ಕೊಪ್ಪಳ: ಜನವರಿ 24ರಂದು ವಾಕ್ ಇನ್ ಸಂದರ್ಶನ
ಕೊಪ್ಪಳ, ಜನವರಿ 22: ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಮಾಹಿತಿಯೊಂದಿದೆ. ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ವಾಕ್ ಇನ್ ಸಂದರ್ಶನ ಆಯೋಜನೆ ಮಾಡಲಾಗಿದೆ. 18 ರಿಂದ 30 ವರ್ಷ ವಯೋಮಾನದ ಆಸಕ್ತ ಅರ್ಹ ನಿರುದ್ಯೋಗಿ ಅಭ್ಯರ್ಥಿಗಳು ಅಗತ್ಯ ದಾಖಲೆಗಳ ಜೊತೆ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.
ವಾಕ್ ಇನ್ ಸಂದರ್ಶನ ಜನವರಿ 24ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನಡೆಯಲಿದೆ. ಈ ನೇರ ಸಂದರ್ಶನದಲ್ಲಿ ಖಾಸಗಿ ಸಂಸ್ಥೆಯವರು ಭಾಗವಹಿಸಿ, ತಮ್ಮಲ್ಲಿನ ಖಾಲಿ ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಿದ್ದಾರೆ.

ಅರ್ಹ ಪಿಯುಸಿ ಅಥವಾ ತತ್ಸಮಾನ, ಯಾವುದೇ ಪದವಿ (ಬಿಇ ಹೊರತುಪಡಿಸಿ) ಅಭ್ಯರ್ಥಿಗಳು ಈ ವಾಕ್ ಇನ್ ಇಂಟರ್‌ವ್ಯೂವ್‌ನಲ್ಲಿ ಭಾಗವಹಿಸಬಹುದು. ಅಭ್ಯರ್ಥಿಗಳಿಗೆ ವಯೋಮಿತಿ 18 ರಿಂದ 30 ವರ್ಷಗಳು. ಆಸಕ್ತ ಅರ್ಹ ನಿರುದ್ಯೋಗಿ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಎಲ್ಲ ಪ್ರಮಾಣ ಪತ್ರಗಳು 3 ಪ್ರತಿಗಳೊಂದಿಗೆ ಆಧಾರ್ ಕಾರ್ಡ್ ಪ್ರತಿ, ಬಯೋಡೆಟಾ ಹಾಗೂ ಪಾಸ್‌ಪೋರ್ಟ್ ಅಳತೆಯ 2 ಭಾವಚಿತ್ರಗಳೊಂದಿಗೆ ಈ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾ ಆಡಳಿತ ಭವನ, ಮೊದಲನೇ ಮಹಡಿ, ಕೊಪ್ಪಳ ಇವರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 08539-220859.
ಕೊಡಗಿನಲ್ಲಿ ಕೆಲಸ ಖಾಲಿ ಇದೆ: ರಾಷ್ಟ್ರೀಯ ಆಯುಷ್ ಅಭಿಯಾನದ ಯೋಜನೆಯಡಿ ಕೊಡಗು ಜಿಲ್ಲಾ ಆಯುಷ್ ಇಲಾಖೆಯಲ್ಲಿ ಆಯುಷ್ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಗೆ ಕಮ್ಯುನಿಟಿ ಹೆಲ್ತ್ ಆಫಿಸರ್ (ಸಿಎಚ್‍ಒ) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸಲ್ಲಿಕೆ ಮಾಡಲು ಜನವರಿ 31 ಕೊನೆಯ ದಿನವಾಗಿದೆ.
ಅಭ್ಯರ್ಥಿಗಳು ತಮ್ಮ ಸಂಪೂರ್ಣ ವಿವರದ ಅರ್ಜಿಯನ್ನು ನಿಗದಿಪಡಿಸಿದ ಕನಿಷ್ಠ ವಿದ್ಯಾರ್ಹತೆ, ವಯೋಮಿತಿ ಹಾಗೂ ಇತರೆ ಎಲ್ಲಾ ದಾಖಲಾತಿಗಳೊಂದಿಗೆ ಸಲ್ಲಿಸಲು ಜನವರಿ 31 ಕೊನೆ ದಿನವಾಗಿದೆ. ನೇರ ಸಂದರ್ಶನಕ್ಕೆ ದಿನಾಂಕವನ್ನು ನಂತರ ತಿಳಿಸಲಾಗುತ್ತದೆ ಎಂದು ಪ್ರಕಟಣೆ ಹೇಳಿದೆ.
ಕಮ್ಯುನಿಟಿ ಹೆಲ್ತ್ ಆಫಿಸರ್ (ಸಿಎಚ್‍ಒ) ಶ್ರೀಮಂಗಲ-01 ಹುದ್ದೆ, ಪಾರಾಣೆ-01 ಹುದ್ದೆ, ಕನಿಷ್ಠ ವಿದ್ಯಾರ್ಹತೆ ಬಿಎಎಂಎಸ್, ಬಿಎಚ್‍ಎಂಎಸ್ ಮಾಸಿಕ ವೇತನ ರೂ. 40,000 (ರೂ.25,000 ಒಂದು ತಿಂಗಳಿಗೆ ಮತ್ತು ರೂ.15 ಸಾವಿರ ಒಂದು ತಿಂಗಳಿಗೆ ಪರ್ಮಾಪಾರ್ಮೆನ್ಸ್ ಪೇಮೆಂಟ್).
ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಗೆ ಕಮ್ಯುನಿಟಿ ಹೆಲ್ತ್ ಆಫಿಸರ್(ಸಿಎಚ್‍ಒ) ಹುದ್ದೆ ಒಂದು ವರ್ಷದವರೆಗೆ ಅಥವಾ ಸದರಿ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಲ್ಲಿ ಖಾಯಂ ವೈದ್ಯಾಧಿಕಾರಿಗಳ ಹುದ್ದೆಗಳು ಭರ್ತಿಯಾಗುವವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ಚಾಲ್ತಿಯಲ್ಲಿರುತ್ತದೆ. ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ.
ಅರ್ಜಿಯನ್ನು ಈ ಕಚೇರಿಯಿಂದ ಪಡೆದು ಸಲ್ಲಿಸಬೇಕಾದ ವಿಳಾಸ, ಜಿಲ್ಲಾ ಆಯುಷ್ ಅಧಿಕಾರಿಗಳು, ಜಿಲ್ಲಾ ಆಯುಷ್ ಕಚೇರಿ, ಮಹದೇವಪೇಟೆ, ಮಡಿಕೇರಿ-571201, ಕೊಡಗು.












Click it and Unblock the Notifications