾಕಬಹುದು.
ಹಾಸನ ತಾಲೂಕಿನ ಮೆಳಗೋಡು ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದಲ್ಲಿ 2 ಹುದ್ದೆ, ಹೊಳೆನರಸೀನಪುರ ತಾಲೂಕಿನ ಮಾವನೂರು ಸರ್ಕಾರಿ ಆಯುವೇದ ಚಿಕಿತ್ಸಾಲಯದಲ್ಲಿ 2 ಹುದ್ದೆ, ಅರಸೀಕೆರೆ ತಾಲೂಕಿನ ಕುರಾದಹಳ್ಳಿ ಸರ್ಕಾರಿ ಆಯುವೇದ ಚಿಕಿತ್ಸಾಲಯದಲ್ಲಿ 1 ಹುದ್ದೆಗೆ ಖಾಲಿ ಇದೆ.
ಅಭ್ಯರ್ಥಿಗಳಿಗೆ ವಯೋಮಿತಿ ಕನಿಷ್ಠ 21, ಗರಿಷ್ಠ 60 ವರ್ಷ. ಆಸಕ್ತ, ಸ್ಥಳೀಯ ಅಭ್ಯರ್ಥಿಗಳು ಸಂದರ್ಶನದಲ್ಲಿ ನೇರವಾಗಿ ಭಾಗವಹಿಸಬಹುದಾಗಿದೆ. ಅಭ್ಯರ್ಥಿಗಳು ಸ್ವವಿವರಗಳೊಂದಿಗೆ ಎಸ್.ಎಸ್.ಎಲ್.ಸಿ , ಪಿ.ಯು.ಸಿ, ಆಧಾರ್ ಕಾರ್ಡ್ ಹಾಗೂ ತರಬೇತಿ ಅಥವಾ ಅನುಭವ ಪ್ರಮಾಣ ಪತ್ರದ ಮೂಲ ಪ್ರತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು.
ಹೆಚ್ಚಿನ ವಿವರಗಳಿಗಾಗಿ ಜಿಲ್ಲಾ ಆಯುಷ್ ಕಚೇರಿಗೆ 08172-272272 ಕರೆ ಮಾಡಬಹುದು. ನೇರ ಸಂದರ್ಶನ ಜಿಲ್ಲಾ ಆಯುಷ್ ಅಧಿಕಾರಿಗಳ ಕಚೇರಿ ಹೊಸಲೈನ್ ರಸ್ತೆ, ಹಾಸನ ಇಲ್ಲಿ ನಡೆಯಲಿದೆ.












Click it and Unblock the Notifications