ಕೊಪ್ಪಳದಲ್ಲಿ ವಾಕ್ ಇನ್ ಇಂಟರ್‌ ವ್ಯೂ; ದಿನಾಂಕ, ವಿವರ

ಕೊಪ್ಪಳ, ಅಕ್ಟೋಬರ್ 05; ಕೊಪ್ಪಳದಲ್ಲಿ ವಾಕ್ ಇನ್ ಇಂಟರ್ ವ್ಯೂ ಮತ್ತು ಅಪ್ರೆಂಟಿಶಿಪ್ ಮೇಳವನ್ನು ಆಯೋಜನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಉದ್ಯೋಗ ಹುಡುಕುತ್ತಿರುವ ಯುವಕ/ ಯುವತಿಯರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.

ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಕೊಪ್ಪಳದ ಶ್ರೀರಾಮ ಫೈನಾನ್ಸ್ ಲಿ. ಸಹಯೋಗದಲ್ಲಿ ನೇರ ಸಂದರ್ಶನವನ್ನು ಅಕ್ಟೋಬರ್ 7ರ ಬೆಳಗ್ಗೆ 10 ರಿಂದ 2ರವರೆಗೆ ನಗರದ ಸ್ಟೇಷನ್ ರಸ್ತೆ ಬಸ್‌ ಸ್ಟ್ಯಾಂಡ್ ಎದುರು ಇರುವ ವಾಸುದೇವ ವರ್ಣೇಕರ್ ಕಾಂಪ್ಲೆಕ್ಸ್‌ನಲ್ಲಿರುವ ಶ್ರೀರಾಮ ಫೈನಾನ್ಸ್ ಲಿ. ಕಾರ್ಯಾಲಯದಲ್ಲಿ ಆಯೋಜಿಸಲಾಗಿದೆ.

Walk In Interview And Apprenticeship Mela At Koppal

ಶ್ರೀರಾಮ ಫೈನಾನ್ಸ್ ಲಿ. ಕೊಪ್ಪಳ ತಮ್ಮಲ್ಲಿನ ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದಾರೆ. ಬಿಎ, ಬಿಕಾಂ, ಬಿಎಸ್ಸಿ, ಎಂಕಾಂ, ಎಂಎಸ್ಸಿ & ಬಿಎಡ್ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ನೇರ ಸಂದರ್ಶನದಲ್ಲಿ ಭಾಗವಹಿಸಲು ಯಾವುದೇ ಶುಲ್ಕ ಇರುವುದಿಲ್ಲ, ಎಲ್ಲರಿಗೂ ಉಚಿತ ಪ್ರವೇಶವಿರುತ್ತದೆ. ಆಸಕ್ತಿಯುಳ್ಳ 21 ರಿಂದ 30 ವರ್ಷದ ವರೆಗಿನ ಅರ್ಹ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಎಲ್ಲ ಪ್ರಮಾಣ ಪತ್ರಗಳು ಮತ್ತು ಆಧಾರ್ ಕಾರ್ಡ್‌ ಪ್ರತಿ, ರೆಸ್ಯೂಮ್ ಹಾಗೂ ಪಾಸ್ ಪೋರ್ಟ್‌ ಅಳತೆಯ ಭಾವಚಿತ್ರಗಳೊಂದಿಗೆ ಭಾಗವಹಿಸಬಹುದಾಗಿದೆ.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾ ಆಡಳಿತ ಭವನ, ಮೊದಲನೇ ಮಹಡಿ, ಕೊಪ್ಪಳ ಇವರನ್ನು ಸಂಪರ್ಕಿಸಬಹುದು. ಕರೆ ಮಾಡಲು ದೂರವಾಣಿ ಸಂಖ್ಯೆ 8105693234.

ಗಂಗಾವತಿಯಲ್ಲಿ ಶಿಶಿಕ್ಷು ಮೇಳ; ಗಂಗಾವತಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಿಂದ ಶಿಶಿಕ್ಷು(ಅಪ್ರೆಂಟಿ ಶಿಪ್) ಮೇಳವನ್ನು ಅಕ್ಟೋಬರ್ 9ರಂದು ಆಯೋಜನೆ ಮಾಡಲಾಗಿದೆ ಎಂದು ಗಂಗಾವತಿ ಐಟಿಐ ಕಾಲೇಜಿನಲ್ಲಿ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಕೈಗಾರಿಕಾ ತರಬೇತಿ ಜಂಟಿ ನಿರ್ದೇಶಕರು ಮತ್ತು ಉದ್ಯೋಗ ಇಲಾಖೆ, ವಿಭಾಗೀಯ ಕಛೇರಿ ಕಲಬುರಗಿ ಪತ್ರಕ್ಕೆ ಅನುಗುಣವಾಗಿ ಶಿಶಿಕ್ಷು ಮೇಳವನ್ನು ಏರ್ಪಡಿಸಲಾಗಿದೆ. ಈ ಮೇಳದಲ್ಲಿ ಟಾಟಾ, ಕಿರ್ಲೋಸ್ಕರ್, ಹೊಸಪೇಟೆ ಸ್ಟೀಲ್ಸ್ ಲಿಮಿಟೆಡ್, ಟೊಯೋಟಾ ಮೋಟರ್ಸ್‍ ಬಿಡದಿ, ಹೋಂಡಾ ಮೋಟಾರ್ಸ್ ಹೊಸಕೋಟೆ ಮತ್ತು ಇನ್ನಿತರ ಪ್ರತಿಷ್ಠಿತ ಕಂಪನಿಗಳು ಭಾಗವಹಿಸುತ್ತಿವೆ.

ಈ ಮೇಳದಲ್ಲಿ ಪಿಯುಸಿ, ಐಟಿಐ, ಡಿಪ್ಲೋಮಾ, ಇಂಜಿನಿಯರಿಂಗ್ ಅಥವಾ ಡಿಗ್ರಿ ತೇರ್ಗಡೆ ಹೊಂದಿದ ಅರ್ಹ ಹಾಗೂ ಅಭಿರುಚಿಯುಳ್ಳ ಅಭ್ಯರ್ಥಿಗಳು ಭಾಗವಹಿಸಿ, ಪ್ರಮುಖ ವಿವಿಧ ಕಾರ್ಖಾನೆಗಳಲ್ಲಿ ಶಿಶಿಕ್ಷು ತರಬೇತಿಗೆ ಆಯ್ಕೆಯಾಗಬಹುದು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಗಂಗಾವತಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರ ಮೊಬೈಲ್ ಸಂಖ್ಯೆ 8904448925, 9448259832ಗೆ ಸಂಪರ್ಕಿಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+