ಜ. 18ಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ನೇರ ಸಂದರ್ಶನ

ಹುಬ್ಬಳ್ಳಿ, ಜನವರಿ 16; ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಜನವರಿ 18ರಂದು ನೇರ ಸಂದರ್ಶನ ಆಯೋಜನೆ ಮಾಡಲಾಗಿದೆ. ತಾತ್ಕಾಲಿಕವಾಗಿ ಆರೋಗ್ಯ ನಿರೀಕ್ಷಕ ಸಿಬ್ಬಂದಿಗಳ ನೇಮಕಾತಿಗಾಗಿ ನೇರ ಸಂದರ್ಶನ ನಡೆಯಲಿದೆ.

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಖಾಲಿ ಇರುವ 9 ಹುದ್ದೆಗಳಿಗೆ ಅರ್ಹ ಶಿಕ್ಷಣ ಪಡೆದ ಆರೋಗ್ಯ ನಿರೀಕ್ಷಕರನ್ನು ನೇರ ಸಂದರ್ಶನದ ಮೂಲಕ ತಾತ್ಕಾಲಿಕವಾಗಿ ಒಂದು ವರ್ಷದ ಅವಧಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ಆಸಕ್ತ ಅರ್ಹ ಶಿಕ್ಷಣ ಪಡೆದ ಅಭ್ಯರ್ಥಿಗಳು ತಮ್ಮ ಮೂಲ ದಾಖಲಾತಿಗಳೊಂದಿಗೆ ಹಾಗೂ ದೃಢೀಕೃತ ನಕಲು ಪ್ರಮಾಣಪತ್ರಗಳೊಂದಿಗೆ ಜನವರಿ 18 ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನೇರ ಸಂದರ್ಶನ ನಡೆಯಲಿದೆ.

Walk In Interview At Hubballi Dharwad Municipal Corporation

ನೇರ ಸಂದರ್ಶನ ನಡೆಯುವ ಸ್ಥಳ; ಆಯುಕ್ತರ ಕಚೇರಿ ಸಭಾಭವನ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ, ಹುಬ್ಬಳ್ಳಿ.

ಆಸಕ್ತರು ಹೆಚ್ಚಿನ ವಿವರಗಳಿಗಾಗಿ www.hdmc.mrc.gov.in ಸಂಪರ್ಕಿಸಬಹುದು.

ಸಹಾಯಧನಕ್ಕಾಗಿ ಅರ್ಜಿ ಆಹ್ವಾನ; ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ವತಿಯಿಂದ 2022-23ನೇ ಸಾಲಿನಲ್ಲಿ ಧಾರವಾಡ ಜಿಲ್ಲೆಯ ಕನಿಷ್ಟ 18 ವರ್ಷ ತುಂಬಿದ ಅರ್ಹ ಕುಶಲ ಕರ್ಮಿಗಳು, ಕರಕುಶಲ ವೃತ್ತಿಗಾಗಿ ಬ್ಯಾಂಕಿನಿಂದ ಪಡೆದ ಸಾಲಕ್ಕೆ ಸಹಾಯಧನ ನೀಡಲಾಗುವುದು.

ಅತಿ ಸಣ್ಣ ಕುಶಲಕರ್ಮಿಗಳು ವಾಣಿಜ್ಯ ಬ್ಯಾಂಕ್, ಸಹಕಾರ ಬ್ಯಾಂಕ್, ಪ್ರಾದೇಶಿಕ ಗ್ರಾಮೀಣ ಬ್ಯಾಂಕ ಪತ್ತಿನ ಸಹಕಾರ ಸಂಘಗಳನ್ನು ಹೊರತುಪಡಿಸಿ ಗಳಿಂದ ರೂ.50,000 ಗಳವರೆಗೆ ಸಾಲ ಮತ್ತು ಸಹಾಯಧನ ಸೌಲಭ್ಯಒದಗಿಸುವ ಕುಶಲ ಕರ್ಮಿಗಳಿಗೆ ಸಾಲ-ಸಹಾಯಧನ ಎಂಬ ಈ ಹೊಸ ಯೋಜನೆಗೆ ಈ ಪೈಕಿ ಬ್ಯಾಂಕ್ ಸಾಲದ ಮೊತ್ತ ರೂ.35,000 ಮತ್ತು ಸರ್ಕಾರದ ಸಹಾಯಧನ ರೂ.15,000 ಸಾಲದಅರ್ಜಿ ನಮೂನೆಗಳನ್ನು ಜಂಟಿ ನಿರ್ದೇಶಕರಕಚೇರಿ, ಜಿಲ್ಲಾಕೈಗಾರಿಕಾಕೇಂದ್ರ, ರಾಯಾಪುರ, ಧಾರವಾಡ ಇವರಿಂದ ಕಚೇರಿ ವೇಳೆಯಲ್ಲಿ ಪಡೆದುಕೊಂಡು ಅಗತ್ಯದಾಖಲಾತಿಗಳೊಂದಿಗೆ ಜನವರಿ 25 ರೊಳಗೆ ಸಲ್ಲಿಸಬೇಕು.

ಆಸಕ್ತ ಕುಶಲಕರ್ಮಿಗಳು ಹೆಚ್ಚಿನ ವಿವರಗಳಿಗಾಗಿ ಕಚೇರಿ ದೂರವಾಣಿ ಸಂಖ್ಯೆ 0836-2322627, ಮೊಬೈಲ್ ಸಂಖ್ಯೆ 9686416189, ಕೈಗಾರಿಕಾ ವಿಸ್ತರಣಾಧಿಕಾರಿ, ಹುಬ್ಬಳ್ಳಿ, ಕುಂದಗೋಳ, ನವಲಗುಂದ ಹಾಗೂ ಅಣ್ಣಿಗೇರಿ ಇವರ ಮೊಬೈಲ್ ಸಂಖ್ಯೆ. 9902412428 ಸಂಖ್ಯೆಗೆ ಕರೆ ಮಾಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+