UPSC Recruitment 2024: ಸರ್ಕಾರಿ ಉದ್ಯೋಗವಕಾಶ: 1206 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ವಿವರ

ಬೆಂಗಳೂರು, ಫೆಬ್ರವರಿ 17: ಕೇಂದ್ರ ಲೋಕಸೇವಾ ಆಯೋಗವು (UPSC) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿದೆ. ಈ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕೇಂದ್ರ ಸರ್ಕಾರಿ ಹುದ್ದೆ ಸೇರಬಯಸುವವರು ನಿಗದಿತ ದಿನಾಂಕದೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಕೇಂದ್ರ ಲೋಕಸೇವಾ ಆಯೋಗ (UPSC) ದಲ್ಲಿ ಒಟ್ಟು 1206 ಇಂಡಿಯನ್ ಫಾರೆಸ್ಟ್ ಸರ್ವೀಸ್, ಸಿವಿಲ್​ ಸರ್ವೀಸ್ ಪರೀಕ್ಷೆ ಹುದ್ದೆಗಳು ಖಾಲಿ ಇವೆ. ಇವುಗಳ ಭರ್ತಿಗಾಗಿ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಮುಂದಿನ ಮಾರ್ಚ್​ 5ರೊಳಗಾಗಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು ಎಂದು ಆಯೋಗ ತಿಳಿಸಿದೆ.

UPSC Recruitment 2024: UPSC Has Invited Application For 1206 Forest and Civil Service Exam, details

ನೇಮಕಾತಿ ಪ್ರಕ್ರಿಯೆ ಪೂರ್ಣ ಮಾಹಿತಿ

ಸಂಸ್ಥೆ ಹೆಸರು: ಕೇಂದ್ರ ಲೋಕಸೇವಾ ಆಯೋಗ (UPSC)
ಹುದ್ದೆ ಹೆಸರು: ಇಂಡಿಯನ್ ಫಾರೆಸ್ಟ್ ಸರ್ವೀಸ್, ಸಿವಿಲ್​ ಸರ್ವೀಸ್ ಪರೀಕ್ಷೆ ಹುದ್ದೆ
ಖಾಲಿ ಹುದ್ದೆ ಸಂಖ್ಯೆ: 1206
ಇಂಡಿಯನ್ ಫಾರೆಸ್ಟ್ ಸರ್ವೀಸ್ ಪರೀಕ್ಷೆ- 150
ಸಿವಿಲ್​ ಸರ್ವೀಸ್ ಪರೀಕ್ಷೆ -1056
ಪೋಸ್ಟಿಂಗ್: ಭಾರತದಲ್ಲಿ ಎಲ್ಲಿ ಬೇಕಾದರೂ
ಅರ್ಜಿ ಸಲ್ಲಿಕೆ ಕೊನೆ ದಿನಾಂಕ: 2024 ಮಾರ್ಚ್​ 5

ಶೈಕ್ಷಣಿಕ ಅರ್ಹತೆ

ಸಿವಿಲ್​ ಸರ್ವೀಸ್ ಪರೀಕ್ಷೆ ಹುದ್ದೆ ಹಾಗೂ ಇಂಡಿಯನ್ ಫಾರೆಸ್ಟ್ ಸರ್ವೀಸ್ ಪರೀಕ್ಷೆಗೆ ಬರೆಯುವವರು ಪದವಿ ಪೂರ್ಣಗೊಳಿಸಿರಬೇಕು ಎಂದು ಕೆಪಿಎಸ್‌ಸಿ ಅಧಿಸೂಚನೆ ಮಾಹಿತಿ ನೀಡಿದೆ.

ವಯಸ್ಸಿನ ಮಿತಿ ವಿವರ

ಕೇಂದ್ರ ಸರ್ಕಾರಿ ವ್ಯಾಪ್ತಿಯ ಈ ಮೇಲಿನ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳ ವಯಸ್ಸು ಆಗಸ್ಟ್ 1, 2024ಕ್ಕೆ ಕನಿಷ್ಠ 21 ವರ್ಷ ಮತ್ತು ಗರಿಷ್ಠ 32 ವರ್ಷ ಮೀರಿರಬಾರದು ಎಂದು ಕೇಂದ್ರ ಲೋಕಸೇವಾ ಆಯೋಗವು ಕಟ್ಟುನಿಟ್ಟಾಗಿ ಹೇಳಿದೆ.

