392 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಯುಪಿಎಸ್‌ಸಿ

ಬೆಂಗಳೂರು, ಜನವರಿ 11 : ಯುಪಿಎಸ್‌ಸಿ 392 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು 4 ಫೆಬ್ರವರಿ 2019 ಕೊನೆಯ ದಿನವಾಗಿದೆ.

ನ್ಯಾಷನಲ್ ಡಿಫೆನ್ಸ್ ಅಕಾಡಮಿ, ನಾವೆಲ್ ಅಕಾಡಮೆಯಲ್ಲಿನ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು ಭಾರತದ ಯಾವುದೇ ನಗರದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು.

ನ್ಯಾಷನಲ್ ಡಿಫೆನ್ಸ್ ಅಕಾಡೆಯಲ್ಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು 12ನೇ ತರಗತಿ 10+2 ಮಾದರಿಯಲ್ಲಿ ಪಾಸ್ ಆಗಿರಬೇಕು. ಅಥವ ರಾಜ್ಯ ಶಿಕ್ಷಣ ಮಂಡಳಿ ನಡೆಸುವ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿರಬೇಕು.

UPSC recruitment 2019 apply for 392 Various Posts

ಏರ್ ಪೋರ್ಸ್ ಎಂಡ್ ನಾವೆಲ್ ವಿಂಗ್ ಅಕಾಡಮೆಯಲ್ಲಿನ ಹುದ್ದೆಗೆ ಅರ್ಜಿ ಹಾಕುವವರು 10+2 ಮಾದರಿಯಲ್ಲಿ ಶಾಲೆ ಶಿಕ್ಷಣ ಪೂರ್ಣಗೊಳಿಸಿರಬೇಕು. ಅಥವ ರಾಜ್ಯ ಶಿಕ್ಷಣ ಮಂಡಳಿ ನಡೆಸುವ ಫಿಸಿಕ್ಸ್ ಮತ್ತು ಗಣಿತ ಪರೀಕ್ಷೆಯ ತತ್ಸಮಾನ ವಿದ್ಯಾರ್ಹತೆ ಪಡೆದಿರಬೇಕು.

ವಯೋಮಿತಿ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅವಿವಾಹಿತ ಪುರುಷರಾಗಿರಬೇಕು. 2 ಜುಲೈ 2000 ನಂತರ 1 ಜುಲೈ 2003ರೊಳಗೆ ಜನಿಸಿದವರಾಗಿರಬೇಕು.

ಅರ್ಜಿ ಶುಲ್ಕಗಳು : ಎಸ್‌ಸಿ/ಎಸ್‌ಟಿ/Sons of JCOs/NCOs/ORs ಯಾವುದೇ ಶುಲ್ಕ ಇಲ್ಲ. ಇತರ ಅಭ್ಯರ್ಥಿಗಳಿಗೆ 100 ರೂ. ಶುಲ್ಕ ನಿಗದಿ ಮಾಡಲಾಗಿದೆ.

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+