ಇಎಸ್‌ಐಸಿ ಕರ್ನಾಟಕ; ಮೆಡಿಕಲ್ ರೆಫರಿ ಹುದ್ದೆಗಳಿಗೆ ನೇರ ಸಂದರ್ಶನ
ಬೆಂಗಳೂರು, ಜುಲೈ 12; ಕಾರ್ಮಿಕರ ರಾಜ್ಯ ವಿಮಾ ನಿಗಮ ಕರ್ನಾಟಕ ವಿವಿಧ ಸ್ಥಳಗಳಲ್ಲಿ ಇರುವ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನ ಆಯೋಜನೆ ಮಾಡಿದೆ. ತಾತ್ಕಾಲಿಕವಾಗಿ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಬೆಂಗಳೂರು ನಗರ ಸೇರಿದಂತೆ ರಾಜ್ಯವ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಒಟ್ಟು 14 Medical Referee ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತರು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.
ಜುಲೈ 30ರಂದು ಬೆಳಗ್ಗೆ 10 ರಿಂದ 11 ಗಂಟೆಯ ತನಕ ತಮ್ಮ ಹತ್ತಿರದ ಕಚೇರಿಯಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ. ಸಂದರ್ಶನದಲ್ಲಿ ಪಾಲ್ಗೊಳ್ಳುವವರಿಗೆ 30/7/2021ಕ್ಕೆ ಅನ್ವಯವಾಗುವಂತೆ 64 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ.

ನೇರ ಸಂದರ್ಶನದಲ್ಲಿ ಪಾಲ್ಗೊಳ್ಳುವವರು ಎಂಬಿಬಿಎಸ್ ಪದವಿಯನ್ನು ಪಡೆದಿರಬೇಕು. ನಿವೃತ್ತ ರಾಜ್ಯ/ ಕೇಂದ್ರ ಸರ್ಕಾರದ ವೈದ್ಯರುಗಳು ಸಂದರ್ಶನದಲ್ಲಿ ಪಾಲ್ಗೊಳ್ಳಬೇಕು.
ಖಾಲಿ ಇರುವ ಸ್ಥಳಗಳು; ಮಲ್ಲೇಶ್ವರ (ಬೆಂಗಳೂರು), ಬೊಮ್ಮಸಂದ್ರ (ಬೆಂಗಳೂರು), ಶಿವಮೊಗ್ಗ/ ಭದ್ರಾವತಿ, ಕಲಬುರಗಿ, ಮಂಗಳೂರು, ಬೆಳಗಾವಿ, ತುಮಕೂರು, ವಿಜಯಪುರ, ಮೈಸೂರು & ನಂಜನಗೂಡು, ಶಹಾಬಾದ್, ಕಾರವಾರ, ಹುಬ್ಬಳ್ಳಿ, ತೋರಣಗಲ್ಲು, ಹಾಸನ.
ಈ ನೇಮಕಾತಿಗಳು ಸಂಪೂರ್ಣ ತಾತ್ಕಾಲಿಕವಾಗಿದ್ದು, ಒಂದು ವರ್ಷದ ಅವಧಿಯನ್ನು ಒಳಗೊಂಡಿದೆ. ಅಗತ್ಯವಿದ್ದರೆ ವಿಸ್ತರಣೆ ಮಾಡುವ ಅವಕಾಶವೂ ಇದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಯಾವುದೇ ಪಿಎಫ್, ಪಿಂಚಣಿ, ಗ್ರಾಜ್ಯುಟಿ, ವೈದ್ಯಕೀಯ ಭತ್ಯೆಗಳನ್ನು ಪಡೆಯಲು ಅರ್ಹತೆ ಇಲ್ಲ.
ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications