UPSCಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ಬೆಂಗಳೂರು, ಡಿಸೆಂಬರ್ 29: ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕೇಂದ್ರ ಲೋಕಸೇವಾ ಆಯೋಗ ((UPSC)ವು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
4 ಸಹಾಯಕ ಕಾನೂನು ಸಲಹೆಗಾರ, 3 ಅಸಿಸ್ಟೆಂಟ್ ಡೈರೆಕ್ಟರ್, 1 ಡೆಪ್ಯೂಟಿ ಡೈರೆಕ್ಟರ್, 1 ಅಸೋಸಿಯೇಟ್ ಪ್ರೊಫೆಸರ್ ಒಟ್ಟು 9 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ದಿನಾಂಕ 11 ಜನವರಿ, 2018ರೊಗಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

ಹುದ್ದೆಗಳು
1. ಸಹಾಯಕ ಕಾನೂನು ಸಲಹೆಗಾರ (4)
* ವಿದ್ಯಾರ್ಹತೆ: ಈ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯಗಳಲ್ಲಿ ಎಲ್ ಎಲ್ ಬಿ ಮತ್ತು ಎಲ್ ಎಲ್ ಎಮ್ ಪದವಿ ಪಡೆದಿರಬೇಕು.
* ವೇತನ ಶ್ರೇಣಿ: 67700 ರಿಂದ 208700 ರು. ತಿಂಗಳಿಗೆ.
* ವಯೋಮಿತಿ: ಗರಿಷ್ಟ 40 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
2. ಅಸಿಸ್ಟೆಂಟ್ ಡೈರೆಕ್ಟರ್
* ವಿದ್ಯಾರ್ಹತೆ: ಡಿಗ್ರಿಯಲ್ಲಿ ಯಾವುದಾದರೂ ಇಂಜಿನಿಯರಿಂಗ್ ಪೂರ್ಣಗೊಳಿಸರಬೇಕು.
* ವೇತನ ಶ್ರೇಣಿ: 15600 ರಿಂದ 39100 ರು. ತಿಂಗಳಿಗೆ
* ವಯೋಮಿತಿ: ಗರಿಷ್ಟ 35 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
3. ಡೆಪ್ಯೂಟಿ ಡೈರೆಕ್ಟರ್
* ವಿದ್ಯಾರ್ಹತೆ: ಡಿಗ್ರಿಯಲ್ಲಿ ಯಾವುದಾದರೂ ಇಂಜಿನಿಯರಿಂಗ್ ಪೂರ್ಣಗೊಳಿಸರಬೇಕು.
* ವೇತನ ಶ್ರೇಣಿ: 15600 ರಿಂದ 39100 ರು. ತಿಂಗಳಿಗೆ
* ವಯೋಮಿತಿ: ಗರಿಷ್ಟ 43 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
4. ಅಸೋಸಿಯೇಟ್ ಪ್ರೊಫೆಸರ್
* ವಿದ್ಯಾರ್ಹತೆ: ಮಾಸ್ಟರ್ ಆಫ್ ಇಂಜಿನಿಯರಿಂಗ್ ಅಥವಾ ಮಾಸ್ಟರ್ ಆಫ್ ಟೆಕ್ನಾಲಜಿ ತೇರ್ಗಡೆಯಾಗಿರಬೇಕು.
* ವೇತನ ಶ್ರೇಣಿ: 37400 ರಿಂದ 67000 ರು. ತಿಂಗಳಿಗೆ
* ವಯೋಮಿತಿ: ಗರಿಷ್ಟ 55 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.












Click it and Unblock the Notifications