ಕಲಬುರಗಿ; ಜೂನ್ 23ರಂದು ನೇರ ಸಂದರ್ಶನ
ಕಲಬುರಗಿ, ಜೂನ್ 20; ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಜೂನ್ 23ರಂದು ನೇರ ಸಂದರ್ಶನ ಆಯೋಜನೆ ಮಾಡಲಾಗಿದೆ. 18 ರಿಂದ 28 ವರ್ಷದೊಳಗಿನ ಅಭ್ಯರ್ಥಿಗಳು ಅಗತ್ಯ ದಾಖಲೆಗಳ ಜೊತೆ ಪಾಲ್ಗೊಳ್ಳಬಹುದಾಗಿದೆ.
ಕಲಬುರಗಿ ಸರ್ಕಾರಿ ಐಟಿಐ ಕಾಲೇಜು ಹಿಂಭಾಗದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಜೂನ್ 23ರ ಶುಕ್ರವಾರ ಬೆಳಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನೇರ ಸಂದರ್ಶನ ನಡೆಯಲಿದೆ.

ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ಈ ಕುರಿತು ಮಾಹಿತಿ ನೀಡಿದ್ದಾರೆ. ಆಸಕ್ತ ಅಭ್ಯರ್ಥಿಗಳು ತಮ್ಮ ಎಲ್ಲಾ ಅಂಕಪಟ್ಟಿಗಳ ಜೆರಾಕ್ಸ್, ರೆಸ್ಯೂಮ್, ಭಾವಚಿತ್ರಗಳು ಹಾಗೂ ಆಧಾರ್ ಕಾರ್ಡ್‍ದೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.
ಕಂಪನಿಗಳ ವಿವರ; ಈ ನೇರ ಸಂದರ್ಶನದಲ್ಲಿ ಎಮ್. ಪಿ. ಗಾರ್ಡಿಂಗ್ ಸೊಲ್ಯೂಷನ್ ಪ್ರೈ.ಲೀ. ಪಾಲ್ಗೊಳ್ಳುತ್ತಿದೆ. ಟೆಕ್ನಿಷಿಯನ್ ಹುದ್ದೆಗೆ ಐಟಿಐ/ ಡಿಪ್ಲೋಮಾ (ಇ ಆಂಡ್ ಇ, ಇ ಆಂಡ್ ಸಿ) ವಿದ್ಯಾರ್ಹತೆ ಹೊಂದಿರುವವರ ನೇಮಕಾತಿ ಮಾಡಿಕೊಳ್ಳುತ್ತಿದೆ. ವಯೋಮಿತಿ 18 ರಿಂದ 28 ವರ್ಷದೊಳಗಿರಬೇಕು.
ವಾಲ್ವಾಯ್ಲ್ ಫ್ಲೂಯ್ಡ್ ಪವರ್ ಇಂಡಿಯಾ ಪ್ರೈ.ಲಿ. ಟ್ರೈನಿ ಹುದ್ದೆಗೆ ಐಟಿಐ/ ಡಿಪ್ಲೋಮಾ ಪಾಸಾಗಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ. ವಯೋಮಿತಿ 18 ರಿಂದ 28 ವರ್ಷಗಳು.
ನೀಡ್ಸ್ ಮ್ಯಾನ್ ಪವರ್ ಸಪೋರ್ಟ್ ಸರ್ವಿಸಸ್ ಪ್ರೈ.ಲಿ. ಟೆಕ್ನಿಷಿಯನ್ ಹುದ್ದೆಗೆ ಐಟಿಐ/ ಡಿಪ್ಲೋಮಾ ಪಾಸಾಗಿರುವ, 18 ರಿಂದ 28 ವರ್ಷದೊಳಗಿನ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದೆ.
ಈ ನೇರ ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆಯನ್ನು ನೀಡಲಾಗುವುದಿಲ್ಲ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಸಂಪರ್ಕಿಸಬಹುದು. ಕರೆ ಮಾಡಲು ದೂರವಾಣಿ ಸಂಖ್ಯೆಗಳು 08472-274846, 9620095270.
ಕುವೈತ್‍ನಲ್ಲಿ ಚಾಲಕರ ಹುದ್ದೆಗೆ ನೋಂದಣಿ; ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದಿಂದ ಕುವೈತ್ ದೇಶದಲ್ಲಿ ಚಾಲಕರ ಕೆಲಸಕ್ಕಾಗಿ ಅಭ್ಯರ್ಥಿಗಳು ಬೇಕಾಗಿದ್ದಾರೆ. ಅರ್ಹರು ಹೆಸರು ನೋಂದಣಿ ಮಾಡಬೇಕು ಎಂದು ಬಳ್ಳಾರಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಡಿ. ಎಸ್. ಬಸವರಾಜಪ್ಪ ಹೇಳಿದರು.
ಅಭ್ಯರ್ಥಿಗಳಿಗೆ 30 ರಿಂದ 39 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಜಿಸಿಸಿ ವಿದೇಶದಲ್ಲಿ ಕೆಲಸ ಮಾಡಿರುವ ಅನುಭವಿಗಳಾಗಿರಬೇಕು. ವೇತನ 37,500 ರಿಂದ 40,200 ವರೆಗೆ (ಪ್ರತಿ ತಿಂಗಳಿಗೆ) ಇರುತ್ತದೆ. ಆಂಗ್ಲ ಮತ್ತು ಅರೆಬಿಕ್ ಭಾಷೆ ಮಾತನಾಡ ಬಲ್ಲವರಾಗಿರಬೇಕು.
ವೀಸಾ, ವೀಸಾ ಸ್ಟಾಂಪಿಂಗ್, ವಿಮಾನ ಟಿಕೆಟ್, ಪಿಸಿಸಿ, ಪಿಡಿಓಟಿ, ಎಮಿಗ್ರೇಷನ್ಸ್ ಕ್ಲಿಯರೆನ್ಸ್, ಊಟ ಮತ್ತು ವಸತಿ ಸೌಲಭ್ಯ ಹಾಗೂ ಆರೋಗ್ಯ ರಕ್ಷಣೆ, ವಿಮೆ ಎಲ್ಲವೂ ಸಂಪೂರ್ಣ ಉಚಿತವಾಗಿರುತ್ತದೆ.
ಆಸಕ್ತ ಅಭ್ಯರ್ಥಿಗಳು https://kvtsdc.com ವೆಬ್‌ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 8073852104, 9964502514 ಸಂಖ್ಯೆಗೆ ಕರೆ ಮಾಡಬಹುದು.












Click it and Unblock the Notifications