Get Updates
Get notified of breaking news, exclusive insights, and must-see stories!

UPSC Recruitment: ವಿವಿಧ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನ, ಮೆ 15 ಕೊನೆ ದಿನ..

ಬೆಂಗಳೂರು, ಏಪ್ರಿಲ್ 28: ಕೇಂದ್ರ ಸರ್ಕಾರ ವ್ಯಾಪ್ತಿಯಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲೊಂದು ಉತ್ತಮ ಅವಕಾಶ ಒದಗಿ ಬಂದಿದೆ. ಕೇಂದ್ರ ಲೋಕಸೇವಾ ಆಯೋಗ (UPSC) ಹಿರಿಯ ಪಶುವೈದ್ಯಾಧಿಕಾರಿ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕಾತಿ ಆರಂಭಿಸಿದೆ. ಈ ಸಂಬಂಧ ಪ್ರಕಟಣೆ ಹೊರಡಿಸಿದೆ. ಆಸಕ್ತರು ಕೂಡಲೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದೆ.

ಕೇಂದ್ರ ಲೋಕಸೇವಾ ಆಯೋಗ (UPSC) ಆಸಕ್ತ ಅಭ್ಯರ್ಥಿಗಳಿಗೆ ಖಾಲಿ ಇರುವ ಹಿರಿಯ ಪಶುವೈದ್ಯಾಧಿಕಾರಿ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿದೆ. ಮುಂದಿನ ತಿಂಗಳು ಮೇ 15ರೊಳಗಾಗಿ UPSC ಅಧಿಕೃತ ವೆಬ್‌ಸೈಟ್ www.upsc.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಕೊನೆಯ ದಿನದವರೆಗೆ ಕಾಯದೇ ಕೂಡಲೇ ಅರ್ಜಿ ಸಲ್ಲಿಸುವಂತೆ ಮನವಿ ಮಾಡಲಾಗಿದೆ. ವಿದ್ಯಾರ್ಹತೆ, ವಯೋಮಿತಿ, ಖಾಲಿ ಹುದ್ದೆಗಳೆಷ್ಟು ಹಾಗೂ ಇತರ ಮಾಹಿತಿ ಇಲ್ಲಿದೆ.

UPSC Recruitment 2025 Applications Invited For 40 Posts include Senior Veterinary Officer

ನೇಮಕಾತಿ ಪೂರ್ಣ ವಿವರ

ನೇಮಕಾತಿ ಸಂಸ್ಥೆ: ಕೇಂದ್ರ ಲೋಕಸೇವಾ ಆಯೋಗ (UPSC)

ಹುದ್ದೆಗಳ ಹೆಸರು: ಹಿರಿಯ ಪಶು ವೈಧ್ಯಾಧಿಕಾರಿ ಮತ್ತು ಇತರ

ಒಟ್ಟು ಹುದ್ದೆಗಳ ಸಂಖ್ಯೆ: 40

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್

ಅರ್ಜಿ ಸಲ್ಲಿಕೆ ವಿಳಾಸ: www.upsc.gov.in

ಅರ್ಜಿ ಸಲ್ಲಿಕೆ ಕೊನೆ ದಿನ: ಮೇ 15

ಮಾಸಿಕ ವೇತನ: ನಿಯಮಾನುಸಾರ

ಗರಿಷ್ಠ ವಯೋಮಿತಿ: ಹುದ್ದೆಗೆ ಅನುಗುಣವಾಗಿ 30 ರಿಂದ 38

ವಿದ್ಯಾರ್ಹತೆ ಏನಿರಬೇಕು?

ಈ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವ ಹುದ್ದೆಗೆ ಅರ್ಜಿ ಸಲ್ಲಿಸುತ್ತೀರಿ ಎಂಬುದರ ಮೇಲೆ ವಿದ್ಯಾರ್ಹತೆ ಭಿನ್ನವಾಗಿರುತ್ತದೆ. ವಿಜ್ಞಾನಿ-ಬಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಪ್ರಯೋಗಾಲಯ, ಇತರ ಸಂಸ್ಥೆ ವಿದ್ಯುತ್ ಅಂಗಡಿಗಳು/ವಸ್ತುಗಳು/ಅಳತೆ ಉಪಕರಣಗಳ ಪರೀಕ್ಷೆ/ಮಾಪನಾಂಕ ನಿರ್ಣಯ ಮತ್ತು ಮೌಲ್ಯಮಾಪನದಲ್ಲಿ ಒಂದು ವರ್ಷದ ಅನುಭವ ಇರಬೇಕು. ಇನ್ನು ಬೇರೆ ಬೇರೆ ಹುದ್ದೆಗಳ ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್ ಪದವಿ ಹೊಂದಿರುವುದು ಕಡ್ಡಾಯಾಗಿದೆ ಎಂದು ಆಯೋಗ ತಿಳಿಸಿದೆ.

UPSC Recruitment 2025 Applications Invited For 40 Posts include Senior Veterinary Officer

ವಯಸ್ಸಿನ ಮಿತಿ

ಇಲ್ಲಿ ಒಂದೇ ತೆರನಾದ ಹುದ್ದೆಗಳ ನೇಮಕಾತಿಗೆ ಬದಲಾಗೆ ಬೇರೆ ಬೇರೆ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಹೀಗಾಗಿ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಭಿನನ್ತೆ ಇದೆ. ವಿಜ್ಞಾನಿ-ಬಿ ಹುದ್ದೆಗೆ ಒಬಿಸಿ ಅಭ್ಯರ್ಥಿಗಳ ವಯಸ್ಸು 38 ವರ್ಷ ನಿಗದಿ ಮಾಡಲಾಗಿದೆ. ವೈಜ್ಞಾನಿಕ ಅಧಿಕಾರಿ ಹುದ್ದೆಗೆ ಸಾಮಾನ್ಯ ವರ್ಗಕ್ಕೆ 30, ಎಸ್‌ಸಿ ಅಭ್ಯರ್ಥಿಗಳಿಗೆ 35 ವರ್ಷಗಳು ವಯೋಮಿತಿ ಹೊಂದಿರಬೇಕು. ಬೇರೆ ಬೇರೆ ಹುದ್ದೆಗಳಿಗೂ ಗರಿಷ್ಠ ವಯಸ್ಸು ನಿಗದಿ ಮಾಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಪರಿಶೀಲಿಸಿಕೊಂಡು ಅರ್ಜಿ ಸಲ್ಲಿಸಬೇಕು.

ಅರ್ಜಿ ಶುಲ್ಕದ ವಿವರ

ಮಹಿಳಾ ಅಭ್ಯರ್ಥಿಗಳು, ಪರಿಶಿಷ್ಟ ಜಾತಿ-ಪಂಗಡ ಹಾಗೂ ವಿಶೇಷ ಚೇತನರಿಗೆ ಅರ್ಜಿ ಶುಲ್ಕ ಇಲ್ಲ. ಇತರ ವರ್ಗಗಳ ಅಭ್ಯರ್ಥಿಗಳು 25 ರೂಪಾಯಿ ಮಾಸಿಕ ಶುಲ್ಕ ನಿಗದಿ ಪಡಿಸಲಾಗುತ್ತದೆ. ಎಸ್‌ಬಿಐನ ಯಾವುದೇ ಶಾಖೆಯಲ್ಲಿ ನಗದು ಠೇವಣಿ ಇಲ್ಲವೇ ಇಂಟರ್‌ನೆಟ್ ಬ್ಯಾಂಕಿಂಗ್ ಮೂಲಕ ನೀವು ಶುಲ್ಕ ಪಾವತಿಸಬಹುದಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+