ಚಿಕ್ಕಬಳ್ಳಾಪುರ; ಮಾರ್ಚ್ 15, 16ರಂದು ನೇರ ಸಂದರ್ಶನ
ಚಿಕ್ಕಬಳ್ಳಾಪುರ, ಮಾರ್ಚ್ 02; ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಕೇಂದ್ರಿಯ ವಿದ್ಯಾಲಯದಲ್ಲಿ ಟ್ರೈನ್ಡ್ ಗ್ರಾಜುಯೇಟ್ ಟೀಚರ್ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಮಾರ್ಚ್ 15 ರಂದು ಸಂದರ್ಶನ ನಡೆಯಲಿದೆ.
ನೇರ ಸಂದರ್ಶನದ ಮೂಲಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಮಾರ್ಚ್ 15ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆಯ ತನಕ ನೇರ ಸಂದರ್ಶನ ನಡೆಯಲಿದೆ. ಆಸಕ್ತರು ಅಗತ್ಯ ದಾಖಲಾತಿಗಳ ಜೊತೆ ಹಾಜರಾಗಬೇಕು.
ಟ್ರೈನ್ಡ್ ಗ್ರಾಜುಯೇಟ್ ಟೀಚರ್ (ಟಿಜಿಟಿ) ನೇಮಕಾತಿ. ಹಿಂದಿ, ಇಂಗ್ಲಿಶ್, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಸಂಸ್ಕೃತಿ, ಕನ್ನಡ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಮಾರ್ಚ್ 16ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 12 ಗಂಟೆಯ ತನಕ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ನೇರ ಸಂದರ್ಶನ ನಡೆಯಲಿದೆ. ಕಂಪ್ಯೂಟರ್ ಇನ್‌ಸ್ಟ್ರಕ್ಟರ್, ಡಾಟಾ ಎಂಟ್ರಿ ಆಪರೇಟರ್, ವೊಕೇಷನಲ್ ಕೋಚ್‌ಗಳು, ಇನ್‌ಸ್ಟ್ರಕ್ಟರ್ (ಆಟಗಳು/ ಆರ್ಟ್ಸ್/ ಕ್ರ್ಯಾಫ್ಟ್/ ಯೋಗ ಟೀಚರ್).
ನೇರ ಸಂದರ್ಶನಕ್ಕೆ ಆಗಮಿಸುವ ಅಭ್ಯರ್ಥಿಗಳು ಅರ್ಜಿಗಳನ್ನು ಡೌನ್ ಲೋಡ್ ಮಾಡಿಕೊಂಡು ಭರ್ತಿ ಮಾಡಿ, ಅಗತ್ಯ ದಾಖಲೆಗಳ ಜೊತೆಗೆ ನೇರ ಸಂದರ್ಶನಕ್ಕೆ ಹಾಜರಾಗಬೇಕು.
ಶೈಕ್ಷಣಿಕ ದಾಖಲೆಗಳು, ಕಾರ್ಯಾನುಭವದ ದಾಖಲೆಗಳು, ಆಧಾರ್ ಕಾರ್ಡ್, ರೆಸ್ಯೂಮ್, ಭರ್ತಿ ಮಾಡಿದ ಅರ್ಜಿಯನ್ನು ತರಬೇಕು.
ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ ವಿಳಾಸ
https://gauribidanur.kvs.ac.in/
ಕೊಡಗು ಜಿಲ್ಲೆಯಲ್ಲಿ ಕೆಲಸ ಖಾಲಿ ಇದೆ; ಪೊನ್ನಂಪೇಟೆ ಶಿಶು ಅಭಿವೃದ್ಧಿ ಯೋಜನೆಯ 6 ಅಂಗನವಾಡಿ ಕಾರ್ಯಕರ್ತೆ ಹಾಗೂ 29 ಅಂಗನವಾಡಿ ಸಹಾಯಕಿಯರ ಹುದ್ದೆಯನ್ನು ಭರ್ತಿ ಮಾಡಲು ಆನ್‍ಲೈನ್ ಮೂಲಕ ಅರ್ಜಿ ಕರೆಯಲಾಗಿದೆ. ಆಸಕ್ತ ಮತ್ತು ಅರ್ಹ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಅಂಗನವಾಡಿ ಕಾರ್ಯಕರ್ತೆಗೆ 10 ಸಾವಿರ ರೂ. ಮತ್ತು ಸಹಾಯಕಿಯರಿಗೆ 5 ಸಾವಿರ ರೂ., ಮಿನಿ ಅಂಗನವಾಡಿ ಕಾರ್ಯಕರ್ತೆಗೆ 6250 ರೂ. ಗೌರವಧನವನ್ನು ಪಾವತಿಸಲಾಗುತ್ತದೆ.
