ಬೆಳಗಾವಿ; ಸೆ. 7ರಂದು ನೇರ ಸಂದರ್ಶನ, ಹುದ್ದೆ ಮತ್ತು ವೇತನ ವಿವರ
ಬೆಳಗಾವಿ, ಸೆಪ್ಟೆಂಬರ್ 01; ಬೆಳಗಾವಿಯಲ್ಲಿ ಸೆಪ್ಟೆಂಬರ್ 7ರಂದು ನೇರ ಸಂದರ್ಶನವನ್ನು ಆಯೋಜನೆ ಮಾಡಲಾಗಿದೆ. PM-ABHIM ಯೋಜನೆ ಅಡಿಯಲ್ಲಿ 'ನಮ್ಮ ಕ್ಲಿನಿಕ್' ಹಾಗೂ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿ ಬೆಳಗಾವಿ ಜಿಲ್ಲೆಯಲ್ಲಿ ಅನುಮೋದಿತ ಹಾಗೂ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
PM-ABHIM ಯೋಜನೆ ಅಡಿಯಲ್ಲಿ 'ನಮ್ಮ ಕ್ಲಿನಿಕ್' ಹಾಗೂ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿ ಬೆಳಗಾವಿ ಜಿಲ್ಲೆಯಲ್ಲಿ ಅನುಮೋದಿತ ಹಾಗೂ ಖಾಲಿ ಇರುವ ವಿವಧ ವೃಂದಗಳ ಹುದ್ದೆಗಳನ್ನು ಮೆರಿಟ್ ಕಂ ರೋಸ್ಟರ್ ಆಧಾರದ ಮೇಲೆ ತುಂಬಲಾಗುತ್ತಿದೆ.

ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲಿನ ತಾತ್ಕಾಲಿಕ ನೇಮಕಾತಿಗಾಗಿ ಸೆ. 7ರಂದು ಬೆಳಗ್ಗೆ 11ಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿಗಳ ಕಛೇರಿ ಲಸಿಕಾ ಸಂಸ್ಥೆ ಆವರಣ ಟಿಳಕವಾಡಿ, ಬೆಳಗಾವಿ ಇಲ್ಲಿ ನೇರ ಸಂದರ್ಶನವನ್ನು ಆಯೋಜನೆ ಮಾಡಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನೇರ ಸಂದರ್ಶನ ದಿನದಂದು ಎಲ್ಲ ಮೂಲ ದಾಖಲೆಗಳೊಂದಿಗೆ ಹಾಜರಾಗಿ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
ಯಾವ-ಯಾವ ಹುದ್ದೆಗಳು; PM ABHIM ಯೋಜನೆ ಅಡಿಯಲ್ಲಿ 'ನಮ್ಮ ಕ್ಲಿನಿಕ್' ಅನುಮೋದಿತ ಹುದ್ದೆಗಳು. ವೈದ್ಯರು 15, ಶುಶ್ರೂಷಕಿಯರು 15 ಮತ್ತು ಕಿ. ವೈ. ಪ್ರಯೋಗ ಶಾಲಾ ತಂತ್ರಜ್ಞರು.
ವೈದ್ಯ ಹುದ್ದೆಗೆ ವೇತನ 43,141 ನಿಗದಿ ಮಾಡಲಾಗಿದೆ. ಅಭ್ಯರ್ಥಿಗಳು MBBS ಪದವಿಯೊಂದಿಗೆ ಕೆ.ಎಂ.ಸಿ ನೋಂದಣಿ ಹೊಂದಿರಬೇಕು ಹಾಗೂ ಇಂಟರ್ನಶಿಪ್ ಪೂರೈಸಿರಬೇಕು.
ಶುಶ್ರೂಷಕಿ ಹುದ್ದೆಗೆ ವೇತನ 13,225 ನಿಗದಿ ಮಾಡಲಾಗಿದೆ. ಅಭ್ಯರ್ಥಿಗಳು ಸರ್ಕಾರ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದ Bsc Nursing/ General Nursing ಹೊಂದಿರ ಬೇಕು ಹಾಗೂ ಕರ್ನಾಟಕ ನರ್ಸಿಂಗ್ ಕೌನ್ಸಿಲಿಂಗ್‌ನಲ್ಲಿ ನೋಂದಣಿಯಾಗಿರಬೇಕು.
ಕಿ. ವೈ. ಪ್ರಯೋಗ ಶಾಲಾ ತಂತ್ರಜ್ಞರು ಹುದ್ದೆಗೆ ವೇತನ 12,839 ಆಗಿದೆ. ಅಭ್ಯರ್ಥಿಗಳು SSLC ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಮತ್ತು ಕರ್ನಾಟಕ ರಾಜ್ಯ ಅರೆವೈದ್ಯಕೀಯ ಮಂಡಳಿಯಲ್ಲಿ ನಡೆಸುವ ಪ್ರಯೋಗಶಾಲಾ ತಂತ್ರಜ್ಞತೆಯಲ್ಲಿ ಮೂರು ವರ್ಷ ಡಿಪ್ಲೋಮಾದಲ್ಲಿ ಉತ್ತೀರ್ಣ ಹೊಂದಿರಬೇಕು ಅಥವಾ ದ್ವಿತಿಯ ಪಿ.ಯು.ಸಿಯಲ್ಲಿ ವಿಜ್ಞಾನ ವಿಷಯದಲ್ಲಿ ಉತ್ತೀರ್ಣ ಹೊಂದಿರಬೇಕು.
