ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿಗಾಗಿ ಅರ್ಜಿ ಆಹ್ವಾನ
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾವು ಮ್ಯಾನೇಜರ್ (ಕ್ರೆಡಿಟ್ ಆಫೀಸರ್) ಮತ್ತು ಇತರ ವಿಶೇಷ ವಿಭಾಗಗಳಲ್ಲಿ ಬ್ಯಾಕ್‌ಲಾಗ್ ಹುದ್ದೆಯ ಅಡಿಯಲ್ಲಿ ಮೀಸಲಿರಿಸಿದ ವರ್ಗಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.
ಬೆಂಗಳೂರು, ಜನವರಿ 27: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾವು ಮ್ಯಾನೇಜರ್ (ಕ್ರೆಡಿಟ್ ಆಫೀಸರ್) ಮತ್ತು ಇತರ ವಿಶೇಷ ವಿಭಾಗಗಳಲ್ಲಿ ಬ್ಯಾಕ್‌ಲಾಗ್ ಹುದ್ದೆಯ ಅಡಿಯಲ್ಲಿ ಮೀಸಲಿರಿಸಿದ ವರ್ಗಗಳಿಗೆ ಅರ್ಜಿಗಳನ್ನು ಆಹ್ವಾನಿಸಿ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.
ಆಸಕ್ತ ಅಭ್ಯರ್ಥಿಗಳು ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ Unionbankofindia.co.in ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಅಭಿಯಾನದ ಮೂಲಕ ಒಟ್ಟು 42 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಜಿ ನಮೂನೆಯನ್ನು ಸಲ್ಲಿಸಲು ಫೆಬ್ರವರಿ 12 ಕೊನೆಯ ದಿನಾಂಕವಾಗಿದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಹುದ್ದೆಯ ವಿವರಗಳು:
1. ಮುಖ್ಯ ವ್ಯವಸ್ಥಾಪಕ (ಚಾರ್ಟರ್ಡ್ ಅಕೌಂಟೆಂಟ್): 3 ಹುದ್ದೆಗಳು
2. ಸೀನಿಯರ್ ಮ್ಯಾನೇಜರ್ (ಕ್ರೆಡಿಟ್ ಆಫೀಸರ್): 34 ಹುದ್ದೆಗಳು
3. ಮ್ಯಾನೇಜರ್ (ಕ್ರೆಡಿಟ್ ಆಫೀಸರ್): 5 ಹುದ್ದೆಗಳು

ಅರ್ಹತೆಯ ಮಾನದಂಡ:
1. ಮುಖ್ಯ ವ್ಯವಸ್ಥಾಪಕ (ಚಾರ್ಟರ್ಡ್ ಅಕೌಂಟೆಂಟ್): ಅಭ್ಯರ್ಥಿಯು ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ICAI) ಯ ಸಹಾಯಕ ಸದಸ್ಯರಾಗಿರಬೇಕು (ACA).
2. ಸೀನಿಯರ್ ಮ್ಯಾನೇಜರ್ (ಕ್ರೆಡಿಟ್ ಆಫೀಸರ್): ಅಭ್ಯರ್ಥಿಯು ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.
3. ಮ್ಯಾನೇಜರ್ (ಕ್ರೆಡಿಟ್ ಆಫೀಸರ್): ಅಭ್ಯರ್ಥಿಯು ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.
ವೇತನ ವಿವರಗಳು:
1. ಮುಖ್ಯ ವ್ಯವಸ್ಥಾಪಕ (ಚಾರ್ಟರ್ಡ್ ಅಕೌಂಟೆಂಟ್): 76010-2220/4-84890-2500/2-89890
2. ಸೀನಿಯರ್ ಮ್ಯಾನೇಜರ್ (ಕ್ರೆಡಿಟ್ ಆಫೀಸರ್): 63840-1990/5-73790- 2220/2-78230
3. ಮ್ಯಾನೇಜರ್ (ಕ್ರೆಡಿಟ್ ಆಫೀಸರ್): 48170-1740/1-49910- 1990/10-69810
ಅರ್ಜಿ ಸಲ್ಲಿಸುವುದು ಹೇಗೆ:
ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ Unionbankofindia.co.in ಮೂಲಕ ಅರ್ಜಿ ಸಲ್ಲಿಸಬಹುದು.












Click it and Unblock the Notifications