ವಯಸ್ಸು ಸಡಿಲಿಕೆ ಮಾಹಿತಿ

ಅರ್ಜಿ ಸಲ್ಲಿಸುವ ಪರಿಶಿಷ್ಟ ಮತ್ತು ಪರಿಶಿಷ್ಟ ವರ್ಗದ ಅಭ್ಯರ್ಥಿಗಳಿಗೆ ಐದು ವರ್ಷ, ಇತರೆ ಹಿಂದುಳಿದ ವರ್ಗಗಳ (OBC) ಅಭ್ಯರ್ಥಿಗಳಿಗೆ 3 ವರ್ಷ ಇನ್ನು PwBD ಅಭ್ಯರ್ಥಿಗಳಿಗೆ ಒಟ್ಟು 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು ಎಂದು ತಿಳಿಸಲಾಗಿದೆ.

ಆಯ್ಕೆ ಹೇಗೆ?

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲು ಕೆಪಿಎಸ್‌ಸಿ ನಡೆಸುವ ಲಿಖಿತ ಪರೀಕ್ಷೆಗೆ ಹಾಜರಾಗಬೇಕು. ಬಳಿಕ ವೈಯಕ್ತಿಕ ಸಂದರ್ಶನದಲ್ಲಿ ಪಾಲ್ಗೊಳ್ಳಬೇಕು. ಇಲ್ಲಿ ಉತ್ತಮರನ್ನು ಸಂಸ್ಥೆ ಆಯ್ಕೆ ಮಾಡುತ್ತದೆ. ಆಯ್ಕೆ ಆಗುವವರಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಪೋಸ್ಟಿಂಗ್ ನೀಡಲಾಗುವುದು. ಮಾಸಿಕ ವೇತನ ಎಷ್ಟೆಂದು ನಿಗದಿ ಮಾಡಲಾಗಿಲ್ಲ.

UPSC Recruitment 2024: UPSC Has Invited Application For 1206 Forest and Civil Service Exam, details

ಶುಲ್ಕದ ವಿವರ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಜನಾಂಗದ ಮಹಿಳೆಗೆ/PwBD ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಇತರೆ ಎಲ್ಲ ಅಭ್ಯರ್ಥಿಗಳಿಗೂ 100/- ರೂಪಾಯಿ ನಿಗದಿ ಮಾಡಲಾಗಿದೆ. ಈ ಹಣವನ್ನು ಅಭ್ಯರ್ಥಿಗಳಿಗೆ ಆನ್‌ಲೈನ್ ಮೂಲಕ
ಪಾವತಿಸಬೇಕು.

ಈ ಅರ್ಜಿಯನ್ನು ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅಪ್ಲೈ ಸಲ್ಲಿಸಬೇಕು. ಅಧಿಸೂಚನೆಗೆ ಹಾಗೂ ಅರ್ಜಿ ಸಲ್ಲಿಸಲು ಇಲ್ಲಿನ ಲಿಂಕ್ (https://upsc.gov.in/exams-related-info/exam-notification) ಕ್ಲಿಕ್ ಮಾಡಬೇಕು. ಆನ್‌ಲೈನ್ ಮೂಲಕವೇ ಸಲ್ಲಿಸುವಂತೆ ತಿಳಿಸಿದೆ.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ಆರಂಭ: ಫೆಬ್ರವರಿ 14
ಅರ್ಜಿ ಸಲ್ಲಿಕೆ ಕೊನೆ ದಿನಾಂಕ: ಮಾರ್ಚ್​ 5
ಒಟಿಆರ್ ಮಾರ್ಪಡಿಸುವ ಕೊನೆ ದಿನ: ಮಾರ್ಚ್ 12
ಪರೀಕ್ಷೆ ಆರಂಭ ದಿನಾಂಕ: ಮೇ 26
ಅಭ್ಯರ್ಥಿಗಳು ಈ ಮಾಹಿತಿಯಲ್ಲಿ ಗೊಂದಲ, ದಿನಾಂಕಗಳಲ್ಲಿ ಅನುಮಾನ ಇದ್ದಲ್ಲಿ ತಾವು ದೂರವಾಣಿ ಸಂಖ್ಯೆ 011- 23385271/011 -23381125/011-23098543 ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ಕೇಂದ್ರ ಲೋಕಸೇವಾ ಆಯೋಗವು ಕೋರಿದೆ.

ಅಭ್ಯರ್ಥಿಗಳು ಕೊನೆ ದಿನಾಂಕವರೆಗೆ ಕಾಯದೇ ಸೂಕ್ತ ದಾಖಲೆಗಳ ಸಮೇತ ಈ ಕೂಡಲೇ ಅರ್ಜಿ ಸಲ್ಲಿಸಬೇಕು. ಅದಕ್ಕು ಮೊದಲು ಅಧಿಸೂಚನೆ ಓದಿಕೊಂಡರೆ ಹಾಗೂ ಇಲ್ಲಿನ ದಿನಾಂಕ ಮತ್ತು ಮಾಹಿತಿ ತಿಳಿದುಕೊಂಡರೆ ಒಳಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+