ವಿವಿಧ ಹುದ್ದೆಗಳಿಗೆ ಅರ್ಜಿ ಕರೆದ ವಿಐಟಿಎಂ, ಬೆಂಗಳೂರಲ್ಲಿ ಕೆಲಸ
ಬೆಂಗಳೂರು, ನವೆಂಬರ್ 14 : ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿಗಳನ್ನು ಸಲ್ಲಿಸಲು 5 ಡಿಸೆಂಬರ್ 2018 ಕೊನೆಯ ದಿನವಾಗಿದೆ.
ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯ (ವಿಐಟಿಎಂ) 6 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಕೆಲಸ ಮಾಡಬೇಕಿದೆ.
ಟೆಕ್ನಿಕಲ್ ಅಸಿಸ್ಟೆಂಟ್ ಎ (ಸಿವಿಎಲ್) 1, ಟೆಕ್ನಿಕಲ್ ಅಸ್ಟಿಸ್ಟೆಂಟ್ ಎ (ಎಲೆಕ್ಟ್ರಾನಿಕ್ಸ್) 1, ಟೆಕ್ನಿಷಿಯನ್ ಎ (Draughtsman-Mechanical) 1, ಆಫೀಸ್ ಅಸಿಸ್ಟೆಂಟ್ (ಗ್ರೇಡ್ 3) 1 ಹುದ್ದೆ, ಡ್ರೈವರ್ 2 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಭರ್ತಿ ಮಾಡಿ ಸಲ್ಲಿಸಬೇಕಾಗಿದೆ. ಅರ್ಜಿಗಳ ಮೇಲೆ ಯಾವ ಹುದ್ದೆಗೆ ಎಂದು ಬರೆದು, ಡಿಸೆಂಬರ್ 5ರೊಳಗೆ ಸಲ್ಲಿಸಬೇಕಾಗಿದೆ. ಅರ್ಜಿಗಳನ್ನು ಸಲ್ಲಿಸಲು ವಿಳಾಸ Visvesvaraya Industrial & Technological Museum, Bangalore- 560 001.

ವಿದ್ಯಾರ್ಹತೆ ವಿವರಗಳು
* ಟೆಕ್ನಿಕಲ್ ಅಸಿಸ್ಟೆಂಟ್ ಎ (ಸಿವಿಎಲ್) ಮಾನ್ಯತೆ ಪಡೆದ ಸಂಸ್ಥೆಯಿಂದ ಸಿವಿಎಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು.
* ಟೆಕ್ನಿಕಲ್ ಅಸ್ಟಿಸ್ಟೆಂಟ್ ಎ ಮಾನ್ಯತೆ ಪಡೆದ ಸಂಸ್ಥೆಯಿಂದ ಡಿಪ್ಲೊಮಾ ಇನ್ ಇಂಜಿನಿಯರಿಂಗ್
* ಟೆಕ್ನಿಷಿಯನ್ ಎ (Draughtsman-Mechanical) ಮೆಟ್ರಿಕ್ಯುಲೇಷನ್ ವಿತ್ ಐಟಿಐ ಪ್ರಮಾಣ ಪತ್ರ ಅಥವ Draughtsman-Mechanical ಟ್ರೇಡ್‌ನಲ್ಲಿ ಅನುಭವ
* ಆಫೀಸ್ ಅಸಿಸ್ಟೆಂಟ್ (ಗ್ರೇಡ್ 3) ಹೈಯರ್ ಸೆಕೆಂಡರರಿಯನ್ನು ಮಾನ್ಯತೆ ಪಡೆದ ಸಂಸ್ಥೆಯಿಂದ ಪೂರ್ಣಗೊಳಿಸಿರಬೇಕು. 10 ನಿಮಿಷದಲ್ಲಿ 35 ಪದಗಳನ್ನು ಹಿಂದಿ ಅಥವ ಇಂಗ್ಲಿಷ್‌ನಲ್ಲಿ ಟೈಪ್ ಮಾಡಬೇಕು.
* ಡ್ರೈವರ್ 2 ಹುದ್ದೆಗೆ ಅರ್ಜಿ ಸಲ್ಲಿಸುವವರು 8ನೇ ತರಗತಿ ಪಾಸ್ ಆಗಿರಬೇಕು. ಲಘು ಮತ್ತು ಬೃಹತ್ ವಾಹನ ಚಾಲನಾ ಪರವಾನಿಗೆ ಪಡೆದಿರಬೇಕು. ಕನಿಷ್ಟ 5 ವರ್ಷದ ಅನುಭವ ಹೊಂದಿರಬೇಕು.

ವಯೋಮಿತಿಯ ವಿವರಗಳು
* ಟೆಕ್ನಿಕಲ್ ಅಸಿಸ್ಟೆಂಟ್ ಎ (ಸಿವಿಎಲ್), ಟೆಕ್ನಿಕಲ್ ಅಸ್ಟಿಸ್ಟೆಂಟ್ ಎ (ಎಲೆಕ್ಟ್ರಾನಿಕ್ಸ್), ಟೆಕ್ನಿಷಿಯನ್ ಎ (Draughtsman-Mechanical) 18 ರಿಂದ 35 ವರ್ಷಗಳು.
* ಆಫೀಸ್ ಅಸಿಸ್ಟೆಂಟ್ (ಗ್ರೇಡ್ 3), ಡ್ರೈವರ್ ಹುದ್ದೆಗಳಿಗೆ 18 ರಿಂದ 25 ವರ್ಷಗಳು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 100 ರೂ. ಡಿಡಿಯನ್ನು ಅರ್ಜಿ ಶುಲ್ಕವಾಗಿ Visvesvaraya Industrial and Technological Museumಗೆ ಸಂದಾಯವಾಗುವಂತೆ ಸಲ್ಲಿಸಬೇಕು.

ವೇತನ ಶ್ರೇಣಿಯ ವಿವರ
* ಟೆಕ್ನಿಕಲ್ ಅಸಿಸ್ಟೆಂಟ್ ಎ (ಸಿವಿಎಲ್) 29000-92300
* ಟೆಕ್ನಿಕಲ್ ಅಸ್ಟಿಸ್ಟೆಂಟ್ ಎ (ಎಲೆಕ್ಟ್ರಾನಿಕ್ಸ್) 29000-92300
* ಟೆಕ್ನಿಷಿಯನ್ ಎ (Draughtsman-Mechanical) 19900-63200
* ಆಫೀಸ್ ಅಸಿಸ್ಟೆಂಟ್ (ಗ್ರೇಡ್ 3) 19900-63200
* ಡ್ರೈವರ್ 19900-63200 ಪ್ರತಿ ತಿಂಗಳು

ಅರ್ಜಿಗಳನ್ನು ಸಲ್ಲಿಸಿ
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಚಾಲನಾ ಪರೀಕ್ಷೆ, ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ನಿಗದಿತ ನಮೂನೆಯಲ್ಲಿ ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡಿ, ಸೂಕ್ತ ದಾಖಲಾತಿಗಳ ಜೊತೆ ಸಲ್ಲಿಸಬೇಕಾಗಿದೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ











Click it and Unblock the Notifications