ಅಂಗನವಾಡಿ ಕಾರ್ಯಕರ್ತೆ ಹುದ್ದೆ ಹಚ್ಚಿನಾಡು, ಬೀರುಗ 1, ವೆಸ್ಟ್‍ನೆಮ್ಮಲೆ, ಕಾನೂರು ಕಾಲೋನಿ, ಕೋಣನಕಟ್ಟೆ 2, ಮಗ್ಗುಲದಲ್ಲಿ ಖಾಲಿ ಇದೆ.
ಅಂಗನವಾಡಿ ಸಹಾಯಕಿ ಹುದ್ದೆ ಕುಂದ, ಕಾಟಿಗುಂಡಿ ಪೈಸಾರಿ, ಬಿ.ಶೆಟ್ಟಿಗೇರಿ, ದೇವನೂರು 2, ತೆರಾಲು 2, ವಿ.ಬಾಡಗ, ಗುಡ್ಲೂರು,ಕೊಪ್ಪ, ಗದ್ದೆಮನೆ, ಹೊಸನಲ್ಲಿಕೋಟೆ, ಆಂಗೋಡು, ಬೇಗೂರು 1, ಹೈಸೋಡ್ಲೂರು, ಬೆಳ್ಳುಮಾಡು 1, ಬೇತ್ರಿ, ಪಡಚಿಕಾಡು, ಮೈಲಾಪುರ, ನಾಲ್ಕೇರಿ 1, ಪಾಲ್ದಾಳ, ಪೊನ್ನಂಪೇಟೆ 5, ಪೊನ್ನಂಪೇಟೆ 3, ದುಬಾರೆ, ಕುರ್ಚಿ 2, ಬೀರುಗ 1, ಕುಂದೂರು, ಟಿ.ಶೆಟ್ಟಿಗೇರಿ 1, ಸಣ್ಣರೇಷ್ಮೆ, ಬಂಗಾಳ ಬೀದಿ, ಗಾಂಧಿನಗರದಲ್ಲಿ ಖಾಲಿ ಇವೆ.
ಅರ್ಹ ಮತ್ತು ಆಸಕ್ತರು ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಮಾರ್ಚ್ 29 ಕೊನೆಯ ದಿನವಾಗಿದೆ. ಕಾರ್ಯಕರ್ತೆ ಹುದ್ದೆಗೆ 10ನೇ ತರಗತಿ ತೇರ್ಗಡೆ ಹಾಗೂ ಸಹಾಯಕಿ ಹುದ್ದೆಗೆ 4 ರಿಂದ 9ನೇ ತರಗತಿಯೊಳಗೆ ವ್ಯಾಸಂಗ ಮಾಡಿರಬೇಕು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 18 ರಿಂದ 35 ವರ್ಷಗಳ ವಯೋಮಿತಿ ನಿಗದಿ ಮಾಡಲಾಗಿದೆ. ಅಂಗನವಾಡಿ ಕೇಂದ್ರಕ್ಕೆ ಒಳಪಟ್ಟ ಗ್ರಾಮ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಕೆ ಮಾಡಲು ಅರ್ಹರು.
ಅಭ್ಯರ್ಥಿಗಳು ವೆಬ್‍ಸೈಟ್ www.anganwadirecruit.kar.nic.in ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಆನ್‍ಲೈನ್‍ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕಾಗಿದ್ದು, ಇತರೆ ಯಾವುದೇ ರೂಪದ ಅರ್ಜಿಗಳನ್ನು ಪರಿಗಣಿಸುವುದಿಲ್ಲ.
ಆಸಕ್ತರು ಹೆಚ್ಚಿನ ಮಾಹಿತಿಗೆ ಪೊನ್ನಂಪೇಟೆ ಶಿಶು ಅಭಿವೃದ್ಧಿ ಯೋಜನಾ ಕಚೇರಿಯ ದೂರವಾಣಿ ಸಂಖ್ಯೆ 08274-249010ಗೆ ಕರೆ ಮಾಡಬಹುದಾಗಿದೆ.












Click it and Unblock the Notifications