ಜೂನ್ 1ರಂದು ಹುಬ್ಬಳ್ಳಿ ಕಿಮ್ಸ್‌ನಲ್ಲಿ ವಿವಿಧ ಹುದ್ದೆಗೆ ನೇರ ಸಂದರ್ಶನ

ಹುಬ್ಬಳ್ಳಿ, ಮೇ 30 : ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಜೂನ್ 1ರಂದು ನೇರ ಸಂದರ್ಶನ ನಡೆಯಲಿದ್ದು, ಆಸಕ್ತ ಅಭ್ಯರ್ಥಿಗಳು ಪಾಲ್ಗೊಳ್ಳಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಿಸರ್ಚ್ ಸೈಂಟಿಸ್ಟ್ 2 (ಎಂಆರ್‌ಯು) 1 ಹುದ್ದೆ, ರಿಸರ್ಚ್ ಸೈಂಟಿಸ್ಟ್ 1 (ಎಂಆರ್‌ಯು) 1 ಹುದ್ದೆ, ಲ್ಯಾಬ್ ಟೆಕ್ನಿಷಿಯನ್ (ಎಂಆರ್‌ಯು) 2 ಹುದ್ದೆ, ಬಯೋಲಾಜಿಕಲ್ ಇಂಜಿನಿಯರ್ 1 ಹುದ್ದೆ, ಸೆಕ್ಯೂರಿಟಿ/ ಅಡ್ವೈಸರ್ 1 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ರಿಸರ್ಚ್ ಸೈಂಟಿಸ್ಟ್ ಹುದ್ದೆಗೆ ಲೈಫ್‌ ಸೈನ್ಸ್‌ನಲ್ಲಿ ಎಂಎಸ್‌ಸಿ ಪಿಎಚ್‌ಡಿ, ಲ್ಯಾಬ್ ಸೈಂಟಿಸ್ಟ್ ಹುದ್ದೆಗೆ ಬಯೋಮೆಡಿಕಲ್ ಇಂಜಿನಿಯರಿಂಗ್, ಸೆಕ್ಯೂರಿಟಿ ಅಡ್ವೈಸರ್ ಹುದ್ದೆಗೆ ಪೊಲೀಸ್ ಇಲಾಖೆಯಿಂದ ನಿವೃತ್ತಿ ಹೊಂದಿದವರು ಅರ್ಜಿಗಳನ್ನು ಸಲ್ಲಿಸಬಹುದು.

Walk In Interview At Hubballi KIMS On June 1

ಎಲ್ಲಾ ಹುದ್ದೆಗಳಿಗೆ ನಿಗದಿತ ಕಾರ್ಯಾನುಭವವನ್ನು ಅಭ್ಯರ್ಥಿಗಳು ಹೊಂದಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ 40 ರಿಂದ 70 ಸಾವಿರದ ತನಕ ಮಾಸಿಕ ವೇತನ ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನೇರ ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳು ತಮ್ಮ ಪ್ರಮಾಣ ಪತ್ರಗಳ ಮೂಲ ಪ್ರತಿಗಳ ಜೊತೆಗೆ, ಎರಡು ಸೆಟ್ ಝೆರಾಕ್ಸ್‌ ಪ್ರತಿಗಳನ್ನು ತರಬೇಕು ಎಂದು ಸೂಚನೆ ನೀಡಲಾಗಿದೆ.

ಸಂದರ್ಶನದ ಸ್ಥಳ : ಕರ್ನಾಟಕ ಇನ್ಸ್‌ಸ್ಟಿಟ್ಯೂಟ್‌ ಆಫ್ ಮೆಡಿಕಲ್ ಸೈನ್ಸ್‌, ಹುಬ್ಬಳ್ಳಿ, 580021.

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+