ಕರ್ನಾಟಕ ರಾಜ್ಯ ಅರೆವೈದ್ಯಕೀಯ ಮಂಡಳಿಯಲ್ಲಿ ನಡೆಸುವ ಪ್ರಯೋಗಶಾಲಾ ತತ್ರಂಜ್ಞತೆಯಲ್ಲಿ ಎರಡು ವರ್ಷ ಡಿಪ್ಲೋಮಾದಲ್ಲಿ ಉತ್ತೀರ್ಣ ಹೊಂದಿರಬೇಕು ಹಾಗೂ ರಾಜ್ಯ ಅರೆವೈದ್ಯಕೀಯ ಮಂಡಳಿಯಲ್ಲಿ ನೋಂದಣಿಯಾಗಿರಬೇಕು.
ಖಾಲಿ ಹುದ್ದೆ, ವೇತನ; ರಾಷ್ಟ್ರೀಯ ನಗರ/ ಗ್ರಾಮೀಣ ಆರೋಗ್ಯ ಅಭಿಯಾನದಡಿ ಬೆಳಗಾವಿ ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳು. ವೈದ್ಯರು 5, ಫಾರ್ಮಸಿಸ್ಟ್ 2, ಬ್ಲಾಕ್ ಪ್ರೋಗ್ರಾಮ್ ಮ್ಯಾನೇಜರ್ 1 ಹುದ್ದೆಗಳು.
ವೈದ್ಯ ಹುದ್ದೆಗೆ 37,750 ರೂ. ವೇತನ ನಿಗದಿ ಮಾಡಲಾಗಿದೆ. ಅಭ್ಯರ್ಥಿಗಳು MBBS ಪದವಿಯೊಂದಿಗೆ ಕೆಎಂಸಿ ನೋಂದಣಿ ಇರತಕ್ಕದ್ದು. ಇಂಟರ್ನಶಿಪ್ ಪೂರೈಸಿರಬೇಕು.
ಫಾರ್ಮಸಿಸ್ಟ್ ಹುದ್ದೆಗೆ 13,800 ರೂ. ವೇತನ ನಿಗದಿ ಮಾಡಲಾಗಿದೆ. ಅಭ್ಯರ್ಥಿಗಳು ಬಿ-ಫಾರ್ಮ್/ ಡಿ-ಫಾರ್ಮ್ ಹಾಗೂ ಸಂಬಂಧಪಟ್ಟ ಮಂಡಳಿಯಿಂದ ನೋಂದಣಿಯಾಗಿರಬೇಕು.
ಬ್ಲಾಕ್ ಪ್ರೋಗ್ರಾಮ್ ಮ್ಯಾನೇಜರ್ ಹುದ್ದೆಗೆ 18,384 ವೇತನ ನಿಗದಿ ಮಾಡಲಾಗಿದೆ. ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂಬಿಎ ಸ್ನಾತಕೋತ್ತರ ಪದವಿ (Finance/ HR) ಪಡೆದಿರಬೇಕು. ಒಂದು ವರ್ಷದ Computer ತರಬೇತಿಯಲ್ಲಿ ಉತ್ತೀರ್ಣ ಹೊಂದಿರಬೇಕು. Minimum 4 Years of experience in accounting and administration experience in government organization are preferred.
ಷರತ್ತುಗಳು
* ಅಂಚೆ ಮೂಲಕ ಅಥವಾ ಖುದ್ದಾಗಿ ಅವಧಿ ಮೀರಿದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ
* ಸ್ಥಳೀಯ ಜಿಲ್ಲೆಯ ಅಭ್ಯರ್ಥಿಗಳಿಗೆ ನೇಮಕಾತಿಯಲ್ಲಿ ಆದ್ಯತೆ ನೀಡಿದ ನಂತರ ಸ್ಥಳೀಯ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಮಾತ್ರ ಬೇರೆ ಜಿಲ್ಲೆಯ ಅಭ್ಯರ್ಥಿಗಳ ಅರ್ಜಿಯನ್ನು ಪರಿಗಣಿಸಲಾಗುವುದು.
* ರಿಕ್ತ ಸ್ಥಾನಗಳು ಅವಶ್ಯಕತೆಗನುಗುಣವಾಗಿ ಹುಚ್ಚು ಅಥವಾ ಕಡಿಮೆ ಮಾಡುವ ಅಧಿಕಾರವನ್ನು ಆಯ್ಕೆ ಸಮಿತಿಯು ಕಾಯ್ದಿರಿಸಿಕೊಂಡಿರುತ್ತದೆ. * ಮೀಸಲಾತಿ ಕೋರುವವರು ಸಂಬಂಧಪಟ್ಟ ಎಲ್ಲ ದಾಖಲಾತಿಗಳನ್ನು ಲಗತ್ತಿಸುವುದು.
* ಪೂರ್ಣ ವಿದ್ಯಾರ್ಹತೆಯನ್ನು ಹೊಂದಿರಬೇಕು (Open university and distance education not considered)
* ವೈದ್ಯರು (MBBS) ಆಸಕ್ತ ವೈದ್ಯರು ಒಂದು ವರ್ಷದ ಅವಧಿಯ ಒಳಗಾಗಿ ಕಚೇರಿ ಕೆಲಸದ ಅವಧಿಲ್ಲಿ ಸ್ವ-ಲಿಖಿತ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು ನೇರ ಸಂದರ್ಶನದಂದು ನಿರೀಕ್ಷಿತ ಅಭ್ಯರ್ಥಿಗಳು ಇಲ್ಲದೇ ಹುದ್ದೆಗಳು ಖಾಲಿ ಉಳಿದಲ್ಲಿ ಅಂತಹ ಮೀಸಲಾತಿಗೆ ಸದರಿ ಅರ್ಜಿಯನ್ನು ಪರಿಶೀಲಿಸಿ ನೇಮಕಾತಿಗೊಳಿಸಲಾಗುವದು.












Click it and Unblock the Notifications