ಯುಪಿಎಸ್ಇ ನೇಮಕಾತಿ: 581 ಇಂಜಿನಿಯರ್ ಹುದ್ದೆಗಳಿವೆ, ಅರ್ಜಿ ಹಾಕಿ
ಬೆಂಗಳೂರು, ಅಕ್ಟೋಬರ್ 01 : ಯುಪಿಎಸ್‌ಸಿ 581 ಇಂಜಿನಿಯರಿಂಗ್ ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು 22 ಅಕ್ಟೋಬರ್ 2018 ಕೊನೆಯ ದಿನವಾಗಿದೆ.
ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ವಿವಿಧ ಇಂಜಿನಿಯರಿಂಗ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಪ್ರಕಟಿಸಿದೆ. ಆಯ್ಕೆಯಾದವರು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು.
ಸಂಸ್ಥೆ ಹೆಸರು: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ)
ಒಟ್ಟು ಹುದ್ದೆಗಳು : 581
ಪರೀಕ್ಷೆ ಹೆಸರು : ಇಂಜಿನಿಯರಿಂಗ್ ಸರ್ವೀಸ್ ಪರೀಕ್ಷೆ 2019
ಕೊನೆ ದಿನಾಂಕ : 22 ಅಕ್ಟೋಬರ್ 2019

ವಿದ್ಯಾರ್ಹತೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಿವಿಎಲ್/ ಮೆಕ್ಯಾನಿಕಲ್/ ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್ ಹಾಗೂ ಟೆಲಿಕಮ್ಯೂನಿಕೇಷನ್ ಇಂಜಿನಿಯರಿಂಗ್ ಪದವಿ.
ವಯೋಮಿತಿ: 21 ರಿಂದ 30 ವರ್ಷ (ಜನವರಿ 01, 2019 ಅನ್ವಯ)
ಅರ್ಜಿ ಶುಲ್ಕ :
ಎಸ್ ಸಿ/ ಎಸ್ಟಿ/ ದಿವ್ಯಾಂಗ/ ಮಹಿಳೆ : ಯಾವುದೇ ಅರ್ಜಿ ಶುಲ್ಕ
ಇತರೆ : 200 ರು
ನೇಮಕಾತಿ : ಪೂರ್ವಭಾವಿ ಲಿಖಿತ ಪರೀಕ್ಷೆ, ಮುಖ್ಯ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನವಿರುತ್ತದೆ.
ಮುಖ್ಯ ದಿನಾಂಕ :
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : 22 ಅಕ್ಟೋಬರ್ 2018
ಅರ್ಜಿ ಶುಲ್ಕ ಸಲ್ಲಿಸಲು ಚಲನ್ ಸಲ್ಲಿಕೆಗೆ ಕೊನೆ ದಿನಾಂಕ : 21 ಅಕ್ಟೋಬರ್ 2018
ಪರೀಕ್ಷಾ ದಿನಾಂಕ : 6 ಜನವರಿ 2018
ಅರ್ಜಿ ಸಲ್ಲಿಕೆ, ಇನ್ನಿತರ ಮಾಹಿತಗಾಗಿ ಈ ಲಿಂಕ್ ಕ್ಲಿಕ್ ಮಾಡಿ












Click it and Unblock the Notifications