ಕೊಪ್ಪಳ; ಮಾರ್ಚ್‌ 15ರಂದು ವಾಕ್ ಇನ್ ಸಂದರ್ಶನ

ಕೊಪ್ಪಳ, ಮಾರ್ಚ್ 13: ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಕೊಪ್ಪಳದಲ್ಲಿ ಮಾರ್ಚ್ 15ರಂದು ವಾಕ್ ಇನ್ ಸಂದರ್ಶನ ಆಯೋಜನೆ ಮಾಡಿದೆ. 18 ರಿಂದ 30 ವರ್ಷ ವಯೋಮಾನದ ಅಭ್ಯರ್ಥಿಗಳು ಪಾಲ್ಗೊಳ್ಳಬಹುದಾಗಿದೆ.

ಈ ನೇರ ಸಂದರ್ಶನದಲ್ಲಿ ವಿವಿಧ ಖಾಸಗಿ ಸಂಸ್ಥೆಗಳು ಭಾಗವಹಿಸಲಿದ್ದು, ತಮ್ಮಲ್ಲಿರುವ ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿವೆ. ಮಾರ್ಚ್ 15ರಂದು ಬೆಳಗ್ಗೆ 10ರಿಂದ 1.30ರ ತನಕ ವಾಕ್ ಇನ್ ಸಂದರ್ಶನ ನಡೆಯಲಿದೆ, ಪ್ರವೇಶ ಉಚಿತ.

Walk In Interview At Koppal On March 15

ನೇರ ಸಂದರ್ಶನದಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳು ಪಿಯುಸಿ/ ತತ್ಸಮಾನ, ಐಟಿಐ, ಯಾವುದೇ ಪದವಿಯನ್ನು ಪಡೆದಿರಬೇಕು. ವಿವಿಧ ಕಂಪನಿಗಳು ನೇರ ಸಂದರ್ಶನ ಮೂಲಕ ನೇಮಕಾತಿ ಮಾಡಿಕೊಳ್ಳಲಿವೆ.

ಅರ್ಹ ವಿದ್ಯಾರ್ಹತೆ ಹೊಂದಿದ ಯುವಕ ಮತ್ತು ಯುವತಿಯರು, ನಿರುದ್ಯೋಗಿ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಎಲ್ಲ ಪ್ರಮಾಣ ಪತ್ರಗಳು ಮತ್ತು ಆಧಾರ್ ಕಾರ್ಡ್‌ನ ಪ್ರತಿ, ರೆಸ್ಯೂಮ್ ಹಾಗೂ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಭಾಗವಹಿಸಬಹುದು.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾ ಆಡಳಿತ ಭವನ, ಮೊದಲನೇ ಮಹಡಿ, ಕೊಪ್ಪಳ ಇವರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆಗಳು 08539-220859.

ತರಬೇತಿಗೆ ಅರ್ಜಿ ಆಹ್ವಾನ; ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ಕೊಪ್ಪಳ ವತಿಯಿಂದ ಜಿಲ್ಲೆಯ ಗ್ರಾಮೀಣ ಭಾಗದ ಆಸಕ್ತರಿಗೆ ವಿದ್ಯುತ್ ಮೋಟಾರ್ ದುರಸ್ತಿ ಮತ್ತು ಸರ್ವೀಸ್, ಮೊಬೈಲ್ ರಿಪೇರಿ, ಕಂಪ್ಯೂಟರ್ ಡಿಟಿಪಿ, ಕುರಿ ಸಾಕಾಣಿಕೆ ಕುರಿತು ಉಚಿತ ತರಬೇಯನ್ನು ನೀಡಲಾಗುತ್ತಿದೆ. ಆಸಕ್ತರು ಅರ್ಜ ಸಲ್ಲಿಸಬಹುದು.

30 ದಿನಗಳ ವಿದ್ಯುತ್ ಮೋಟಾರ್ ದುರಸ್ತಿ ಮತ್ತು ಸರ್ವೀಸ್ ತರಬೇತಿ. 30 ದಿನಗಳ ಮೊಬೈಲ್ ರಿಪೇರಿ, 45 ದಿನಗಳ ಕಂಪ್ಯೂಟರ್ ಡಿಟಿಪಿ ತರಬೇತಿ, 10 ದಿನಗಳ ಕುರಿ ಸಾಕಾಣಿಕೆ ತರಬೇತಿಗಳನ್ನು ಊಟ ಮತ್ತು ವಸತಿಯೊಂದಿಗೆ ಉಚಿತವಾಗಿ ನೀಡಲಾಗುತ್ತದೆ.

ಅರ್ಜಿ ಸಲ್ಲಿಕೆ ಮಾಡುವವರು ಕನಿಷ್ಠ 8ನೇ ತರಗತಿ ಉತ್ತೀರ್ಣರಾಗಿರಬೇಕು. ವಯೋಮಿತಿ 18 ರಿಂದ 45 ವರ್ಷ. ಅರ್ಜಿದಾರರು ಜಿಲ್ಲೆಯ ಗ್ರಾಮೀಣ ಭಾಗದವರಾಗಿರಬೇಕು. ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು. ಮಾರ್ಚ್ 20ರಂದು ಸಂದರ್ಶನ ನಡೆಯಲಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾರ್ಚ್ 25ರಿಂದ ತರಬೇತಿ ಆರಂಭಿಸಲಾಗುತ್ತದೆ.

ಆಸಕ್ತರು ಆಧಾರ್ ಕಾರ್ಡ್‌, ರೇಷನ್ ಕಾರ್ಡ್, ಮಾರ್ಕ್ಸ್ ಕಾರ್ಡ್‌ಗಳ ಜೆರಾಕ್ಸ್ ಪ್ರತಿಗಳು ಹಾಗೂ 3 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ನಿರ್ದೇಶಕರು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ಕೈಗಾರಿಕಾ ಕೇಂದ್ರ ಆವರಣ, ಅಶೋಕ ಸರ್ಕಲ್ ಹತ್ತಿರ, ಕೊಪ್ಪಳ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಲು ದೂರವಾಣಿ ಸಂಖ್ಯೆಗಳು 08539-231038, 9483618178, 9481085217, 7259073827, 6364173983.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+